
ಸೂಪರ್ ಸಂಡೆ ವಿತ್ ಸುದೀಪ್ ಬಿಗ್ ಬಾಸ್ ಸೀಸನ್ 8 ಕಾರ್ಯಕ್ರಮದಲ್ಲಿ ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರ ಬಗ್ಗೆಯೂ ಚರ್ಚೆ ಮಾಡಲಾಗುತ್ತದೆ. ಕೆಲವು ವಾರಗಳಿಂದ ಬಿಬಿ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿ ಬಗ್ಗೆ ಮಾತುಕತೆ ಶುರುವಾಗಿದೆ. ಈ ವಿಚಾರ ಬಗ್ಗೆ ಸುದೀಪ್ ಕೂಡ ಕಾಲೆಳೆದು ಮಾತನಾಡಿದ್ದಾರೆ.
ದಿವ್ಯಾ , ಅರವಿಂದ್ ಬೆನ್ನ ಹಿಂದೆ ಮಾತನಾಡಿಕೊಂಡ ಸದಸ್ಯರು; ಶುಭಾ ಪೂಂಜಾ ನಂತರ ಊಟ ಫಿಕ್ಸ್?
'ಅರವಿಂದ್, ನಿಮ್ಮ ಪ್ರಕಾರ ಈ ಮನೆಯಲ್ಲಿ ಯಾರು ಅತಿ ಹೆಚ್ಚು ಸಮಯವನ್ನ ಬಾತ್‌ರೂಮ್‌ನಲ್ಲಿ ಕಳೆಯುತ್ತಾರೆ. ಸ್ನಾನ ಮಾಡಲು ಹೋದರೆ ಒಂದು ಆಯಸ್ಸೇ ಆಗೋಗುತ್ತೆ,' ಎಂಬುದಾಗಿ ಸುದೀಪ್ ಪ್ರಶ್ನೆ ಮಾಡಿದರು. ಕೆಲು ನಿಮಿಷಗಳ ಕಾಲ ಯೋಚಿಸುತ್ತಿದ್ದ ಅರವಿಂದ್, ಇಬ್ಬರ ಹೆಸರನ್ನು ರಿವೀಲ್ ಮಾಡುತ್ತಾರೆ. ಒಂದು ದಿವ್ಯಾ ಉರುಡುಗ, ಮತ್ತೊಬ್ಬರು ವೈಷ್ಣವಿ.
ಇಬ್ಬರು ಹೆಚ್ಚಿನ ಸಮಯ ಬಾತ್‌ರೂಮ್‌ನಲ್ಲಿ ಕಳೆಯುತ್ತಾರೆ. ಆದರೆ ಅವರಿಬ್ಬರ ನಡುವೆ ದಿವ್ಯಾ ಹೆಚ್ಚಿನ ಸಮಯ ಕಳೆಯುತ್ತಾರೆ, ಎಂದಿದ್ದಾರೆ ಡಾಕಾ ರೇಸರ್. 'ಅರವಿಂದ್ ಸುಮ್ಮನೆ ನನ್ನ ಬಗ್ಗೆ ಹೀಗೆಲ್ಲಾ ಹೇಳುತ್ತಾರೆ. ಇದು ಸುಳ್ಳು,' ಎಂದು ದಿವ್ಯಾ ವಾದ ಮಾಡುತ್ತಾರೆ. 'ಇನ್ನು ಮುಂದೆ ನಿಮ್ಮ ಬಗ್ಗೆ ಸುಳ್ಳು ಹೇಳುವ ವ್ಯಕ್ತಿ ಜೊತೆ ಕೂರಬೇಡಿ, ಮಾತನಾಡಬೇಡಿ,' ಎಂದು ತಮಾಷೆಯಿಂದ ಸುದೀಪ್ ದಿವ್ಯಾರ ಕಾಲೆಳೆಯುತ್ತಾರೆ. ಜೋಡಿ ಟಾಸ್ಕ್ ಮುಗಿದರೂ ದಿವ್ಯಾ ಹಾಗೂ ಅರವಿಂದ್ ಒಟ್ಟಿಗೆ ಇರುವುದು ನೋಡಿದರೆ, ಮುಂದಿನ ಯುವ ದಸರಾ ಸಮಯದಲ್ಲಿ ಮದುವೆ ನಡೆಯಲಿದೆ, ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.