ಟೋಕಿಯೋ ಒಲಿಂಪಿಕ್ಸ್‌ ಸ್ಟೇಡಿಯಂ ಉದ್ಘಾಟನೆ!

By Kannadaprabha News  |  First Published Dec 16, 2019, 2:00 PM IST

ವಿಶ್ವದ ಅತಿದೊಡ್ಡ ಕ್ರೀಡಾಜಾತ್ರೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇನ್ನು ಕೇವಲ 7 ತಿಂಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಜಪಾನ್ 60 ಸಾವಿರ ಮಂದಿ ಕುಳಿತು ಆಟೋಟಗಳನ್ನು ವೀಕ್ಷಿಸುವಂತಹ ಸ್ಟೇಡಿಯಂ ಅನಾವರಣಗೊಳಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..   


ಟೋಕಿಯೋ(ಡಿ.16): 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಇನ್ನು 7 ತಿಂಗಳು ಬಾಕಿ ಇರುವಂತೆಯೇ ಆಯೋಜಕರು ಮುಖ್ಯ ಕ್ರೀಡಾಂಗಣವನ್ನು ಉದ್ಘಾಟನೆ ಮಾಡಿದ್ದಾರೆ. ಭಾನುವಾರ ಪ್ರಧಾನಿ ಶಿನ್ಜೋ ಅಬೆ ಕ್ರೀಡಾಂಗಣದ ಉದ್ಘಾಟನೆ
ನಡೆಸಿದರು. 

Hello, our Stadium! 🏟

The Olympic Stadium is ready to host the world. 🙌🏻😍🌏 🇯🇵 pic.twitter.com/eRGe9tbDhP

— #Tokyo2020 (@Tokyo2020)

ಉದ್ದೀಪನಾ ಮದ್ದು ಸೇವನೆ: ರಷ್ಯಾ ಮೇಲೆ 4 ವರ್ಷ ಬ್ಯಾನ್..!

Tap to resize

Latest Videos

ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿರುವ ಕ್ರೀಡಾಂಗಣ 60,000 ಆಸನ ಸಾಮರ್ಥ್ಯ ಹೊಂದಿದೆ. ಬಿಸಿಲ ಧಗೆಯಿಂದ ಕ್ರೀಡಾಪಟುಗಳನ್ನು, ಪ್ರೇಕ್ಷಕರನ್ನು ರಕ್ಷಿಸಲು ಕ್ರೀಡಾಂಗಣದ ಮೇಲ್ಛಾಚಣಿ ಮೇಲೆ ಗಿಡಗಳನ್ನು ಬೆಳೆಸಲಾಗಿದೆ. ಕ್ರೀಡಾಂಗಣದ ಸುತ್ತ ಮರಗಳನ್ನು ಬೆಳೆಸಲಾಗಿದ್ದು, 8 ಮಂಜು ಸಿಂಪಡಿಸುವ ಯಂತ್ರ, 185 ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಜತೆಗೆ 16 ಹವಾ ನಿಯಂತ್ರಣ ಕೊಠಡಿಗಳನ್ನು ನಿರ್ಮಿಸಲಾಗಿದೆ. 

We must tell you all about the big day out and had at the Olympic Stadium. 🏟️

They got to experience the beautiful exterior, what it's like to be a spectator and even got to go on the track!!

Stay tuned all day as we share more amazing photos! 😍 pic.twitter.com/TB2vOsiipI

— #Tokyo2020 (@Tokyo2020)

ಟೋಕಿಯೋಗೆ ಭಾರತದ 15 ಶೂಟರ್ಸ್; ರಿಜಿಜು ಅಭಿನಂದನೆ

ಈ ಕ್ರೀಡಾಂಗಣ ಒಲಿಂಪಿಕ್ಸ್‌ನ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಿಗೆ ಆತಿಥ್ಯ ವಹಿಸಲಿದೆ. ಜತೆಗೆ ಕೆಲ ಪ್ರಮುಖ ಅಥ್ಲೆಟಿಕ್ಸ್‌ ಸ್ಪರ್ಧೆಗಳು ಇಲ್ಲಿ ನಡೆಯಲಿವೆ. ಕ್ರೀಡಾಂಗಣ ನಿರ್ಮಾಣಕ್ಕೆ 10 ಸಾವಿರ ಕೋಟಿ ರುಪಾಯಿ ಖರ್ಚಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ಟೂರ್ನಿಯು ಜುಲೈ 24ರಂದು ಆರಂಭವಾಗಿ ಆಗಸ್ಟ್ 09ರಂದು ಮುಕ್ತಾಯವಾಗಲಿದೆ. ಭಾರತದ ಹಲವಾರು ಶೂಟರ್’ಗಳು, ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಸೇರಿದಂತೆ ಈಗಾಗಲೇ ಹಲವು ಅಥ್ಲೀಟ್ಸ್’ಗಳು ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಗಿಟ್ಟಿಸಿಕೊಂಡಿವೆ.  

click me!