
ತುಮಕೂರು (ಜ.26): ಗುಬ್ಬಿ ಶಾಸಕ ಎಸ್‌ಆರ್ ಶ್ರೀನಿವಾದ್ ಅವರಿಗೆ ಪಿತೃವಿಯೋಗವಾಗಿದೆ. ಅವರ ತಂದೆ ರಾಮೇಗೌಡ ವಯೋಸಹಜ ಅನಾರೋಗ್ಯದಿಂದ ಸಾವು ಕಂಡಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ನಾಳೆ ಮಧ್ಯಾಹ್ನ ಸ್ವಗ್ರಾಮ ಗುಬ್ಬಿ ತಾಲೂಕಿನ ಸರ್ವೇಗಾರನ ಪಾಳ್ಯದಲ್ಲಿ ಅಂತ್ಯ ಕ್ರಿಯೆ. ಪುತ್ರರಾದ ಎಸ್.ಆರ್.ಶ್ರೀನಿವಾಸ್, ಎಸ್.ಆರ್.ಜಗದೀಶ್, ಪುತ್ರಿ ಸುನಂದಾರನ್ನ ಅವರು ಅಗಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ 23 ವರ್ಷಗಳ ಕಾಲ ದೀರ್ಘವಾಗಿ ಸೇವೆ ಸಲ್ಲಿಸಿದ್ದ ಇವರು ತಾಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹಿರಿಯ ರಾಜಕೀಯ ನಾಯಕರಾಗಿದ್ದ ಇವರು ಹಲವರಿಗೆ ರಾಜಕೀಯವಾಗಿ ಗುರು ಕೂಡ ಎನಿಸಿಕೊಂಡಿದ್ದರು.