ಸಜನ್ ಪ್ರಕಾಶ್ to ಭವಾನಿ ದೇವಿ; ದಾಖಲೆಯೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಅಥ್ಲೀಟ್ಸ್ ನಾಳೆ ಕಣಕ್ಕೆ!

By Suvarna News  |  First Published Jul 25, 2021, 9:17 PM IST
  • ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ
  • ದಾಖಲೆಯೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕ್ರೀಡಾಪಟುಗಳು ನಾಳೆ ಕಣಕ್ಕೆ
  • ನಾಳೆ 9 ಕ್ರೀಡೆಗಳಲ್ಲಿ ಭಾರತೀಯ ಅಥ್ಲೀಟ್ಸ್ ಹೋರಾಟ

ಟೋಕಿಯೋ(ಜು.25): ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೀರಾಬಾಯಿ ಚಾನು ಪದಕದೊಂದಿಗೆ ಭಾರತ ಖಾತೆ ತೆರೆದಿದೆ. ಇದೀಗ ಭಾರತೀಯ ಕ್ರೀಡಾಪಟುಗಳ ಮೇಲೆ ಪದಕ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ನಾಳೆ(ಜು.26) ಒಲಿಂಪಿಕ್ಸ್‌ನ 9 ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಹೋರಾಟ ನಡೆಸಲಿದ್ದಾರೆ.

ದಾಖಲೆ ನಿರ್ಮಿಸಿದ ಸಜನ್ ಪ್ರಕಾಶ್; ಟೊಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಈಜುಪಟು!

Latest Videos

undefined

ವಿಶೇಷವಾಗಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದು ದಾಖಲೆ ಬರೆದ ಕ್ರೀಡಾಪಟುಗಳು ನಾಳೆ ಕಣಕ್ಕಿಳಿಯುತ್ತಿದ್ದಾರೆ.  ಒಲಿಂಪಿಕ್ಸ್ ಕ್ರೀಡೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಈಜು ಸ್ಪರ್ಧೆ ಹಾಗೂ ಫೆನ್ಸಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದೆ. ನಾಳೆ ಈ ಎರಡು ಕ್ರೀಡೆಗಳಲ್ಲಿ ಭಾರತದ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ಬಟರ್ ಫ್ಲೈ ಸ್ವಿಮ್ಮಿಂಗ್‌ನಲ್ಲಿ ಭಾರತದ ಸಜನ್ ಪ್ರಕಾಶ್ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಇದೇ ಮೊದಲ ಬಾರಿಗೆ ಫೆನ್ಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಮಹಿಳೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಭವಾನಿ ದೇವಿ ಕೂಡ ನಾಳೆ ಅಖಾಡಕ್ಕಿಳಿಯುತ್ತಿದ್ದಾರೆ.

ಈಜು, ಫೆನ್ಸಿಂಗ್ ಜೊತೆ ಪುರುಷರ ಬಾಕ್ಸಿಂಗ್ ,  ಆರ್ಚರಿ, ಶೂಟಿಂಗ್, ಮಹಿಳಾ ಹಾಕಿ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಕ್ರೀಡೆಯಲ್ಲೂ ಭಾರತೀಯ ಅಥ್ಲೀಟ್ ಹೋರಾಟ ಮಾಡಲಿದ್ದಾರೆ.
 

click me!