
ಈ ಸುಂದರಿ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ (Bigg Boss) ಒಂದಲ್ಲ ಎರಡು ಬಾರಿ ಕಾಣಿಸಿಕೊಂಡಿದ್ದಾಳೆ. ದೊಡ್ಡ ಪರದೆಯಲ್ಲಿ (Tollywood) ಮಿಂಚದಿದ್ದರೂ, ಕಿರುತೆರೆಯಲ್ಲಿ (Small Screen) ಉತ್ತಮ ಅವಕಾಶಗಳು ಬೇಕಾದಷ್ಟು ಸಿಗುತ್ತಿವೆ. ಇತ್ತೀಚೆಗೆ ಈ ಸುಂದರಿ ತನ್ನ ಬ್ರೇಕಪ್ ಕಥೆಯನ್ನು ಬಹಿರಂಗಪಡಿಸಿದ್ದಾಳೆ.
ಟಾಲಿವುಡ್ ಕಿರುತೆರೆಯಲ್ಲಿ ಹೆಸರು ಮಾಡುತ್ತಿರುವ ತೆಲುಗು ಹುಡುಗಿಯರಲ್ಲಿ ಈ ಸುಂದರಿ ಕೂಡ ಒಬ್ಬರು. ಮೊದಲು ನಿರೂಪಕಿಯಾಗಿ ತನ್ನ ವೃತ್ತಿಜೀವನ ಆರಂಭಿಸಿದ್ದ ಈಈಕೆ ಬಳಿಕ ಕೆಲವು ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ಸದ್ದು ಮಾಡಿದರು. ಆದರೆ, ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಾಲಿಟ್ಟಾಗ, ಈಕೆಯ ಲುಕ್‌ನ ಬಗ್ಗೆ ಯುವಕರಲ್ಲಿ ಕ್ರೇಝ್ ಸಾಕಷ್ಟು ಹೆಚ್ಚಾಗಿತ್ತು.
ಒಂದಲ್ಲ ಎರಡು ಬಾರಿ ಬಿಗ್ ಬಾಸ್ ಮನೆಗೆ ಹೋಗಿದ್ದ ಈ ಚೆಲುವೆ ಈ ಧಾರವಾಹಿಗಳು ಹಾಗೂ ಒಟಿಟಿ ಕಾರ್ಯಕ್ರಮಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕೆಲವೊಂದು ಚಲನಚಿತ್ರಗಳಲ್ಲಿಯೂ ಅವರು ನಟಿಸಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲೂ ತಕ್ಕ ಮಟ್ಟಿಗೆ ಉತ್ತಮ ಅಭಿಮಾನಿಗಳನ್ನೂ ಈಕೆ ಗಳಿಸಿದ್ದಾರೆ. ಇಂಥ ಚೆಲುವು ಇತ್ತೀಚೆಗೆ ತನ್ನ ಬ್ರೇಕಪ್ ಕಥೆಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
'ನಾನು ಒಂಬತ್ತನೇ ತರಗತಿಯಲ್ಲಿದ್ದಾಗ ಪ್ರೀತಿಯಲ್ಲಿ ಬಿದ್ದಿದ್ದೆ. ಆ ಸಮಯದಲ್ಲಿ ನನ್ನ ಸೋದರ ಮಾವ ವಿಜಯವಾಡದಲ್ಲಿ ವಾಸಿಸುತ್ತಿದ್ದ. ನಾನು ತಂದೂರಿನಲ್ಲಿ ವಾಸಿಸುತ್ತಿದ್ದೆ. ನನ್ನ ಇಂಟರ್ಮೀಡಿಯೇಟ್ ಮುಗಿಸಿದ ನಂತರ, ನಾನು ಮನೆಯಿಂದ ಹೈದರಾಬಾದ್‌ಗೆ ಬಂದೆ. ಆಗ ನನ್ನ ಸೋದರ ಮಾವನಿಗೂ ಕೆಲಸ ಸಿಕ್ಕಿತು. ಇದರೊಂದಿಗೆ, ನಾವಿಬ್ಬರೂ ಒಂದೇ ಕೋಣೆಯಲ್ಲಿ ಒಟ್ಟಿಗೆ ಕುಳಿತು ಮೂರು ವರ್ಷಗಳ ಕಾಲ ಇದ್ದೆವು. ಈ ಹಂತದಲ್ಲಿ ನಮ್ಮಿಬ್ಬರ ನಡುವೆ ಅತ್ಯಂತ ಆಳವಾದ ಸಂಬಂಧವಿತ್ತು' ಎಂದು ತಿಳಿಸಿದ್ದಾರೆ.
