ಪ್ಯಾರಾಲಿಂಪಿಕ್ಸ್‌; ಭರ್ಜರಿ ಬೇಟೆ, ಶೂಟರ್‌ ಮನೀಶ್‌ಗೆ ಚಿನ್ನ, ಸಿಂಗ್‌ರಾಜ್‌ಗೆ ಬೆಳ್ಳಿ..!

By Suvarna News  |  First Published Sep 4, 2021, 9:58 AM IST

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 19 ವರ್ಷದ ಮನೀಶ್‌ ನರ್ವಾಲ್‌ 218.2 ಅಂಕಗಳನ್ನು ಗಳಿಸುವ ಮೂಲಕ ಪ್ಯಾರಾಲಿಂಪಿಕ್ಸ್‌ ರೆಕಾರ್ಡ್‌ನೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.


ಟೋಕಿಯೋ(ಸೆ.04): ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಶನಿವಾರ ಭಾರತದ ಪ್ಯಾರಾಥ್ಲೀಟ್‌ಗಳು ಭರ್ಜರಿಯಾಗಿಯೇ ಶುಭಾರಂಭ ಮಾಡಿದ್ದಾರೆ. ಪುರುಷರ ಮಿಶ್ರ 50 ಮೀಟರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಮನೀಶ್‌ ನರ್ವಾಲ್‌ ಚಿನ್ನದ ಪದಕ್ಕೆ ಶೂಟ್‌ ಮಾಡಿದರೆ, ಸಿಂಗ್‌ರಾಜ್ ಅಧಾನ ಬೆಳ್ಳಿ ಪದಕ ಜಯಿಸಿದ್ದಾರೆ. ಇದರೊಂದಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 19 ವರ್ಷದ ಮನೀಶ್‌ ನರ್ವಾಲ್‌ 218.2 ಅಂಕಗಳನ್ನು ಗಳಿಸುವ ಮೂಲಕ ಪ್ಯಾರಾಲಿಂಪಿಕ್ಸ್‌ ರೆಕಾರ್ಡ್‌ನೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇನ್ನು ಪುರುಷರ 10 ಮೀಟರ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದ 38 ವರ್ಷದ ಸಿಂಗ್‌ರಾಜ್‌ ಅಧಾನ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಗ್‌ರಾಜ್ 216.7 ಅಂಕಗಳನ್ನು ಗಳಿಸುವ ಮೂಲಕ ಬೆಳ್ಳಿ ಪದಕವನ್ನು ಮುತ್ತಿಕ್ಕಿದ್ದಾರೆ.



🥇🥉Avani
🥇Sumit
🥇Manish
🥈Bhavina 🏓
🥈Nishad
🥈Yogesh
🥈Devendra
🥈Mariyappan
🥈Praveen
🥈🥉Singhraj
🥉Sundar
🥉Sharad
🥉 Harvinder 🏹

— Doordarshan Sports (@ddsportschannel)

Goosebumps! Indian National Anthem playing at Manish Narwal's Victory Ceremony at

We really 💜 this! pic.twitter.com/aqyo6sxqs2

— Doordarshan Sports (@ddsportschannel)

Its a 🥇 with a New for in Mixed 50M Pistol SH1 !!! 🇮🇳🤩 Another double podium finish in the same event for yet again!!✨👏🏼👏🏼 pic.twitter.com/fptPhT3tTI

— Paralympic India 🇮🇳 #Cheer4India 🏅 #Praise4Para (@ParalympicIndia)

Tap to resize

Latest Videos

ಟೋಕಿಯೋ ಪ್ಯಾರಾಲಿಂಪಿಕ್ಸ್‌ ನಲ್ಲಿ ಶೂಟಿಂಗ್‌ನಲ್ಲಿ ಭಾರತ 5ನೇ ಪದಕ ಜಯಿಸಿದಂತಾಗಿದೆ. ಮನೀಶ್‌ ಹಾಗೂ ಸಿಂಗ್‌ರಾಜ್ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.
 

👏👏👏's Singhraj Adhana wins his second medal of the - a in the Mixed 50m Pistol SH1 Final! 🔥

It's 1⃣5⃣ medals for 🇮🇳! pic.twitter.com/7h9yDG0MJK

— #Tokyo2020 for India (@Tokyo2020hi)
click me!