ಸ್ಮಾರ್ಟ್‌ಸಿಟಿ: ಎಷ್ಟನೇ ಸ್ಥಾನದಲ್ಲಿದೆ ತುಮಕೂರು..?

Published : Oct 26, 2019, 10:36 AM IST
ಸ್ಮಾರ್ಟ್‌ಸಿಟಿ: ಎಷ್ಟನೇ ಸ್ಥಾನದಲ್ಲಿದೆ ತುಮಕೂರು..?

ಸಾರಾಂಶ

ಸ್ಮಾರ್ಟ್‌ ಸಿಟಿ ಯೋಜನೆಯಡಿ ಆಯ್ಕೆಯಾದ ದೇಶದ 100 ಸ್ಮಾರ್ಟ್‌ ಸಿಟಿಗಳ ರಾರ‍ಯಂಕಿಂಗ್‌ ಪಟ್ಟಿಬಿಡುಗಡೆಯಾಗಿದ್ದು, 20ನೇ ಸ್ಥಾನದಲ್ಲಿದ್ದ ತುಮಕೂರು ಸ್ಮಾರ್ಟ್‌ ಸಿಟಿಯು 19ನೇ ಸ್ಥಾನಕ್ಕೆ ಏರಿದೆ. ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕೆಲಸಗಳು ಮುಂದುವರಿದಿದ್ದು, ಇನ್ನಷ್ಟು ಕೆಲಸಗಳು ಪ್ರಗತಿಯಲ್ಲಿದೆ.

ತುಮಕೂರು(ಅ.26): ಸ್ಮಾರ್ಟ್‌ ಸಿಟಿ ಯೋಜನೆಯಡಿ ಆಯ್ಕೆಯಾದ ದೇಶದ 100 ಸ್ಮಾರ್ಟ್‌ ಸಿಟಿಗಳ ರಾರ‍ಯಂಕಿಂಗ್‌ ಪಟ್ಟಿಬಿಡುಗಡೆಯಾಗಿದ್ದು, 20ನೇ ಸ್ಥಾನದಲ್ಲಿದ್ದ ತುಮಕೂರು ಸ್ಮಾರ್ಟ್‌ ಸಿಟಿಯು 19ನೇ ಸ್ಥಾನಕ್ಕೆ ಏರಿದೆ ಎಂದು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಅಜಯ್‌ ಅವರು ಸಂತಸ ಹಂಚಿಕೊಂಡಿದ್ದಾರೆ.

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಹಮ್ಮಿಕೊಂಡ ಯೋಜನೆಗಳ ಅನುಷ್ಠಾನದಲ್ಲಿ ಪ್ರಗತಿಯ ವೇಗ ಹೆಚ್ಚಾಗಿದ್ದು, ಈ ಸಿಟಿ ರಾರ‍ಯಂಕಿಂಗ್‌ ಏರಿಕೆಗೆ ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿಯೂ ಸಹ ಸ್ಮಾರ್ಟ್‌ ಸಿಟಿಯ ಎಲ್ಲಾ ಕಾಮಗಾರಿಗಳ ಪ್ರಗತಿಯನ್ನು ಹೆಚ್ಚಿಸಿ ನಗರವನ್ನು ಸ್ಮಾರ್ಟ್‌ ಸಿಟಿ ಮಾಡಲು ಶ್ರಮವಹಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಮಕೂರು: ಮರಳು ದಂಧೆಗೆ ಬ್ರೇಕ್ ಹಾಕ್ತಾರಾ ಸಚಿವ ಮಾಧುಸ್ವಾಮಿ ..

ತುಮಕೂರಿನಲ್ಲಿ ಪ್ರಗತಿಪರ ಕೆಲಸಗಳು ವೇಗ ಪಡೆದಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಸ್ಮಾರ್ಟ್ ಟಚ್ ನೀಡುವ ಕೆಲಸ ಮುಂದುವರಿದಿದೆ. ಸುಸಜ್ಜಿತ ರಸ್ತೆ, ಚರಂಡಿ ವ್ಯವಸ್ಥೆ ಸೇರಿ ಅಗತ್ಯ ಕಾಮಗಾರಿಗಳು ವೇಗ ಪಡೆದುಕೊಂಡಿವೆ.

ಪ್ರತ್ಯೇಕ ಅಪಘಾತ:8 ಮಂದಿ ದುರ್ಮರಣ

PREV
click me!

Recommended Stories

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾದಂತಿದೆ ರಾಜ್ಯದ ಸ್ಥಿತಿ: ಎಂ.ಪಿ.ರೇಣುಕಾಚಾರ್ಯ ಟೀಕೆ
ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!