ಉದ್ದೀಪನಾ ಮದ್ದು ಸೇವನೆ: ರಷ್ಯಾ ಮೇಲೆ 4 ವರ್ಷ ಬ್ಯಾನ್..!

By Kannadaprabha News  |  First Published Dec 10, 2019, 12:07 PM IST

ಉದ್ದೀಪನಾ ಮದ್ದು ಸೇವನೆಗೆ ಸಂಬಂಧಿಸಿದ ವರದಿಗಳನ್ನು ತಿರುಚಿದ್ದಕ್ಕಾಗಿ ವಾಡಾ[WADA] ರಷ್ಯಾ ಮೇಲೆ 4 ವರ್ಷಗಳ ನಿಷೇಧ ಹೇರಿದೆ. ಹೀಗಾಗಿ ರಷ್ಯಾ ಮುಂಬರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..


ಮಾಸ್ಕೋ(ಡಿ.10): ಕ್ರೀಡಾಲೋಕದ ಜಾಗತಿಕ ಮಟ್ಟದಲ್ಲಿ ರಷ್ಯಾ ಅತಿದೊಡ್ಡ ಮುಖಭಂಗಕ್ಕೆ ಒಳಗಾಗಿದೆ. ಜಾಗತಿಕ ಮಟ್ಟದಲ್ಲಿ ವಿಶ್ವ ಉದ್ದೀಪನಾ ನಿಗ್ರಹ ಘಟಕ ರಷ್ಯಾವನ್ನು ಮುಂದಿನ 4 ವರ್ಷಗಳ ಕಾಲ ನಿಷೇಧಿಸುವ ನಿರ್ಧಾರಕ್ಕೆ ಬಂದಿದೆ. 

WADA Executive Committee unanimously endorses four-year period of non-compliance for the Russian Anti-Doping Agency:https://t.co/K8QjAz7u4R

— WADA (@wada_ama)

ಡ್ರಗ್ಸ್ ಸೇವಿಸಿ ಬ್ಯಾನ್ ಆದ ಟಾಪ್ 5 ಕ್ರಿಕೆಟಿಗರಿವರು..!

Tap to resize

Latest Videos

ಮಾಸ್ಕೋದಲ್ಲಿನ ಲ್ಯಾಬೊರೇಟರಿಯಲ್ಲಿ ಉದ್ದೀಪನಾ ಮದ್ದು ಸೇವನೆಗೆ ಸಂಬಂಧಿಸಿದ ವರದಿಗಳನ್ನು ತಿರುಚಿದ್ದಕ್ಕಾಗಿ ಶಿಕ್ಷೆ ರೂಪದಲ್ಲಿ ವಾಡಾ ಈ ಕಠಿಣ ಕ್ರಮ ಕೈಗೊಂಡಿದೆ. ಆದರೆ ರಷ್ಯಾಗೆ ವಾಡಾದ ಈ ತೀರ್ಮಾನವನ್ನು ಕ್ರೀಡಾ ಮಧ್ಯಸ್ಥಿಕ ನ್ಯಾಯಾಲಯದಲ್ಲಿ ಪ್ರಶ್ನಿಸಲು 21 ದಿನಗಳ ಅವಕಾಶವನ್ನು ನೀಡಲಾಗಿದೆ.

ದಕ್ಷಿಣ ಏಷ್ಯನ್ ಗೇಮ್ಸ್: ತ್ರಿಶತಕದತ್ತ ಭಾರತ ದಾಪುಗಾಲು

ಒಲಿಂಪಿಕ್ಸ್ ಸೇರಿದಂತೆ ಮುಂದಿನ 4 ವರ್ಷಗಳ ಕಾಲ ನಡೆಯುವ ಯಾವುದೇ ಕೂಟಗಳಲ್ಲಿ ರಷ್ಯಾ ಭಾಗವಹಿಸುವಂತಿಲ್ಲ. 2020ರ ಟೋಕಿಯೋ ಒಲಿಂಪಿಕ್ಸ್, 2022ರ ವಿಶ್ವಕಪ್ ಫುಟ್ಬಾಲ್‌ನಲ್ಲಿ ರಷ್ಯಾ ಪಾಲ್ಗೊಳ್ಳುವಿಕೆ ಇರುವುದಿಲ್ಲ. ಟೋಕಿಯೋ ಒಲಿಂಪಿಕ್ಸ್ ಕೂಟವು 2020ರ ಜುಲೈ 24ರಿಂದ ಆರಂಭವಾಗಲಿದೆ. 
 

click me!