ಟೋಕಿಯೊ ಒಲಿಂಪಿಕ್ಸ್: ಭಾರತೀಯ ಅಥ್ಲೀಟ್‌ಗಳ ಮೊದಲ ತಂಡಕ್ಕೆ ಬೀಳ್ಕೊಡುಗೆ!

By Suvarna News  |  First Published Jul 17, 2021, 7:51 PM IST
  • ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತದ ಮೊದಲ ತಂಡ ಸಜ್ಜು
  • ದೆಹಲಿ ವಿಮನ ನಿಲ್ದಾಣದಿಂದ ಟೊಕಿಯೋಗೆ ಪ್ರಯಾಣ
  • 88 ಕ್ರೀಡಾಪಟುಗಳನ್ನೊಳಗೊಂಡ ಮೊದಲ ತಂಡ ಟೊಕಿಯೊಗೆ
     

ನವದೆಹಲಿ(ಜು.17): ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ಭರ್ಜರಿಯಾಗಿ ಸಜ್ಜಾಗಿದೆ. ಇದೀಗ ಟೋಕಿಯೋ ಒಲಿಂಪಿಕ್ಸ್ ಗೆ ತೆರಳಲಿರುವ ಭಾರತೀಯ ಅಥ್ಲೀಟ್ ಗಳ ಮೊದಲ ತಂಡಕ್ಕೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕ್ರೀಡಾ ಖಾತೆ ಸಹಾಯಕ ಸಚಿವ ನಿಶಿತ್ ಪ್ರಾಮಾಣಿಕ್ ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಏಕೈಕ ಭಾರತೀಯ ಅಭಿನವ್‌ ಬಿಂದ್ರಾ ಸಂದರ್ಶನ

Latest Videos

undefined

ಟೋಕಿಯೋ ಒಲಿಂಪಿಕ್ಸ್ ಆರಂಭಕ್ಕೆ ಒಂದು ವಾರವಷ್ಟೇ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ  ಭಾರತದಿಂದ ಟೋಕಿಯೋಗೆ ತೆರಳಲಿರುವ ಅಥ್ಲೀಟ್ ಗಳ ಮೊದಲ ತಂಡಕ್ಕೆ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಂದು ಅಧಿಕೃತ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ.

54 ಅಥ್ಲೀಟ್ ಗಳು, ಪೂರಕ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ಪ್ರತಿನಿಧಿಗಳನ್ನೊಳಗೊಂಡ 88 ಮಂದಿಯ ತಂಡಕ್ಕೆ  ಅನುರಾಗ್ ಠಾಕೂರ್ ಮತ್ತು ಯುವಜನ ವ್ಯವಹಾರ ಮತ್ತು ನಿಶಿತ್ ಪ್ರಾಮಾಣಿಕ್ ಅವರು ಅಧಿಕೃತ ಬೀಳ್ಕೊಡುಗೆ ನೀಡಲಿದ್ದಾರೆ. ಅವರ ಜೊತೆ ಐಒಎ ಅಧ್ಯಕ್ಷರಾದ  ನರಿಂದರ್ ಧೃವ್ ಬಾತ್ರಾ, ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ, ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕರಾದ ಸಂದೀಪ್ ಪ್ರಧಾನ್  ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೇಡ್ ಇನ್ ಇಂಡಿಯಾ ಝಲಕ್‌

ಆರ್ಚರಿ, ಹಾಕಿ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಜೂಡೊ, ಜಿಮ್ನಾಸ್ಟಿಕ್, ವೇಟ್ ಲಿಫ್ಟಿಂಗ್ ಸೇರಿ ಎಂಟು ಬಗೆಯ ಕ್ರೀಡೆಗಳ ಅಥ್ಲೀಟ್ ಗಳು ಹಾಗೂ ಅವರ ಪೂರಕ ಸಿಬ್ಬಂದಿ ಮತ್ತು ಹಾಕಿ ಆಟಗಾರರ ದೊಡ್ಡ ತಂಡ ನವದೆಹಲಿಯಿಂದ ಇಂದು ಟೋಕಿಯೋಗೆ ಪ್ರಯಾಣ ಬೆಳೆಸಲಿದೆ.

ಅಥ್ಲೀಟ್ ಗಳ ಸುರಕ್ಷತೆಯನ್ನು ಖಾತ್ರಿಪಡಿಸಲು ಸಮಾರಂಭದಲ್ಲಿ ಭಾಗವಹಿಸುವ ಎಲ್ಲ ಗಣ್ಯರು, ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಂಡಿರುತ್ತಾರೆ. ಯಾರಿಗೆ ನೆಗೆಟಿವ್ ವರದಿ ಬಂದಿದೆಯೋ ಅವರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಸಮಾರಂಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲಾಗುವುದು.

ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಗೆ 127 ಭಾರತೀಯ ಅಥ್ಲೀಟ್ ಗಳು ಆಯ್ಕೆಯಾಗಿದ್ದು, ಇದು ದಾಖಲೆಯಾಗಿದೆ. ಕಳೆದ ರಿಯೊ ಒಲಿಂಪಿಕ್ಸ್ ಗೆ ಒಟ್ಟಾರೆ 117 ಮಂದಿ ಅರ್ಹತೆ ಪಡೆದಿದ್ದರು

click me!