* ಟೋಕಿಯೋ ಪ್ಯಾರಾಲಿಂಪಿಕ್ಸ್ ಆರ್ಚರಿಯಲ್ಲಿ ಕಂಚಿನ ಪದಕ ಗೆದ್ದ ಹರ್ವಿಂದರ್ ಸಿಂಗ್
* ಪ್ಯಾರಾಲಿಂಪಿಕ್ಸ್ ಆರ್ಚರಿಯಲ್ಲಿ ದೇಶಕ್ಕೆ ಪದಕ ಗೆದ್ದ ಮೊದಲ ಸಾಧಕ ಹರ್ವಿಂದರ್
* ಹರ್ವಿಂದರ್ ಪ್ಯಾರಾಲಿಂಪಿಕ್ಸ್‌ನತ್ತ ಒಲವು ತೋರಲು ಲಂಡನ್ ಒಲಿಂಪಿಕ್ಸ್ ಕಾರಣ..!
ಟೋಕಿಯೋ(ಸೆ.04): ಪ್ಯಾರಾಲಿಂಪಿಕ್ಸ್ ಆರ್ಚರಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನ್ನುವ ದಾಖಲೆಯನ್ನು ಹರ್ವಿಂದರ್ ಸಿಂಗ್ ಶುಕ್ರವಾರ ಬರೆದರು. ಪುರುಷರ ರೀಕರ್ವ್ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕಕ್ಕೆ ಅವರು ಮುತ್ತಿಟ್ಟರು. ಹರ್ವಿಂದರ್ ಆರ್ಚರಿಪಟುವಾಗಲೂ ಲಂಡನ್ ಒಲಿಂಪಿಕ್ಸ್ ಕಾರಣವಂತೆ.
ಹೌದು, ಹರಾರಯಣದ ಕೈಥಲ್ ಎಂಬಲ್ಲಿ 1991ರಲ್ಲಿ ಹರ್ವಿಂದರ್ ಸಿಂಗ್ ಜನಿಸಿದರು. ಅವರಿಗೆ ಒಂದೂವರೆ ವರ್ಷವಿದ್ದಾಗ ಡೆಂಘಿ ಜ್ವರಕ್ಕೆ ನೀಡಿದ ಚುಚ್ಚು ಮದ್ದಿನ ಅಡ್ಡ ಪರಿಣಾಮದಿಂದಾಗಿ ಅವರ ಕಾಲುಗಳು ಶಕ್ತಿ ಕಳೆದುಕೊಂಡವು. ಇದರಿಂದ ಅವರು ಸರಿಯಾಗಿ ನಡೆದಾಡಲು ಕಷ್ಟ ಪಡಬೇಕಾಯಿತು. ಓದಿನಲ್ಲಿ ಮುಂದಿದ್ದ ಹರ್ವಿಂದರ್, ಕ್ರೀಡೆಯಲ್ಲೂ ಅಪಾರ ಆಸಕ್ತಿ ಹೊಂದಿದ್ದರು.
for Harvinder Singh! 🔥
's first ever medal in - A thrilling shoot-off win against 's Kim Min Su scripts history! 🏹
The third medal of the day for the nation. 💪 pic.twitter.com/dwWTh2ViZN
undefined
2012ರ ಲಂಡನ್ ಒಲಿಂಪಿಕ್ಸ್ ಆರ್ಚರಿ ಸ್ಪರ್ಧೆಗಳನ್ನು ಟೀವಿಯಲ್ಲಿ ವೀಕ್ಷಿಸಿ ಸ್ಫೂರ್ತಿ ಪಡೆದ ಹರ್ವಿಂದರ್ ಮರು ದಿನವೇ ಆರ್ಚರಿ ರೇಂಜ್‌ಗೆ ಸೇರಿಕೊಂಡರು. 2018ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಅವರು, ನವದೆಹಲಿಯಲ್ಲಿ ಎಕನಾಮಿಕ್ಸ್ ವಿಷಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಹರ್ವಿಂದರ್ ತಮ್ಮ ಹೊಲದಲ್ಲೇ ಅಭ್ಯಾಸ ನಡೆಸುತ್ತಿದ್ದ ವಿಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಕನ್ನಡತಿ ಸುಮಾ ಶಿರೂರು ಗರಡಿಯಲ್ಲಿ ಪಳಗಿದ ಅವನಿ!
ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದು ಭಾರತೀಯ ಶೂಟಿಂಗ್‌ನಲ್ಲಿ ಹೊಸ ತಾರೆಯಾಗಿ ಬೆಳಗುತ್ತಿರುವ ಅವನಿ ಲೇಖರಾ ಸಾಧನೆ ಹಿಂದೆ ಕನ್ನಡತಿ ಸುಮಾ ಶಿರೂರು ಅವರ ಪಾತ್ರವೂ ಇದೆ.
ಪ್ಯಾರಾ ಅಥ್ಲೀಟ್ ಆಗೋದೇಗೆಂದು ಗೂಗಲ್‌ನಲ್ಲಿ ಹುಡುಕಿದ್ದ ಬೆಳ್ಳಿ ಪದಕ ವಿಜೇತ ಪ್ರವೀಣ್ ಕುಮಾರ್!
ಸುಮಾ, ಭಾರತೀಯ ಕಿರಿಯರ ರೈಫಲ್ ಶೂಟಿಂಗ್ ತಂಡದ ಕೋಚ್ ಆಗಿದ್ದು, ಅವನಿಗೆ ಮಾರ್ಗದರ್ಶನ ನೀಡಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಸುಮಾ ಏಷ್ಯನ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಪದಕ ಗೆದ್ದಿದ್ದರು. 2004ರ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದರು.