
ಏನಾಗಿದೆ ಕಾಲಿವುಡ್ ಚಿತ್ರರಂಗಕ್ಕೆ? ಒಬ್ಬರಾದ ಮೇಲೆ ಒಬ್ಬ ಸ್ಟಾರ್ ನಟನಿಗೆ ಹುಸಿ ಬಾಂಬ್ ಕರೆಗಳು ಬರುತ್ತಿವೆ. ಅಂದ್ಹಾಗೆ ಹೀಗೆಲ್ಲಾ ಮಾಡುತ್ತಿರುವುದು ಯಾರು?
ಹೌದು! ಕಾಲಿವುಡ್ 'ಮಾರಿ' ಧನುಷ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಕೆಲವು ದುಷ್ಕರ್ಮಿಗಳು ಬೆದರಿಕೆ ಕರೆ ಮಾಡಿದ್ದಾರೆ. ತಕ್ಷಣವೇ ಎಚ್ಚೆತ್ತು ಕೊಂಡ ನಟ ಬಾಂಬ್ ಸ್ಕ್ವಾಡ್‌ಗೆ ಕರೆ ಮಾಡಿದ್ದಾರೆ. ಚೆನ್ನೈನ ಅಭಿರಾಮಪುರಂನಲ್ಲಿರುವ ಧನುಷ್ ಮನೆಯಲ್ಲಿ ಸಂಪೂರ್ಣ ತಪಾಸಣೆ ನಡೆಸಲಾಗಿತ್ತು. ಬಾಂಬ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕರೆ ಮಾಡಿರುವ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದೊಂದು ಹುಸಿ ಬಾಂಬ್ ಕರೆ. ಬೇಕೆಂದೇ ಯಾರೋ ದುಷ್ಕರ್ಮಿಗಳು ಹೆದರಿಸಲು ಮಾಡಿರುವುದು ಎಂದು ತಿಳಿದು ಬಂದಿದೆ.
ಈ ವಿಚಾರವನ್ನು ತನಿಖೆ ಮಾಡುತ್ತಿದ್ದಂತೆ ಪೊಲೀಸರಿಗೆ ಮತ್ತೊಂದು ವಿಚಾರ ತಿಳಿದು ಬಂದಿದೆ. ಅದುವೇ ನಟ ಹಾಗೂ ರಾಜಕಾರಣಿ ವಿಜಯಕಾಂತ್ ಕಛೇರಿಗೂ ಕರೆ ಬಂದಿದ್ದು ಬಹಿರಂಗಗೊಂಡಿದೆ. ವಿರುಂಗಬಟ್ಟಮ್‌ನಲ್ಲಿರುವ ವಿಜಯಕಾಂತ್ ಕಚೇರಿಯಲ್ಲಿಯೂ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಲಾಗಿತ್ತು. ಆದರೆ ಇದು ಹುಸಿ ಕಾಲ್ ಎಂದು ತಿಳಿದ ಕಾರಣ ಹೆಚ್ಚಾಗಿ ತಿಲೆ ಕೆಡಿಸಿಕೊಂಡಿರಲಿಲ್ಲ. ನಟ ಧನುಷ್‌ಗೂ ಅಂದೇ ಕರೆ ಬಂದಿರುವ ಕಾರಣ ಪೊಲೀಸರು ಇನ್ನು ಮುಂದೆ ಕರೆ ಮಾಡಲಿರುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ.
ಕೆಲವು ದಿನಗಳ ಹಿಂದೆ ನಟ ಸೂರ್ಯ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ, ಮತ್ತೂ ಹಿಂದೆ ರಜನಿಕಾಂತ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಕೆಲವು ಕಿಡಿಗೇಡಿಗಳು ಕರೆ ಮಾಡಿದ್ದರು. ರಜನಿಕಾಂತ್‌ಗೆ ಕರೆ ಮಾಡಿದ್ದು ಅಸ್ವ್ಯಸ್ಥ ಮನಸ್ಥಿತಿಯ ಹುಡುಗ ಎಂದು ತಿಳಿದ ನಂತರ ರಜನಿಕಾಂತ್ ಆತನ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಿದ್ದರು.
ರಜನೀಕಾಂತ್ ಮನೆಯಲ್ಲಿ ಬಾಂಬ್: ಯಾರ ಕೈವಾಡವಿದು?
-
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.