ಬಿರಿಯಾನಿ ವ್ಯಾಪಾರಿಯಾದ ಕಿಶನ್ ಈಗ ಅಡುಗೆ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರೇ ಕೈಯಾರೆ ತಯಾರಿಸಿದ ಬಿರಿಯಾನಿ ವಿಡಿಯೋ ಸಿಕ್ಕಾಪಟ್ಟೆ ವೈರಲ್....
ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ದೊನ್ನೆ ಬಿರಿಯಾನಿ ಅಂಗಡಿ ತೆರೆದ ಬಿಗ್ ಬಾಸ್ ಸ್ಪರ್ಧಿ ಕಿಶನ್ ಅದ್ಧೂರಿಯಾಗಿ ಓಪನಿಂಗ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ತಮಗೆ ಪರಿಚವಿರುವ ತಾರಾ ಬಳಗವನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಕಿಶನ್ ಡ್ಯಾನ್ಸರ್ ಎಂಬ ವಿಚಾರ ಎಲ್ಲರಿಗೂ ಗೊತ್ತು. ಆದರೆ ಗುಡ್ ಕುಕ್ ಅಂತ ಯಾರಿಗಾದ್ರೂ ಗೊತ್ತಿತ್ತಾ?
ಬಿಗ್ ಬಾಸ್ ಕಿಶನ್ ಬಳಿಕ 'ಬಿರಿಯಾನಿ' ಬ್ಯುಸನೆಸ್‌ಗೆ ಕೈ ಹಾಕಿದ ನಟ ಚಂದನ್!
ಕಿಶನ್ ವಿಡಿಯೋ:
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಇರುವ ಕಿಶನ್ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿ ಮಾಡಿ ಅಪ್ಲೋಡ್ ಮಾಡುತ್ತಿರುತ್ತಾರೆ. ಕಿಶನ್ ಎಷ್ಟು ಚಂದ ಕುಣಿತಾರೋ ಅಷ್ಟೇ Dignified ಆಗಿರುತ್ತದೆ ಅವರು ಧರಿಸಿರುವ ಔಟ್‌ಫಿಟ್‌ಗಳು. ಇಷ್ಟೆಲ್ಲಾ ಮಾಡ್ತೀರೋ ನೀವು ಅಡುಗೆ ಯಾಕೆ ಮಾಡಲ್ಲ? ವ್ಯಾಪಾರ ಮಾಡಿದ್ರೆ ಸಾಕಾ? ಅಡುಗೆ ಮಾಡಬೇಕು ಅಲ್ವಾ ಎಂದು ಪ್ರಶ್ನಿಸುತ್ತಿದ್ದ ನೆಟ್ಟಿಗರಿಗೆ ಕಿಶನ್ ವಿಡಿಯೋ ಮೂಲಕ ಉತ್ತರ ನೀಡಿದ್ದಾರೆ.
'ನಾನು ಪ್ರೀತಿಯಿಂದ ಅಡುಗೆ ಮಾಡಲು ನಿರ್ಧರಿಸಿರುವೆ. ದಯವಿಟ್ಟು ಒಮ್ಮೆ ಭೇಟಿ ನೀಡಿ. ನಿಮಗಾಗಿ ನಾನು ತಯಾರಿಸಿದ ಬಿರಿಯಾನಿ ರುಚಿ ನೋಡಿ,' ಎಂದು ಕಿಶನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಿಶನ್ ಮಾತ್ರವಲ್ಲದೇ ಲಕ್ಷ್ಮಿ ಬಾರಮ್ಮ, ಪ್ರೇಮಬರಹ ಖ್ಯಾತಿಯ ಚಂದನ್ ಕುಮಾರ್ ಕೂಡ ಕೆಲವು ದಿನಗಳ ಹಿಂದೆ ಬೆಂಗಳೂರಿನ ಸಹಕಾರ ನಗರದಲ್ಲಿ ದೊನ್ನೆ ಬಿರಿಯಾನಿ ಅಂಗಡಿ ಶುರು ಮಾಡಿದ್ದಾರೆ. ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮೊದಲಿಂದಲೂ ದೇಸೆ ಕ್ಯಾಂಪ್ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ನಮ್ಮ ಕನ್ನಡದ ಕಲಾವಿದರು ಹೊಟೇಲ್ ಉದ್ಯಮದಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ನೋಡಿದರೆ ಸಂತೋಷವಾಗುತ್ತದೆ.