
ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ನವೀನ್ ಕೃಷ್ಣ ಹೊಸ ಧಾರಾವಾಹಿಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಈ ಧಾರಾವಾಹಿಗೆ 'ಯಡಿಯೂರು ಸಿದ್ಧಲಿಂಗೇಶ್ವರ' ಎಂಬ ಶೀರ್ಷಿಗೆ ಇಡಲಾಗಿದ್ದು, ಬಿಗ್ ಬಾಸ್ ಖ್ಯಾತಿಯ ಹರೀಶ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಗುಡ್ ನ್ಯೂಸ್ ಕೊಟ್ಟ ಬಿಗ್ ಬಾಸ್ ಹರೀಶ್ ರಾಜ್ ದಂಪತಿ!
ಧಾರಾವಾಹಿ ಚಿತ್ರೀಕರಣ ಪ್ರಾರಂಭವಾಗಿದೆ. ಕೆಲವೊಂದು ಫೋಟೋ ಹಾಗೂ ವಿಡಿಯೋಗಳನ್ನು ಹರೀಶ್ ರಾಜ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಿರಿಯ ನಟ ಶಿವರಾಮ್ ಅವರೂ ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಧಾರಾವಾಹಿಯಲ್ಲಿ ಯುವ ಮಲ್ಲಿಕಾರ್ಜುನನ ಪಾತ್ರದಲ್ಲಿ ಹರೀಶ್ ರಾಜ್ ಅಭಿನಯಿಸಲಿದ್ದು, ಅಧ್ಯಾತ್ಮಿಕ ಒಲವು ಮತ್ತು ಲೌಕಿಕ ಜ್ಞಾನದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಲಾಗುತ್ತದೆ.
ಬೆಳ್ಳಿ ತೆರೆಯ ಅದ್ಭುತ ನಟನಾಗಿ ಮಿಂಚುತ್ತಿದ್ದ ಹರೀಶ್ ರಾಜ್ ಅವರಿದೆ ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಕಿರುತೆರೆಯಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಸಿನಿಮಾಗಳಲ್ಲಿ ಹೆಚ್ಚಾಗಿ ಭಕ್ತಿ ಪ್ರಧಾನ ಪಾತ್ರಗಳಲ್ಲಿ ಮಿಂಚುತ್ತಿದ್ದು, ಕಿರುತೆರೆಯಲ್ಲಿ ಇದೇ ಮೊದಲು ಇಂಥ ಪಾತ್ರಕ್ಕೆ ಸೈ ಎಂದು ಹೇಳಿಕೊಂಡಿದ್ದಾರೆ.
ಹರೀಶ್ ರಾಜ್‌ಗೂ ಸಿಗ್ತು ಕಿಚ್ಚನಿಂದ ದುಬಾರಿ ಗಿಫ್ಟ್?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾ ಭಾರತ ರಿಯಾಲಿಟಿ ಶೋನಲ್ಲಿ ಹರೀಶ್ ರಾಜ್ ನಿರೂಪಣೆ ಮಾಡುತ್ತಿದ್ದಾರೆ. ಪ್ರತಿ ವೀಕೆಂಡ್‌ನಲ್ಲಿಯೂ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಹರೀಶ್ ರಾಜ್ ಕಿರುತೆರೆ ವೀಕ್ಷಕರಿಗೆ ಮನೋರಂಜನೆ ನೀಡುವುದರಲ್ಲಿ ಅನುಮಾವಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.