ಶ್ರೀಮಂತ ಬೇಡ, ನಿರುದ್ಯೋಗಿಯನ್ನು ಮದುವೆಯಾಗೋಕೆ ನನಗೆ ಇಷ್ಟ ಎಂದ ತಾನ್ಯಾ ಮಿತ್ತಲ್‌!

Published : Sep 15, 2025, 11:11 PM IST
Tanya mittal Bigg Boss 19

ಸಾರಾಂಶ

Tanya Mittal Want to Marry an Unemployed Man ಬಿಗ್‌ಬಾಸ್‌ 19ನಲ್ಲಿ ತನ್ನ ಬಡಾಯಿ ಮಾತುಗಳಿಂದಲೇ ಸುದ್ದಿಯಲ್ಲಿರುವ ತಾನ್ಯಾ ಮಿತ್ತಲ್‌ರ ಹಳೆಯ ವಿಡಿಯೋವೊಂದು ವೈರಲ್‌ ಆಗಿದೆ. ಇದರಲ್ಇ ಆಕೆ ನನಗೆ ನಿರುದ್ಯೋಗಿ ಯುವಕನನ್ನು ಮದುವೆಯಾಗೋಕೆ ಇಷ್ಟ ಎಂದು ಹೇಳಿದ್ದಾರೆ. 

ಬಿಗ್‌ಬಾಸ್‌ 19 ಸ್ಪರ್ಧಿ ತಾನ್ಯಾ ಮಿತ್ತಲ್‌, ದೊಡ್ಮನೆಯಲ್ಲಿ ಕೆಲವೊಂದು ಬಿಗ್‌ ಸ್ಟೇಟ್‌ಮೆಂಟ್‌ ನೀಡುತ್ತಿದ್ದಾರೆ. ಸ್ನಾನ ಮಾಡೋಕೆ ಮುಂಚೆ ಬಾತ್‌ರೂಮ್‌ಗೆ ಏನನ್ನು ತೆಗೆದುಕೊಂಡು ಹೋಗಬೇಕು ಅನ್ನೋದನ್ನೂ ತಿಳಿದಿಲ್ಲದೇ ಇರುವಂತೆ ತೋರಿಸಿಕೊಳ್ಳುತ್ತಿದ್ದಾರೆ. ಇನ್ನು ಮಹಾಕುಂಭದಲ್ಲಿ ಬಾಡಿಗಾರ್ಡ್‌ಗಳ ಜೊತೆಗಿನ ಆಕೆಯ ಸುತ್ತಾಟ ವೈರಲ್‌ ಆಗಿದ್ದವು. ಇಡೀ ಕುಟುಂಬ ನನ್ನನ್ನು ಬಾಸ್‌ ಎಂದು ಕರೆಯುತ್ತದೆ ಎಂದು ಬಿಗ್‌ ಬಾಸ್‌ ಮನೆಯಲ್ಲೇ ಹೇಳಿದ್ದರೆ, ಇನ್ನೊಮ್ಮೆ ತಮ್ಮ ಮನೆ ಯಾವುದೇ 5 ಸ್ಟಾರ್‌, 7 ಸ್ಟಾರ್‌ ಹೋಟೆಲ್‌ಗಿಂತ ಚೆನ್ನಾಗಿದೆ. ಮನೆಯಲ್ಲಿ ಒಂದು ಫ್ಲೋರ್‌ ಇಡೀ ತನ್ನ ಬಟ್ಟೆಗಳಿಗೆ ಮೀಸಲಾಗಿದೆ ಎಂದು ಪುಂಗಿ ಊದಿದ್ದರು. ತಾವು ಗ್ವಾಲಿಯರ್‌ನ ಉದ್ಯಮಿ ಎಂದು ಹೇಳಿಕೊಂಡಿದ್ದಾರೆ ಮತ್ತು ಮಹಾ ಕುಂಭ ಯಾತ್ರೆಯ ನಂತರ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದ್ದಾಗಿ ತಿಳಿಸಿದ್ದಾರೆ.

ತಾನ್ಯಾ ಮಿತ್ತಲ್‌ ಮದುವೆಯಾಗುವ ವ್ಯಕ್ತಿ ಯಾರು?

ನ್ಯೂಸ್‌ಕೂಪ್‌ ವೆಬ್‌ಸೈಟ್‌ಗೆ ನೀಡಿದ ಹಳೆಯ ಸಂದರ್ಶನವೊಂದರಲ್ಲಿ ತಾನ್ಯಾ ಮಿತ್ತಲ್‌, ತಾವು ಮದುವೆಯಾಗುವ ಹುಡುಗ ಯಾವ ರೀತಿ ಇರಬೇಕು ಎಂದು ತಿಳಿಸಿದ್ದರು. ಆ ವ್ಯಕ್ತಿ ನಿರುದ್ಯೋಗಿಯಾಗಿರಬೇಕು ಎಂದು ಹೇಳಿದ್ದ ತಾನ್ಯಾ ಮಿತ್ತಲ್‌ ನನ್ನ ಪಾಲಗೆ ಪ್ರೀತಿ ಒಂದೇ ಮುಖ್ಯ ಎಂದಿದ್ದರು.' ನಾನು ಬಯಸುವ ಪುರುಷ ಜಗತ್ತಿನಲ್ಲಿ ಇದ್ದಾನೆಯೇ ಎಂದು ನನಗೆ ತಿಳಿದಿಲ್ಲ. ಆದರೆ, ನಿರುದ್ಯೋಗಿ ವ್ಯಕ್ತಿಯನ್ನು ಮದುವೆಯಾಗಲು ನನಗೆ ಅಭ್ಯಂತರವಿಲ್ಲ. ಸಾರ್ವಜನಿಕವಾಗಿ ಅವರ ಕಾಲುಗಳನ್ನು ಮಸಾಜ್ ಮಾಡಲು ಅಥವಾ ಅವರ ಕಾಲುಗಳನ್ನು ಸ್ಪರ್ಶಿಸಲು ನನಗೆ ಅಭ್ಯಂತರವಿಲ್ಲ. ಯಾವುದೇ ಸಂಬಂಧದಲ್ಲಿ ದೊಡ್ಡದು ಅಥವಾ ಸಣ್ಣದು ಎಂಬಂತಹ ವಿಚಾರವೇ ಇಲ್ಲ ಎಂದು ನಾನು ನಂಬುತ್ತೇನೆ' ಎಂದಿದ್ದರು.

