ಯಶಸ್ವಿನಿ ಯೋಜನೆ ಪುನರ್ ಘೋಷಣೆ ?

By Kannadaprabha NewsFirst Published Nov 12, 2019, 9:39 AM IST
Highlights

ಸಿಎಂ ಯಡಿಯೂರಪ್ಪಗೆ ಕೈ ನಾಯಕ ರಾಜಣ್ಣ ಯಶಸ್ವಿನಿ ಯೋಜನೆ ಪುನರಾರಂಭಕ್ಕೆ ಮನವಿ ಮಾಡಿದ್ದು, ಬೇಡಿಕೆ ಈಡೇರುವ ಭರವಸೆ ವ್ಯಕ್ತಪಡಿಸಿದ್ದಾರೆ. 

ತುಮಕೂರು [ನ.12]: ‘ಯಶಸ್ವಿನಿ’ ಯೋಜನೆಯಿಂದ ರೈತರಿಗೆ ಹೆಚ್ಚು ಅನುಕೂಲವಾಗುತಿತ್ತು. ಆದರೆ, ಆಯುಷ್ಮಾನ್ ಭಾರತ್ ಯೋಜನೆಯಿಂದ ಪ್ರಯೋಜನವಾಗುತ್ತಿಲ್ಲ ಎಂಬುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ನ. 14ರಂದು ತುಮಕೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ 66 ನೇ ಸಹಕಾರ ಸಪ್ತಾಹ ದಲ್ಲಿ ‘ಯಶಸ್ವಿನಿ’ ಯೋಜನೆ ಪುನರ್ ಘೋಷಿಸುವ ಸಾಧ್ಯತೆ ಇದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

ನಗರದಲ್ಲಿ ಮಾತ ನಾಡಿದ ಅವರು, ಹಾಲು ಉತ್ಪಾದಕ ಸಂಘ, ಸೌಹಾರ್ದ ಹಾಗೂ ಪತ್ತಿನ ಸಂಸ್ಥೆಗಳ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು, ಇವರೆಲ್ಲರಿಗಾಗಿ ‘ಯಶಸ್ವಿನಿ’ ಆರೋಗ್ಯ ವಿಮಾ ಯೋಜನೆ ಮರು ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು. 

ಹೆಚ್ಚಿನ ಜಿಲ್ಲಾಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುರುವಾರ (ನ.14) ನಗರದಲ್ಲಿ ನಡೆಯಲಿರುವ ಸಹಕಾರ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ‘ಯಶಸ್ವಿನಿ’ ಯೋಜನೆ ಪುನರ್ ಘೋಷಣೆ ಮಾಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

click me!