ಪ್ಯಾರಾಲಿಂಪಿಕ್ಸ್‌: ಬೆಳ್ಳಿ ಗೆದ್ದ ತಂಗವೇಲುಗೆ ತಮಿಳ್ನಾಡು ಸರ್ಕಾರದಿಂದ 2 ಕೋಟಿ ಬಹುಮಾನ

Kannadaprabha News   | Asianet News
Published : Sep 01, 2021, 10:22 AM ISTUpdated : Sep 01, 2021, 10:24 AM IST
ಪ್ಯಾರಾಲಿಂಪಿಕ್ಸ್‌: ಬೆಳ್ಳಿ ಗೆದ್ದ ತಂಗವೇಲುಗೆ ತಮಿಳ್ನಾಡು ಸರ್ಕಾರದಿಂದ 2 ಕೋಟಿ ಬಹುಮಾನ

ಸಾರಾಂಶ

* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಮರಿಯಪ್ಪನ್ ತಂಗವೇಲು * ಹೈಜಂಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ತಂಗವೇಲು * ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಫೈನಲ್ ಪೈಪೋಟಿ

ಚೆನ್ನೈ(ಸೆ.01): ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಮರಿಯಪ್ಪನ್‌ ತಂಗವೇಲುಗೆ ಅವರ ತವರು ರಾಜ್ಯವಾದ ತಮಿಳುನಾಡು ಸರ್ಕಾರವು 2 ಕೋಟಿ ರುಪಾಯಿ ನಗದು ಬಹುಮಾನ ಘೋಷಿಸಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಸಾಧನೆ ತೋರುತ್ತಿರುವ ಕ್ರೀಡಾಪಟುಗಳಿಗೆ ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅಭಿನಂದನೆ ಸಲ್ಲಿಸಿದ್ದಾರೆ.

ತುದಿಗಾಲಲ್ಲಿ ನಿಲ್ಲಿಸಿದ ಪೈಪೋಟಿ

ಸುರಿವ ಮಳೆಯಲ್ಲೇ ಆರಂಭವಾದ ಹೈಜಂಪ್‌ ಸ್ಪರ್ಧೆ ಸಮಯ ಕಳೆದಂತೆ ನೋಡುಗರನ್ನು ರೋಮಂಚನಗೊಳಿಸಿತು. ಕ್ಷಣ ಕ್ಷಣಕ್ಕೂ ಕುತೂಹಲ ಕಾಯ್ದುಕೊಂಡ ಸ್ಪರ್ಧೆ ಸಿನಿಮೀಯ ಶೈಲಿಯಲ್ಲಿ ಅಂತ್ಯ ಕಾಣುವುದರೊಂದಿಗೆ ಸತತ 2ನೇ ಚಿನ್ನದ ಪದಕ ತಂಗವೇಲು ಕೈಯಿಂದ ಜಾರಿತು.

1.73 ಮೀ. ಎತ್ತರ ಜಿಗಿಯುವ ಮೂಲಕ ಅಭಿಯಾನ ಆರಂಭಿಸಿದ ತಂಗವೇಲು, 1.77 ಮೀ. ಅನ್ನು ಸುಲಭವಾಗಿ ಜಿಗಿದರು. 1.80 ಮೀಟರ್‌ ಅನ್ನು ಮೊದಲ ಪ್ರಯತ್ನದಲ್ಲೇ ಪೂರ್ಣಗೊಳಿಸಿದ ತಂಗವೇಲು, 1.86 ಮೀ. ಅನ್ನು ಕೊನೆಯ ಹಾಗೂ 3ನೇ ಪ್ರಯತ್ನದಲ್ಲಿ ಜಿಗಿದು ಮತ್ತೊಂದು ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದರು.

ಪ್ಯಾರಾಲಿಂಪಿಕ್ಸ್‌; ಹೈ ಜಂಪ್‌ನಲ್ಲಿ ಮರಿಯಪ್ಪನ್‌ಗೆ ಬೆಳ್ಳಿ, ಶರದ್‌ ಕುಮಾರ್‌ ಕೊರಳಿಗೆ ಕಂಚು..!

ಕೊನೆಗೆ 1.88 ಮೀ.ಗೆ ಎತ್ತರವನ್ನು ಹೆಚ್ಚಿಸಿದಾಗ ಅಂತಿಮ ಕಣದಲ್ಲಿ ತಂಗವೇಲು, ಸ್ಯಾಮ್‌ ಮಾತ್ರ ಉಳಿದಿದ್ದರು. ಮೊದಲ ಎರಡೂ ಪ್ರಯತ್ನದಲ್ಲೂ ಇಬ್ಬರು ಸ್ಪರ್ಧಿಗಳು ಇದನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ತಂಗವೇಲು 3ನೇ ಪ್ರಯತ್ನದಲ್ಲಿ ವಿಫಲರಾದರೆ, ಸ್ಯಾಮ್‌ ಕೊನೆಯ ಅವಕಾಶದಲ್ಲಿ 1.88 ಮೀ. ಪೂರ್ಣಗೊಳಿಸಿ ಚಿನ್ನಕ್ಕೆ ಮುತ್ತಿಟ್ಟರು. ಒಂದೊಮ್ಮೆ ಸ್ಯಾಮ್‌ ಸಹ 3ನೇ ಪ್ರಯತ್ನದಲ್ಲಿ ವಿಫಲರಾಗಿದ್ದರೆ, ಇಬ್ಬರಿಗೂ ಮತ್ತೊಂದು ಅವಕಾಶ ಲಭಿಸುತ್ತಿತ್ತು. ಇದು ತಂಗವೇಲು ಪಾಲಿಗೆ ಮತ್ತೊಂದು ಸುವರ್ಣಾಕಾಶ ಆದರೂ ಆಗಬಹುದಿತ್ತು.

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