2020ರ ಒಲಿಂಪಿಕ್ಸ್‌ಗೆ 90,000 ಕೋಟಿ ಬಜೆಟ್‌!

By Kannadaprabha NewsFirst Published Dec 21, 2019, 11:30 AM IST
Highlights

ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಲು ಜಪಾನ್ ಸಜ್ಜಾಗಿದೆ. ಇದೀಗ ಭಾರತ ಸೇರಿದಂತೆ 339 ದೇಶಗಳು ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿದೆ. ಈ ಕ್ರೀಡಾಕೂಟದ ಅಂದಾಜು  ವೆಚ್ಚ ಬಹಿರಂಗವಾಗಿದ್ದು, ಅಚ್ಚರಿ ಮೂಡಿಸುವಂತಿದೆ.

ಟೋಕಿಯೋ(ಡಿ.21): ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಪ್ರತಿಷ್ಠಿತ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಖರ್ಚು ಮಾಡಲಾಗುತ್ತಿರುವ ಅಂದಾಜು ಮೊತ್ತ ಬರೋಬ್ಬರಿ 90 ಸಾವಿರ ಕೋಟಿ ರುಪಾಯಿ. ಕ್ರೀಡಾಕೂಟಕ್ಕೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಕ್ರೀಡಾಕೂಟಕ್ಕೆ ಖರ್ಚು ಮಾಡಲಾಗುತ್ತಿರುವ ಅಂದಾಜು ವೆಚ್ಚವನ್ನು ಆಯೋಜಕರು ಬಹಿರಂಗಪಡಿಸಿದ್ದಾರೆ. 

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌ ಸ್ಟೇಡಿಯಂ ಉದ್ಘಾಟನೆ!.

ಮ್ಯಾರಥಾನ್‌ ಮತ್ತು ವಾಕ್‌ ರೇಸ್‌ಗಳ ಖರ್ಚು ನೀಡುವ ವಿಚಾರದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್‌ ಕಮಿಟಿ(ಐಒಸಿ) ಇನ್ನಷ್ಟೇ ಅಂತಿಮ ನಿರ್ಧಾರಕ್ಕೆ ಬರಬೇಕಿದೆ. ಇವೆಲ್ಲದರ ನಡುವೆ ಪ್ರಾದೇಶಿಕ ಪ್ರಾಜೋಜಕತ್ವದಿಂದ ಮತ್ತು ಟಿಕೆಟ್‌ ಮಾರಾಟದಿಂದ 2 ಸಾವಿರ ಕೋಟಿಯಷ್ಟುಆದಾಯವನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಆಯೋಜಕರಿದ್ದಾರೆ.

ಇದನ್ನೂ ಓದಿ: ಉದ್ದೀಪನಾ ಮದ್ದು ಸೇವನೆ: ರಷ್ಯಾ ಮೇಲೆ 4 ವರ್ಷ ಬ್ಯಾನ್..!..

ಜಪಾನ್‍ನ ಟೋಕಿಯೋ ನಗರ 2020ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದೆ. ಜುಲೈ 24 ರಿಂದ ಕ್ರೀಡಾಕೂಟ ಆರಂಭಗೊಳ್ಳಲಿದ್ದು, ಆಗಸ್ಟ್ 9ರಂದು ಕೊನೆಗೊಳ್ಳಲಿದೆ. ಭಾರತ ಸೇರಿದಂತೆ 339 ದೇಶಗಳು ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದೆ. ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ 2016ರ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಲಾಗಿತ್ತು. 

ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಪ್ರತಿಷ್ಠಿತ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಖರ್ಚು ಮಾಡಲಾಗುತ್ತಿರುವ ಅಂದಾಜು ಮೊತ್ತ ಬರೋಬ್ಬರಿ 90 ಸಾವಿರ ಕೋಟಿ ರುಪಾಯಿ. ಕ್ರೀಡಾಕೂಟಕ್ಕೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಕ್ರೀಡಾಕೂಟಕ್ಕೆ ಖರ್ಚು ಮಾಡಲಾಗುತ್ತಿರುವ ಅಂದಾಜು ವೆಚ್ಚವನ್ನು ಆಯೋಜಕರು ಬಹಿರಂಗಪಡಿಸಿದ್ದಾರೆ. 

click me!