* ಭಾರತಕ್ಕಿಂದು ಕುಸ್ತಿಯಲ್ಲೇ 3 ಒಲಿಂಪಿಕ್ಸ್ ಪದಕ ಗೆಲ್ಲುವ ಅವಕಾಶ
* ಚಿನ್ನಕ್ಕಾಗಿ ಪೈಪೋಟಿ ನಡೆಸಲಿರುವ ರವಿಕುಮಾರ್ ದಹಿಯಾ
* ಕಂಚಿನ ಪದಕಕ್ಕಾಗಿ ಅನ್ಶು ಮಲಿಕ್, ದೀಪಕ್ ಪೂನಿಯಾ ಸೆಣಸಾಟ
ಟೋಕಿಯೋ(ಆ.05): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲೇ ಗುರುವಾರ ಭಾರತಕ್ಕೆ ಮೂರು ಗೆಲ್ಲುವ ಅವಕಾಶ ಒದಗಿ ಬಂದಿದೆ. ರವಿ ದಹಿಯಾ ಅವರ ಫೈನಲ್ ಪಂದ್ಯವಷ್ಟೇ ಅಲ್ಲ, ಗುರುವಾರ ಮತ್ತೆರಡು ಪಂದ್ಯಗಳ ಮೇಲೆಯೂ ಭಾರತೀಯರು ಗಮನ ಹರಿಸಲಿದ್ದಾರೆ.
ಪುರುಷರ 86 ಕೆ.ಜಿ. ಫ್ರೀ ಸ್ಟೈಲ್ ಕುಸ್ತಿಯ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ ದೀಪಕ್ ಪೂನಿಯಾ ಹಾಗೂ ಮಹಿಳೆಯರ 57 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲೇ ಸೋತರೂ, ರಿಪಿಶಾಜ್ ಸುತ್ತಿಗೆ ಅರ್ಹತೆ ಪಡೆದಿರುವ ಅನ್ಶು ಮಲಿಕ್ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ. ದೀಪಕ್ ಸೆಮೀಸ್‌ನಲ್ಲಿ ಅಮೆರಿಕದ ಡೇವಿಡ್ ಟೇಲರ್ ವಿರುದ್ಧ 0-10ರಲ್ಲಿ ಸೋತು ನಿರಾಸೆ ಅನುಭವಿಸಿದರು.
ಟೋಕಿಯೋ 2020: ಫೈನಲ್‌ಗೆ ಲಗ್ಗೆಯಿಟ್ಟ ಪೈಲ್ವಾನ್ ರವಿ ಕುಮಾರ್ ದಹಿಯಾ, ದೇಶಕ್ಕೆ ಮತ್ತೊಂದು ಪದಕ ಫಿಕ್ಸ್..!
ಇನ್ನು ಅನ್ಶು ಮಲಿಕ್, ಮೊದಲ ಸುತ್ತಿನಲ್ಲಿ 2 ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ಬೆಲಾರುಸ್‌ನ ಇರಿನಾ ಕುರಾಚ್ಕೀನಾ ವಿರುದ್ಧ ಸೋಲು ಕಂಡಿದ್ದರು. ಇರಿನಾ ಫೈನಲ್‌ಗೇರಿದ್ದರಿಂದ ಅನ್ಶುಗೆ ರಿಪಿಶಾಜ್ ಸುತ್ತಿಗೆ ಅರ್ಹತೆ ದೊರೆಯಿತು. ಈ ಸುತ್ತಿನಲ್ಲಿ ಅನ್ಶು 2 ಪಂದ್ಯಗಳನ್ನು ಗೆದ್ದರೆ ಪದಕ ದೊರೆಯಲಿದೆ.