ಸಿದ್ದಂಗಗೆಯ ಶಿವೈಕ್ಯ ಶತಾಯುಷಿ ಶಿವಕುಮಾರ ಶ್ರೀಗಳ ಐಕ್ಯ ಸ್ಥಳದ ಮೇಲೆ ಇಂದು ಶಿವಲಿಂಗ ಪ್ರತಿಷ್ಠಾಪನೆಯಾಗಿದೆ. ಇಂದು ಬೆಳಗಿನಜಾವ ಬ್ರಾಹ್ಮಿ ಮುಹೂರ್ತದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಯ ಪೀಠದ ಮೇಲೆ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗವು 27 ಇಂಚು ಉದ್ದವಿದೆ. ಶಿವಕುಮಾರ ಶ್ರೀಗಳ ಕೈಯಲ್ಲಿನ ಗೇಣು 9 ಇಂಚು ಇತ್ತು. ಆ ಗೇಣಿನ ಮೂರುಪಟ್ಟು ಲಿಂಗವನ್ನು ರೂಪಿಸಲಾಗಿದೆ. ಪಾನ ಬಟ್ಟಲು ಸೇರಿ ಸಂಪೂರ್ಣವಾಗಿ ಲಿಂಗ 38 ಇಂಚು ಇದೆ.
ತುಮಕೂರು(ನ.11): ಸಿದ್ದಂಗಗೆಯ ಶಿವೈಕ್ಯ ಶತಾಯುಷಿ ಶಿವಕುಮಾರ ಶ್ರೀಗಳ ಐಕ್ಯ ಸ್ಥಳದ ಮೇಲೆ ಇಂದು ಶಿವಲಿಂಗ ಪ್ರತಿಷ್ಠಾಪನೆಯಾಗಿದೆ. ಇಂದು ಬೆಳಗಿನಜಾವ ಬ್ರಾಹ್ಮಿ ಮುಹೂರ್ತದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಯ ಪೀಠದ ಮೇಲೆ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ.
ಪ್ರಾತಃಕಾಲದಿಂದಲೇ ಹಲವು ವಿಧಿವಿಧಾನಗಳನ್ನ ನೆರವೇರಿಸಿ, ಶಿವಲಿಂಗವನ್ನ ದೈವೀಕರಿಸಿ ಪ್ರತಿಷ್ಠಾಪನೆ ಮಾಡಲಾಗಿದೆ..ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮಿಜಿ, ಸೇರಿದಂತೆ ಹಲವು ಸಾಧು ಸಂತರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಯಿತು.
ಸಿಸಿಟಿವಿಯಲ್ಲಿ ಸೆರೆಯಾಯ್ತು ಅಗೋಚರ ಬೆಳಕು: ಜನರಲ್ಲಿ ಆತಂಕ
ಲಿಂಗವನ್ನು ಶ್ರೀಗಳು ತಂಗುತಿದ್ದ ಹಳೇ ಮಠದಲ್ಲಿ ಮಂಡಳದ 48 ದಿನಗಳ ಕಾಲ ಜಲಾಧಿವಾಸ, ಧಾನ್ಯಾದಿವಾಶ, ಪುಷ್ಪಾಧಿವಾಸ ಹಾಗೂ ಶಯನಾಧಿವಾಸದ ವಿಧಿವಿಧಾನ ಪೂರೈಸಲಾಗಿತ್ತು. ಹೀಗೆ ಸಕಲ ವಿಧಾನ ಪೂರೈಸಿ ದೈವೀ ಶಕ್ತಿಯನ್ನು ಪಡೆದ ಪವಿತ್ರ ಲಿಂಗವನ್ನು ಶ್ರೀಗಳ ಗದ್ದುಗೆಯ ಪೀಠದ ಮೇಲೆ ಇರಿಸಲಾಗಿದೆ.
ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗವು 27 ಇಂಚು ಉದ್ದವಿದೆ. ಶಿವಕುಮಾರ ಶ್ರೀಗಳ ಕೈಯಲ್ಲಿನ ಗೇಣು 9 ಇಂಚು ಇತ್ತು. ಆ ಗೇಣಿನ ಮೂರುಪಟ್ಟು ಲಿಂಗವನ್ನು ರೂಪಿಸಲಾಗಿದೆ. ಪಾನ ಬಟ್ಟಲು ಸೇರಿ ಸಂಪೂರ್ಣವಾಗಿ ಲಿಂಗ 38 ಇಂಚು ಇದೆ. ಲಿಂಗ ಪ್ರತಿಷ್ಠಾಪನಾ ಕಾರ್ಯಕ್ರಮ ಕಣ್ಣು ತುಂಬಿಕೊಳ್ಳಲು ನಾಡಿನ ವಿವಿಧೆಡೆಗಳಿಂದ ಭಕ್ತಾದಿಗಳು ಸಮೂಹ ಬಂದಿತ್ತು. ಅದೇ ರೀತಿ ಸಂಸದ ಜಿ.ಎಸ್.ಬಸವರಾಜ ಹಾಜರಿದ್ದು ಶಿವಲಿಂಗ ದರ್ಶನ ಪಡೆದಿದ್ದಾರೆ.
ಡಾ. ಶಿವಕುಮಾರ ಸ್ವಾಮೀಜಿ ಪವಿತ್ರ ಗದ್ದುಗೆ ಮೇಲೆ ವಿಶೇಷ ಶಿವಲಿಂಗ ಪ್ರತಿಷ್ಠಾಪನೆ