ಸೋಲು, ಗೆಲುವು ಅಲ್ಲ, ವಿವಾದ ತೀರ್ಮಾನವಾಗಿದ್ದೇ ಸಂತಸ ಎಂದ್ರು ಸಿದ್ದಗಂಗಾ ಶ್ರೀ

Published : Nov 09, 2019, 12:16 PM ISTUpdated : Nov 09, 2019, 04:14 PM IST
ಸೋಲು, ಗೆಲುವು ಅಲ್ಲ, ವಿವಾದ ತೀರ್ಮಾನವಾಗಿದ್ದೇ ಸಂತಸ ಎಂದ್ರು ಸಿದ್ದಗಂಗಾ ಶ್ರೀ

ಸಾರಾಂಶ

ಕುತೂಹಲ ಮೂಡಿಸಿದ್ದ ಅಯೋಧ್ಯೆ ತೀಪೂ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಶ್ರಿ ಸಿದ್ದಲಿಂಗ ಶ್ರೀ ಪ್ರತಿಕ್ರಿಯೆ ನೀಡಿದ್ದಾರೆ. ಸುಪ್ರೀ ತೀರ್ಪಿನ ಬಗ್ಗೆ ಶ್ರೀಗಳು ಏನು ಹೇಳಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ತುಮಕೂರು(ನ.09): ಅಯೋಧ್ಯೆ ತೀರ್ಪು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಶ್ರಿ ಸಿದ್ದಲಿಂಗ ಶ್ರೀ ಪ್ರತಿಕ್ರಿಯೆ ನೀಡಿದ್ದಾರೆ. ಸಂವಿಧಾನದ ಪೀಠ  ಸುದೀರ್ಘ ವಿಚಾರಣೆ ಮಾಡಿ, ದಾಖಲೆ ನೋಡಿ  ಇತಿಹಾಸ ಸಂಸ್ಕೃತಿ ಗಮನಿಸಿ ತೀರ್ಪು ನೀಡಿದೆ. ಬಹಳ ದಿನಗಳ ಸಮಸ್ಯೆಯಾಗಿದ್ದು ಅಂತಿಮವಾಗಿ ವಿವಾದಕ್ಕರ ತೆರೆ ಎಳೆದಿರುವುದು ಶ್ಲಾಘನೀಯ ಎಂದಿದ್ದಾರೆ.

"

ಇದು ಸೋಲು ಗೆಲುವಿನ ಪ್ರಶ್ನೆಯಲ್ಲ, ಗೆದ್ದೆವೋ ಸೋತೆವೋ ಅನ್ನೋ ಪ್ರಶ್ನೆಯಲ್ಲ. ವಿವಾದ ತೀರ್ಮಾನಾಗಿರುವ ಸಂತೋಷದ ಸಂಗತಿ. ನಾವು ನ್ಯಾಯಲಯನ್ನು ಗೌರವಿಸುತ್ತೇವೆ.‌ ಅದು ಪರ ವಿರೋಧ ವಿಚಾರವಲ್ಲ. ನ್ಯಾಯಾಲಯ ಎಲ್ಲವನ್ನು ಗಮನಿಸಿ  ಸಂವಿಧಾನದ ಪೂರ್ಣ ಪೀಠ ಇದನ್ನು ಒಪ್ಪಿ ತೀರ್ಮಾನ ಕೊಟ್ಟಿದೆ. ಇದಕ್ಕೆ ಅಪಸ್ವರ ಬರದ್ದಂತೆ ಎಲ್ಲಾವನ್ನು ಸಮಾನವಾಗಿ ಸ್ವೀಕರಿಸಿ, ಗೌರವಿಸಿ ಶಾಂತಿ ಸಮಧಾನದಿಂದ ಇರಬೇಕು‌ ಎಂದಿದ್ದಾರೆ.

ಅಯೋಧ್ಯಾ ತೀರ್ಪು : ಜಿಲ್ಲೆಗಳಲ್ಲಿ ಹೇಗಿದೆ ಟೈಟ್ ಸೆಕ್ಯೂರಿಟಿ

ಎಲ್ಲಾ ಧರ್ಮಕ್ಕೂ ಜಾತಿಗೂ ಅವಕಾಶ ನೀಡಿರುವುದು ಭಾರತ. ನಮ್ಮ ದೇಶಕ್ಕೆ ವಿಶ್ವಕ್ಕೆ ಶಾಂತಿ ಬಯಸುತ್ತದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲರೂ ಎತ್ತಿ ಹಿಡಿಯೋಣ. ಸ್ವಾಗತಿಸೋಣ. ಸೌಹಾರ್ದತೆಯಿಂದ ಜೀವನ ನಡೆಸೋಣ. ಎಲ್ಲಾರಿಗೂ ಶುಭವಾಗಲಿ ಎಂದು ಹಾರೈಸಿದ್ದಾರೆ.

ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!

ಇದು ಎರಡು ಕೋಮಿನ ಪ್ರಶ್ನೆ ಅಲ್ಲ. ಭಾರತೀಯರೆಲ್ಲರಿಗೂ ಅನ್ವಯವಾಗುವಂತಹದ್ದು. ಅಯೋಧ್ಯೆಯಲ್ಲಿ ಅವರಿಗೂ ಜಾಗ ಕೊಡಲಾಗಿದೆ. ಇವರು ಪೂಜೆ ಮಾಡ್ತಾರೆ. ಅವರು ಪ್ರಾರ್ಥನೆ ಮಾಡುತ್ತಾರೆ ಅಷ್ಟೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

7 ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದಕ್ಕೆ ಇಂದು ತೆರೆ ಬಿದ್ದಿದ್ದು, ಸುಪ್ರೀಂ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ತೀರ್ಪು ನೀಡಿದೆ. ಯಾರ ಭಾವನೆಗೂ ಧಕ್ಕೆಯಾಗದಂತೆ ಬಾಬರಿ ಮಸೀದಿಗೂ ಅಯೋಧ್ಯೆಯಲ್ಲೇ ಪ್ರತ್ಯೇಕ ಜಾಗವನ್ನು ಕಲ್ಪಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. 

PREV
click me!

Recommended Stories

ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ
ಪರಮೇಶ್ವರ್ ಮುಂದಿನ ಸಿಎಂಗೆ ಆಗ್ರಹಿಸಿ ರಕ್ತದಲ್ಲಿ ನೂರಾರು ಜನರಿಂದ ಸಹಿ ಸಂಗ್ರಹ