ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದೆ ದುರ್ವರ್ತನೆ ತೋರಿದ ವಾಹನ ಸವಾರರಿಗೆ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ರಸ್ತೆಯಲ್ಲಿ ನಿಂತು ವಾಹನ ಸವಾರರಿಗೆ ದಂಡ ವಿಧಿಸಿದ್ದಾರೆ.
ವರದಿ: ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್.
ತುಮಕೂರು (ನ.16) ಸಂಚಾರಿ ನಿಯಮಗಳನ್ನು ಪಾಲಿಸದೆ ದುರ್ವರ್ತನೆ ತೋರಿದ ವಾಹನ ಸವಾರರಿಗೆ ನ್ಯಾಯಾಧೀಶರೇ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಈ ರೀತಿಯ ಅಪರೂಪದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಗುಬ್ಬಿ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು, ಗುಬ್ಬಿ ಪಟ್ಟಣದ ರಸ್ತೆಯಲ್ಲಿ ನಿಂತು ವಾಹನ ಸವಾರರಿಗೆ ದಂಡ ವಿಧಿಸಿದ್ದಾರೆ.
ಹೆಲ್ಮೆಟ್ ಹಾಗೂ ಸೂಕ್ತ ದಾಖಲಾತಿಗಳಲ್ಪದೆ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ನ್ಯಾಯಾಧೀಶರು (Judge)ಸಖತ್ ಶಾಕ್ ನೀಡಿದ್ದಾರೆ. ಇಂದು ಮುಂಜಾನೆ 7 ಗಂಟೆಯಿಂದ ಈ ಕಾರ್ಯಾಚರಣೆ ಶುರುವಾಗಿದೆ. ಗುಬ್ಬಿ ಪೊಲೀಸರೊಂದಿಗೆ ಕಾರ್ಯಚರಣೆಗಿಳಿದ ನ್ಯಾಯಾಧೀಶೆ ಮಂಜುಳ ಹುಂಡಿ ಶಿವಪ್ಪ (Manjula hundi) ವಾಹನ ಸವಾರರಿಗೆ ದಂಡ (Fine) ವಿಧಿಸಿದ್ದಾರೆ. ನ್ಯಾಯಾಧೀಶರ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಹೆಲ್ಮೆಟ್ (Helmet) ಧರಿಸದೇ ಉಡಾಫೆಯಿಂದ ಸಂಚಾರ ಮಾಡುತ್ತಿದ್ದ ಹಲವು ವಾಹನ ಸವಾರರು ದಂಡ ತೆತ್ತರು.
ನ್ಯಾಯಾಧೀಶೆಯಾದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಾರು ಚಾಲಕನ ಪುತ್ರಿ
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಬಹುತೇಕ ವಾಹನ ಸವಾರರು ತಲೆಗೆ ಹೆಲ್ಮೆಟ್ ಧರಿಸದೆ ಹಾಗೂ ಸರಿಯಾದ ದಾಖಲಾತಿ (Documents) ಇಲ್ಲದೆ ವಾಹನ ಓಡಿಸುತ್ತಿರುವುದು ನ್ಯಾಯಾಧೀಶರ ಗಮನಕ್ಕೆ ಬಂದಿದೆ. ಆಗ ನ್ಯಾಯಾಧೀಶರು ಗುಬ್ಬಿ ಪೊಲೀಸರಿಗೆ ತರಾಟೆ ತೆಗೆದುಕೊಂಡು ಪ್ರತಿಯೊಬ್ಬರಿಗೂ ದಂಡ ವಿಧಿಸುವಂತೆ ಸೂಚಿಸಿದ್ದಾರೆ. ಆದರೆ, ರಾಜಕಾರಣಗಳು (Politicians) ದಂಡ ಕಟ್ಟಲು ಅವಕಾಶ ನೀಡದಂತ ತಡೆಯುತ್ತಾರೆಂದು ಪೊಲೀಸರು ನ್ಯಾಯಾಧೀಶರ ಮುಂದಿ ಅಸಹಾಯಕತೆ ತೊಡಿಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ನ್ಯಾಯಾಧೀಶರು ಇಂದು ತಾವೇ ಖುದ್ದಾಗಿ (Personally) ರಸ್ತೆಗಳಿದು ವಾಹನ ಸವಾರರಿಗೆ ದಂಡ ಹಾಕಿದ್ದಾರೆ.