ಗಾಂಧಿಜಿಯದ್ದು ಅಹಿಂಸೆ ತತ್ವ, ಲೋವ್ಲಿನಾ ಪಂಚ್‌ನಿಂದ ಖ್ಯಾತಿ; ಬಾಕ್ಸರ್‌ಗೆ ಅ.2ರ ವಿವರಣೆ ನೀಡಿದ ಮೋದಿ!

By Suvarna NewsFirst Published Aug 4, 2021, 9:51 PM IST
Highlights
  • ಅಕ್ಟೋಬರ್ 2 ರಂದು ಹುಟ್ಟಿದ ಕಂಚು ಗೆದ್ದ ಲೋವ್ಲಿನಾ
  • ಗಾಂಧಿಜಿಯ ತತ್ವ, ಲೋವ್ಲಿನಾ ಪಂಚ್ ಕುರಿತು ಮೋದಿ ವಿವರಣೆ
  • ಒಬ್ಬರು ಶಾಂತಿ, ಮತ್ತೊಬ್ಬರದ್ದು ಕ್ರಾಂತಿ ಎಂದು ಮೋದಿ

ನವದೆಹಲಿ(ಆ.04): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಬಾಕ್ಸರ್ ಬೊರ್ಗೊಹೈನ್ ಲೋವ್ಲಿನಾ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಲೋವ್ಲಿನಾ ಐತಿಹಾಸಿಕ ಸಾಧನೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಬಾಕ್ಸರ್‌ಗೆ ಶುಭಕೋರಿದ್ದಾರೆ. ಈ ವೇಳೆ ಅಕ್ಟೋಬರ್ 2 ರಂದು ಹುಟ್ಟಿದ ಲೋವ್ಲಿನಾ ಜೊತೆ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಬಾಕ್ಸರ್ ಲೊವ್ಲಿನಾಗೆ ಶುಭ ಕೋರಿದ ಮೋದಿ!

ಲೋವ್ಲಿನಾ ಅಕ್ಟೋಬರ್ 2 ರಂದು ಜನಿಸಿದ್ದಾರೆ. ಅಕ್ಟೋಬರ್ 2 ಗಾಂಧಿ ಜಯಂತಿ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 2 ರಂದ ಜನಿಸಿದ ಲೋವ್ಲಿನಾಗೆ ಗಾಂಧಿ ಕುರಿತ ವಿವರಣೆ ನೀಡಿದ್ದಾರೆ. ಗಾಂಧಿಜಿಯದ್ದು ಅಹಿಂಸಾ ತತ್ವಾವಾಗಿದೆ. ಆದರೆ ಲೋವ್ಲಿನಾ ಪಂಚ್ ಮೂಲಕ ಖ್ಯಾತಿ ಪಡೆದಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌: ಕಂಚಿನ ಪದಕ ಗೆದ್ದು ಬೀಗಿದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್‌

ಲೋವ್ಲಿನಾ 69 ಕೆಜಿ ವಿಭಾಗ ಮಹಿಳಾ ಬಾಕ್ಸಿಂಗ್‌ನಲ್ಲಿ ದಿಟ್ಟ ಹೋರಾಟ ನೀಡಿದ ಕಂಚಿನ ಪದಕ ಗೆದ್ದಿದ್ದಾರೆ. ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದ ಲೋವ್ಲಿನಾ ಸೆಮಿಫೈನಲ್ ಪಂದ್ಯದಲ್ಲಿ ಟರ್ಕಿಯ ಬುಸಾನೆಜ್ ವಿರುದ್ಧ ಸೋಲು ಕಂಡರು ಹೀಗಾಗಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು. 

click me!