ಟೋಕಿಯೋ 2020: ಕೊನೆ ನಿಮಿಷದಲ್ಲಿ 11 ಸೆಕೆಂಡ್‌ ನಿಂತ ಗಡಿಯಾರ: ಎಡವಟ್ಟು!

By Suvarna News  |  First Published Aug 6, 2021, 7:36 AM IST

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡ

* ಜರ್ಮನಿ ಎದುರು ಭಾರತಕ್ಕೆ 5-4 ಗೋಲು ಅಂತರದ ಜಯ

* ಭಾರತೀಯರ ಹೃದಯಬಡಿತ ಹೆಚ್ಚಿಸಿದ್ದ ಕೊನೆಯ 11 ಸೆಕೆಂಡ್‌ಗಳು


ಟೋಕಿಯೋ(ಆ.06): ಭಾರತ-ಜರ್ಮನಿ ನಡುವಿನ ರೋಚಕ ಕಾದಾಟದ ವೇಳೆ ಅಂತಿಮ ನಿಮಿಷದಲ್ಲಿ ಗಡಿಯಾರ 11 ಸೆಕೆಂಡ್‌ಗಳ ಕಾಲ ಸ್ಥಗಿತಗೊಂಡಿತ್ತು. ಆದರೆ ಆಟ ಮುಂದುವರಿದೇ ಇತ್ತು. ಆಯೋಜಕರ ಈ ಎಡವಟ್ಟಿನಿಂದ ಭಾರತಕ್ಕೆ ಪದಕ ಕೈತಪ್ಪುವ ಆತಂಕವೂ ಇತ್ತು. 

ಭಾರತ ಹಾಕಿ ತಂಡದ ಎದುರು ಒಂದೊಮ್ಮೆ ಜರ್ಮನಿ ಗೋಲು ಗಳಿಸಿದ್ದರೆ 5-5ರಲ್ಲಿ ಸಮಬಲ ಸಾಧಿಸಿದಂತಾಗುತ್ತಿತ್ತು. ಆಗ ಫಲಿತಾಂಶಕ್ಕಾಗಿ ಪೆನಾಲ್ಟಿಶೂಟೌಟ್‌ನ ಮೊರೆ ಹೋಗಲಾಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಅಲ್ಲದೇ ಕೊನೆ 6.5 ಸೆಕೆಂಡ್‌ ಬಾಕಿ ಇದ್ದಾಗ ಜರ್ಮನಿಗೆ ಪೆನಾಲ್ಟಿಕಾರ್ನರ್‌ ಅವಕಾಶ ದೊರೆಯಿತು. ಆದರೆ ಶ್ರೀಜೇಶ್‌ರ ಅದ್ಭುತ ಗೋಲ್‌ಕೀಪಿಂಗ್‌ ಭಾರತಕ್ಕೆ ಎದುರಾಗಬಹುದಾಗಿದ್ದ ಆತಂಕವನ್ನು ದೂರವಾಗಿಸಿತು. ಆಯೋಜಕರ ಈ ಎಡವಟ್ಟಿಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಮಾಜಿ ಅಂತಾರಾಷ್ಟ್ರೀಯ ಶೂಟರ್‌ ಹೀನಾ ಸಿಧು ಸೇರಿ ಅನೇಕ ತಾರಾ ಕ್ರೀಡಾಪಟುಗಳು ಸಹ ಈ ಎಡವಟ್ಟಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

ಟೋಕಿಯೋ ಒಲಿಂಪಿಕ್ಸ್: ಪುರುಷ & ಮಹಿಳಾ ಹಾಕಿ ತಂಡಕ್ಕೆ ಫ್ಯಾನ್ಸ್‌ ಫಿದಾ..!

ಜರ್ಮನಿ ವಿರುದ್ದದ ಕಂಚಿನ ಪದಕಕ್ಕಾಗಿನ ಕಾದಾಟದಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು 5-4 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಕ್ಕಿತು. ಇದರೊಂದೊಂದಿಗೆ 1980ರ ಬಳಿಕ ಅಂದರೆ 41 ವರ್ಷಗಳ ಬಳಿಕ ಭಾರತ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧನೆ ಮಾಡಿದೆ.
 

click me!