
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ' ಗಿಣಿರಾಮ' ಧಾರಾವಾಹಿ ಪ್ರಮುಖ ಪಾತ್ರಧಾರಿ ಶಿವರಾಮ್ ಅಲಿಯಾಸ್ ರಿತ್ವಿಕ್ ಕೆಲವು ದಿನಗಳಿಂದ ಕಾಣಿಸಿಕೊಳ್ಳದ ಕಾರಣ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ. ಪೋಸ್ಟ್ ಹಾಕುವ ಮೂಲಕ ಅನಾರೋಗ್ಯದ ಬಗ್ಗೆ ತಿಳಿಸಿದ್ದಾರೆ.
'ನನ್ನ ಆರೋಗ್ಯಕ್ಕೆ ಸಂಬಂಧ ಪಟ್ಟ ವಿಚಾರದ ಬಗ್ಗೆ ಸಾಕಷ್ಟು ಮೆಸೇಜ್‌ಗಳು ಬರುತ್ತಿವೆ. ನನಗೆ ಟೈಫಾಯಿಡ್ ಇದೆ. ದೇವರ ದಯೆ ಹಾಗೂ ನಿಮ್ಮರ ಪ್ರೀತಿಯಿಂದ ನಾನು ಆರೋಗ್ಯವಾಗಿರುವೆ. ಸುಧಾರಿಸಿಕೊಂಡಿರುವೆ,' ಎಂದು ಬರೆದುಕೊಂಡಿದ್ದಾರೆ.
ತಮ್ಮ ಹಲ್ಲಿನಿಂದ ಅವಕಾಶ ಕಳೆದುಕೊಂಡ 'ಗಿಣಿರಾಮ' ಮಹತಿ; ಪ್ರತಿಕ್ರಿಯೆ ಹೇಗಿದೆ ಗೊತ್ತಾ?
ಹೈದರಾಬಾದ್‌ನ ರಾಮೋಜಿ ಫಿಲ್ಮಂ ಸಿಟಿಯಲ್ಲಿ ಚಿತ್ರೀಕರಣ ಮಾಡುವಾಗ ರಿತ್ವಿಕ್ ಆರೋಗ್ಯದಲ್ಲಿ ಏರುಪೇರು ಕಂಡು ಬಂತು. ಚಿತ್ರೀಕರಣ ಮುಗಿಸುಷ್ಟರಲ್ಲಿ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ತಕ್ಷಣವೇ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ, ಟೈಫಾಯಿಡ್ ಎಂದು ತಿಳಿದು ಬಂದಿತ್ತು. ಈಗ ರಿತ್ವಿಕ್ ಚೇತರಿಸಿಕೊಂಡಿರುವ ಕಾರಣ ಮತ್ತೆ ಚಿತ್ರೀಕರಣಕ್ಕೆ ಮರಳಲಿದ್ದಾರೆ. ಇದು ಪಕ್ಕಾ ಉತ್ತರ ಕರ್ನಾಟಕ ಭಾಗದ ಭಾಷಾ ಶೈಲಿಯಲ್ಲಿದ್ದು, ಕಳೆದು ಮೂರ್ನಾಲ್ಕು ವಾರಗಳಿಂದ ಟಿಆರ್‌ಪಿ ಪಟ್ಟಿಯಲ್ಲಿ 5 ರೊಳಗೆ ಸ್ಥಾನ ಪಡೆದುಕೊಳ್ಳುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.