ತಾನ್ಯಾ ಮಿತ್ತಲ್‌ಗೆ ಈ ರೀತಿಯ ಗಂಡ ಬೇಕಂತೆ!

ತನ್ನನ್ನು ತಾನು ಅತ್ಯಂತ ಕೆಟ್ಟ ರೋಮ್ಯಾಂಟಿಕ್‌ ವ್ಯಕ್ತಿ ಎನ್ನುವ ತಾನ್ಯಾ ಮಿತ್ತಲ್‌, ತನ್ನ ಮಾಜಿ ಬಾಯ್‌ಫ್ರೆಂಡ್‌ಗಾಗಿ ಮಾಡಿದ್ದನ್ನು ನೆನಪಿಸಿಕೊಂಡಿದ್ದರು. 'ನಾನು ರಿಲೇಷನ್‌ಷಿಪ್‌ನಲ್ಲಿದ್ದಾಗ, ಅತ್ಯಂತ ಕೆಟ್ಟ ರೋಮ್ಯಾಂಟಿಕ್‌ ವ್ಯಕ್ತಿ ಆಗಿದ್ದೆ. ನನ್ನ ಗೆಳೆಯ ಊಟ ಮುಗಿಸಿದ ನಂತರ ಅವನ ಕೈಗಳನ್ನು ಒರೆಸಲು ನಾನು ಟವಲ್ ತರುತ್ತಿದ್ದೆ. ಮತ್ತು ನನ್ನ ಗಂಡನ ವಿಷಯದಲ್ಲೂ ನಾನು ಅದೇ ರೀತಿ ಮಾಡುತ್ತೇನೆ ಎಂದು ನನಗೆ ತಿಳಿದಿದೆ. ನನ್ನ ಗಂಡ ರಾಜನಂತೆ ಇರಬೇಕು ಎಂದು ನಾನು ಬಯಸುತ್ತೇನೆ' ಎಂದು ತಾನ್ಯಾ ಹೇಳಿದ್ದರು.

ನನಗೆ ಶ್ರೀಮಂತ ವ್ಯಕ್ತಿಯನ್ನ ಮದುವೆಯಾಗೋಕೆ ಇಷ್ಟವಿಲ್ಲ. ಇಂದು ನನ್ನ ಬಳಿ ಮೂರು ಕಾರ್ಖಾನೆಗಳಿವೆ. ಬೇಕಾದಷ್ಟು ಹಣ ಇದೆ. ಇಷ್ಟೆಲ್ಲಾ ಇದ್ದ ಬಳಿಕ, ನನಗೋಸ್ಕರ ಮತ್ತೆ ಹಣವನ್ನೇ ದುಡಿಯುವ ವ್ಯಕ್ತಿ ನನಗೆ ಬೇಡ. ಇದು ತಪ್ಪು ಅನಿಸುತ್ತದೆ. ಸ್ವಲ್ಪ ಬದಲಾವಣೆ ಎನ್ನುವಂತೆ, ಮನೆಗೆ ದುಡಿಯಬೇಕು ಅನ್ನೋ ಯೋಚನೆಯೇ ಇಲ್ಲದಂಥ ವ್ಯಕ್ತಿ ಇರಬೇಕು. ನಾನೇ ದುಡಿದು, ನನ್ನ ಗಂಡನಿಗೆ ನಾನೇ ಅಡುಗೆ ಮಾಡುತ್ತೇನೆ. ಎಲ್ಲಾ ರೀತಿಯ ಮನೆ ಕೆಲಸಗಳೂ ನನಗೆ ಗೊತ್ತಿದೆ. ಫೆಮಿನಿಸಂ ಅನ್ನೋ ಹೆಸರಲ್ಲಿ ನಾವು ಗಂಡಂದಿರರಿಗಿಂತ ಮುಂದೆ ಹೋಗಲು ಪ್ರಾರಂಭ ಮಾಡಿದ್ದೇವೆ. ನನ್ನ ಪ್ರಕಾರ ಇದು ತಪ್ಪು. ಸೀತಾ ಮಾತೆ ಕೂಡ ಭಗವಾನ್‌ ರಾಮನ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಿದ್ದರು ಎಂದು ತಾನ್ಯಾ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!
ವೈಷ್ಣವಿ ಗೌಡ Romantic ಅಂತೆ, ಆದ್ರೆ ಮೊದ್ಲು I Love You ಹೇಳಿದ್ದು ಮಾತ್ರ ಗಂಡ…