
ಬಿಗ್ ಬಾಸ್ ಮನೆಯಲ್ಲಿ ಮತ್ತೆ ತಂಡಗಳ ರಚನೆಯಾಗಿದೆ. ಹೋರಾಟ ಶುರುವಾಗಿದೆ. ಯಥಾ ಪ್ರಕಾರ ಈ ಬಾರಿಯೂ ಚಂದನ್ ಆಚಾರ್ ಮತ್ತು ಚೈತ್ರಾ ಕೊಟ್ಟೂರು ನಾಮಿನೇಟ್ ಆಗಿದ್ದಾರೆ.
ಒಂದು ತಂಡಕ್ಕೆ ಶೈನ್ ಶೆಟ್ಟಿ ನಾಯಕರಾದರೆ ಇನ್ನೊಂದು ತಂಡಕ್ಕೆ ಕಿಶನ್ ನಾಯಕ. ಮನೆಯಲ್ಲಿ ತೆಂಗಿನಕಾಯಿ ಟಾಸ್ಕ್ ನೀಡಲಾಗಿತ್ತು. ಹೊರಗಿನಿಂದ ತೆಂಗಿನಕಾಯಿ ಬರುತ್ತದೆ ಅದನ್ನು ಸಂಗ್ರಹಿಸಿ ಸಿಪ್ಪೆ ಸುಲಿಯಬೇಕು ಎಂಬ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಗೆದ್ದ ಶೈನ್ ಶೆಟ್ಟಿ ತಂಡ ಮೊದಲ ಕೀ ಪಡೆದುಕೊಂಡಿತು.
ಮನೆಯೊಳಗಿದ್ದರೂ ಶ್ರೀಮನ್ನಾರಾಯಣ ಸ್ಟೆಪ್ ಹಾಕಿದ ಚಂದನ್ ಆಚಾರ್
ಇದೆಲ್ಲದಕ್ಕಿಂತ ಮುಖ್ಯವಾಗಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಸರ್ ಪ್ರೈಸ್ ಕೊಟ್ಟರು. ಮನೆಯವರನ್ನು ರಂಜಿಸಲು ಮನೆಯೊಳಕ್ಕೆ ಜೋಕರ್ ಗಳ ತಂಡ ಎಂಟ್ರಿ ಕೊಟ್ಟಿತು. ಜೋಕರ್ ಗಳು ಮುಖಕ್ಕೆ ಬಣ್ಣ ಬಳಿದುಕೊಂಡು ಬಂದಿದ್ದರು.
ಇದರಲ್ಲಿ ಬಿಗ್ ಬಾಸ್ ಹೊಸದೊಂದು ಗುಟ್ಟನ್ನು ಅಡಗಿಸಿ ಇಟ್ಟಿದ್ದಾರೆ. ಇವತ್ತು ಅದು ಬಹಿರಂಗವಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಜೋಕರ್ ಗಳೊಂದಿಗೆ ಮನೆ ಮಂದಿ ಆಟಬವಾಡಿದರೂ ಯಾರೂ ಆ ಪರಿಚಯದ ಜೋಕರ್ ಎಂಬ ವಿಚಾರ ಬಹಿರಂಗ ಆಗಲಿಲ್ಲ. ಬುಧವಾರದ ಎಪಿಸೋಡ್ ನಲ್ಲಿ ಈ ವಿಚಾರ ಬಹಿರಂಗ ಆಗಲಿದ್ದು ಮನೆ ಮಂದಿ ಎಲ್ಲ ಹತ್ತಿರವಿದ್ದು ಗುರುತಿಸಲಾಗಲಿಲ್ಲ ಎಂದು ಹೊಟ್ಟೆ ಉರಿದುಕೊಳ್ಳಲಿದ್ದಾರೆ.
ಇದೆಲ್ಲದರ ನಡುವೆ ಜೋಕರ್ ಗಳಲ್ಲೆ ಅತಿ ಮುಖ್ಯವಾದ ಜೋಕರ್‌ಗೆ ಕಟ್ಟುನಿಟ್ಟಿನ ದೀಪಿಕಾ ದಾಸ್ ಕಿಸ್ ಕೊಟ್ಟಿದ್ದು ಮಂಗಳವಾರದ ಎಪಿಸೋಡ್ ಹೈಲೈಟ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.