* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬುಧವಾರ ಭಾರತಕ್ಕೆ ನಿರಾಸೆ
* ಸೆಪ್ಟೆಂಬರ್ 1ರಂದು ಒಂದೂ ಪದಕ ಗೆಲ್ಲದ ಭಾರತ
* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 10 ಪದಕ ಗೆದ್ದಿರುವ ಭಾರತೀಯ ಪ್ಯಾರಾಥ್ಲೀಟ್‌ಗಳು
ಟೋಕಿಯೋ(ಸೆ.02): ಸತತ 3 ದಿನಗಳ ಕಾಲ ಪದಕ ಬೇಟೆಯಾಡಿದ್ದ ಭಾರತಕ್ಕೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬುಧವಾರ ಪದಕ ಒಲಿಯಲಿಲ್ಲ. ಭಾರತದ ಯಾವುದೇ ಕ್ರೀಡಾಪಟು ಪದಕ ಗೆಲ್ಲುವಂತಹ ಪ್ರದರ್ಶನ ತೋರಲಿಲ್ಲ.
ಭಗತ್‌ಗೆ ಜಯ, ಪಾಲಕ್‌ಗೆ ಸೋಲು: ಬ್ಯಾಡ್ಮಿಂಟನ್ ಪುರುಷರ ಎಸ್‌ಎಲ್3 ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ವಿಶ್ವ ನಂ.1 ಪ್ರಮೋದ್ ಭಗತ್, ಭಾರತದವರೇ ಆದ ವಿಶ್ವ ನಂ.3 ಮನೋಜ್ ಸರ್ಕಾರ್ ವಿರುದ್ಧ 2-1 ಗೇಮ್‌ಗಳಲ್ಲಿ ಜಯಗಳಿಸಿದರು. ಮಹಿಳಾ ಸಿಂಗಲ್ಸ್ ಎಸ್‌ಯು5 ವಿಭಾಗದ ‘ಎ’ ಗುಂಪಿನಲ್ಲಿ ಪಾಲಕ್ ಕೊಹ್ಲಿ ಸೋಲುಂಡರು. ಇನ್ನು ಮಿಶ್ರ ಡಬಲ್ಸ್ ಎಸ್‌ಎಲ್ 3-ಎಸ್‌ಯು 5 ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಪಾಲಕ್ ಕೊಹ್ಲಿ-ಪ್ರಮೋದ್ ಭಗತ್ ಜೋಡಿ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಫ್ರಾನ್ಸ್‌ನ ಲುಕಾಸ್ ಮಝುರ್-ಪೌಸ್ಟಿನ್ ನೋಯೆಲ್ ವಿರುದ್ಧ 9-21, 21-15, 19-21 ಗೇಮ್‌ಗಳಲ್ಲಿ ಸೋಲುಂಡಿತು.
undefined
ಪ್ಯಾರಾಲಿಂಪಿಕ್ಸ್: ಕನ್ನಡಿಗ ಕೋಚ್ ಸತ್ಯನಾರಾಯಣ ಗರಡಿಯಲ್ಲಿ ಪಳಗಿದ ಪ್ರತಿಭೆ ತಂಗವೇಲು..!
ಅವನಿಗೆ ನಿರಾಸೆ: 10 ಮೀ. ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಅವನಿ ಲೇಖರ, 10 ಮೀ. ಏರ್ ರೈಫಲ್ ಪ್ರೊನ್ ಮಿಶ್ರ ವಿಭಾಗದಲ್ಲಿ 27ನೇ ಸ್ಥಾನ ಪಡೆದು ಫೈನಲ್‌ಗೇರುವಲ್ಲಿ ವಿಫಲರಾದರು. ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಿದ್ಧಾಥ್‌ರ್ ಬಾಬು 40ನೇ, ದೀಪಕ್ ಸೈನಿ 43ನೇ ಸ್ಥಾನ ಪಡೆದರು.
ಅನರ್ಹರಾದ ಸುಯಶ್: ಪುರುಷರ 100 ಮೀ. ಬ್ರೆಸ್ಟ್‌ಸ್ಟೊ್ರೕಕ್ ಈಜು ಸ್ಪರ್ಧೆಯಲ್ಲಿ ನಿಯಮ ಉಲ್ಲಂಘಿಸಿ ಸುಯಶ್ ಜಾಧವ್ ಅನರ್ಹಗೊಂಡರು. ಆರಂಭದಲ್ಲಿ ಹಾಗೂ ಪ್ರತೀ ಬಾರಿ ತಿರುಗಿದ ಬಳಿಕ ಬ್ರೆಸ್ಟ್‌ಸ್ಟೊ್ರೕಕ್ ಕಿಕ್‌ಗೆ ಮುಂಚಿತವಾಗಿ ಒಂದು ಬಟರ್‌ಫ್ಲೈ ಕಿಕ್ ಮಾಡಲು ಅನುಮತಿ ಇದೆ. ಆದರೆ ಸುಯಶ್ ತಿರುಗಿದ ಬಳಿಕ ಒಂದಕ್ಕಿಂತ ಹೆಚ್ಚು ಬಟರ್‌ಫ್ಲೈ ಕಿಕ್ ಮಾಡಿದ್ದಾರೆಂದು ಅವರನ್ನು ಅನರ್ಹಗೊಳಿಸಲಾಯಿತು.
ಕ್ಲಬ್ ಥ್ರೋನಲ್ಲೂ ನಿರಾಸೆ: ಪುರುಷರ ಎಫ್51 ಕ್ಲಬ್ ಥ್ರೋ ಸ್ಪರ್ಧೆಯಲ್ಲಿ ಅಮಿತ್ ಕುಮಾರ್ ಹಾಗೂ ಧರಂಬೀರ್ ಪದಕ ಗೆಲ್ಲುವಲ್ಲಿ ವಿಫಲರಾದರು. 36 ವರ್ಷದ ಅಮಿತ್ 27.77 ಮೀ. ದೂರಕ್ಕೆ ಎಸೆದು 5ನೇ ಸ್ಥಾನ ಪಡೆದರೆ, ಧರಂಬೀರ್ 25.59ಮೀ. ದೂರಕ್ಕೆ ಎಸೆದು 8ನೇ ಸ್ಥಾನಕ್ಕೆ ತೃಪ್ತಿಪಟ್ಟರು.