'ಮೂರು ವರ್ಷಗಳ ನಂತರ ನಾನು ಅವನಿಗೆ ಬೋರ್ ಆಗಿ ಬಿಟ್ಟೆ. ಹೀಗಿದ್ದಾಗ ಒಂದು ದಿನ ನಾನು ನನ್ನದೇ ಕೋಣೆಯಲ್ಲಿ ನೋಡಬಾರದಿದ್ದದ್ದನ್ನು ನೋಡಿದೆ. ಆಗ ನನ್ನ ಹೃದಯ ಮುರಿದುಹೋಯಿತು. ಅದಾದ ನಂತರ, ನಾವು ಕೆಲವು ದಿನಗಳ ಕಾಲ ದೂರವಿದ್ದೆವು. ಇದಾದ ಕೆಲವು ವರ್ಷಗಳ ಕಾಲ ಪಶ್ಚಾತ್ತಾಪ ಪಟ್ಟುಕೊಂಡು ಆತ ಮತ್ತೆ ಬಂದಿದ್ದ. ಆ ನಂತರ ನಾವು ಇನ್ನೂ ಎರಡು ವರ್ಷಗಳ ಕಾಲ ಒಟ್ಟಿಗೆ ಇದ್ದೆವು' ಎಂದು ತಿಳಿಸಿದ್ದಾರೆ.
ಆಗ ನಾನು ಅವನಿಗೆ ಆರ್‌ಜೆ ಆಗುವ ನನ್ನ ಆಸೆಯನ್ನು ಹೇಳಿಕೊಂಡೆ. ಅವನು ಒಪ್ಪಿದರೆ, ನಾನು ಪ್ರಾಕ್ಟೀಸ್ ಕೋರ್ಸ್‌ಗೆ ಸೇರುತ್ತೇನೆ ಎಂದಿದ್ದೆ. ಅಲ್ಲಿ ನನಗೆ ಒಬ್ಬ ಹುಡುಗನ ಪರಿಚಯವಾಯಿತು. ಅದು ಸೋದರಮಾವನಿಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಆಗ ನನ್ನ ಮೇಲೆ ಅನುಮಾನ ಪಡಲು ಆರಂಭಿಸಿದ. ಉದ್ದೇಶಪೂರ್ವಕವಾಗಿ ನನ್ನ ಹಿಂಸಿಸಲು ಮುಂದಾದ. ನನಗೆ ಆ ಹುಡುಗನೊಂದಿಗೆ ಯಾವುದೇ ಸಂಬಂಧವಿರಲಿಲ್ಲ. ಆದರೆ ನನ್ನ ಸೋದರಮಾವ ನನ್ನನ್ನು ತಪ್ಪಾಗಿ ಅರ್ಥಮಾಡಿಕೊಂಡ. ಇದರಿಂದ ನಾವು ಬೇರೆ ಬೇರೆಯಾದೆವು. ನನಗೆ ಇನ್ನೂ ಅವರ ನೆನಪಿದೆ. ನನ್ನ ತಂದೆ ತೀರಿಹೋಗಿದ್ದ ಸಮಯದಲ್ಲಿ, ನಾನು ಅವರು ತೋರುತ್ತಿದ್ದ ಕಾಳಜಿಗೆ ಫಿದಾ ಆಗಿದ್ದೆ..' ಎಂದು ಭಾವುಕವಾಗಿ ಹೇಳಿದ್ದಾರೆ.
ತನ್ನ ಪ್ರೀತಿ ಮತ್ತು ಬ್ರೇಕಪ್ ಕಥೆಗಳಿಂದಲೇ ಸುದ್ದಿಯಲ್ಲಿರುವ ಈ ಸುಂದರಿ ಬೇರೆ ಯಾರೂ ಅಲ್ಲ, ಅರಿಯಾನಾ ಗ್ಲೋರಿ (Ariana Glory). ಬಿಗ್ ಬಾಸ್ ಜೊತೆಗೆ ರಾಮ್ ಗೋಪಾಲ್ ವರ್ಮಾ ಅವರೊಂದಿಗಿನ ಸಂದರ್ಶನದ ಮೂಲಕ ಜನಪ್ರಿಯರಾದ ಈ ಸುಂದರಿ, ಪ್ರಸ್ತುತ ಟಿವಿ ಕಾರ್ಯಕ್ರಮಗಳು ಮತ್ತು ಒಟಿಟಿ ಕಾರ್ಯಕ್ರಮಗಳಲ್ಲಿ ಸದ್ದು ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.