ಬೆಳ್ಳಿ ಗೆದ್ದ ರವಿಕುಮಾರ್‌ಗೆ 4 ಕೋಟಿ ನಗದು ಬಹುಮಾನ, ಸರ್ಕಾರಿ ಕೆಲಸ!

By Suvarna News  |  First Published Aug 5, 2021, 8:33 PM IST
  • ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಪಟು ರವಿಕುಮಾರ್ ದಹಿಯಾ
  • ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ರವಿ ಕುಮಾರ್
  • ರಸ್ಲರ್ ರವಿಕುಮಾರ್‌ಗೆ 4 ಕೋಟಿ ನದು ಬಹಮಾನ ಘೋಷಿಸಿದ ಹರ್ಯಾಣ

ಹರ್ಯಾಣ(ಆ.05):  ಟೋಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಭಾರತ ಮತ್ತೊಂದು ಪದಕ ಗೆದ್ದುಕೊಂಡಿದೆ. ಕುಸ್ತಿಯಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಹರ್ಯಾಣದ ಬಾಕ್ಸರ್‌ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ಭಾರತವೇ ಅಭಿನಂದನೆ ಹೇಳಿದೆ. ಇದೀಗ ಹರ್ಯಾಣ ಸರ್ಕಾರ ಬೆಳ್ಳಿ ಪದಕ ಗೆದ್ದ ರವಿಕುಮಾರ್‌ಗೆ ಭರ್ಜರಿ ಬಹುಮಾನ ಘೋಷಿಸಿದೆ.

ಟೋಕಿಯೋ 2020: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಪೈಲ್ವಾನ್ ರವಿಕುಮಾರ್ ದಹಿಯಾ

Latest Videos

undefined

ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಬಹುಮಾನ ಘೋಷಣೆಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರವಿಕುಮಾರ್ ಸಾಧನೆಗೆ 4 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಲಾಗಿದೆ. ಇನ್ನು ಕ್ಲಾಸ್ 1 ಸರ್ಕಾರಿ ಕೆಲಸ ನೀಡುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ ನಿವೇಶನ ಖರೀದಿಯಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡುವುದಾಗಿ ಕಟ್ಟರ್ ಘೋಷಿಸಿದ್ದಾರೆ.

ಸೋನಿಪತ್ ಜಿಲ್ಲೆಯ ನಹ್ರಿ ಗ್ರಾಮದ ರವಿಕುಮಾರ್ ದಹಿಯಾಗೆ ಮತ್ತೊಂದು ಬಹುಮಾನವನ್ನು ಹರ್ಯಾಣ ಸರ್ಕಾರ ನೀಡುತ್ತಿದೆ. ನಹ್ರಿ ಗ್ರಾಮದಲ್ಲಿ ರಸ್ಲಿಂಗ್ ಇಂಡೋರ್ ಸ್ಟೇಡಿಯಂ ನಿರ್ಮಿಸುವುದಾಗಿ ಹೇಳಿದ್ದಾರೆ. ಇಲ್ಲಿ ರವಿಕುಮಾರ್ ಯುವ ರಸ್ಲರ್‌ಗೆ ತರಭೇತಿ ನೀಡಲು ಅವಕಾಶ ಮಾಡಿಕೊಡುವುದಾಗಿ ಕಟ್ಟರ್ ಹೇಳಿದ್ದಾರೆ.

 

में रजत पदक जीतने पर रवि दहिया को हरियाणा सरकार द्वारा 4 करोड़ की ईनाम राशि और सरकार में क्लास वन की नौकरी व कंसेशनल रेट पर HSVP का प्लॉट देने की घोषणा करता हूँ।

बेटे रवि दहिया को हार्दिक शुभकामनाएं। pic.twitter.com/yrFoAiC9rm

— Manohar Lal (@mlkhattar)

23 ವರ್ಷದ ರವಿಕುಮಾರ್ ದಹಿಯಾ ಬೆಳ್ಳಿ ಪದಕದ ಮೂಲಕ ಭಾರತ ಒಟ್ಟು 5 ಪದಕ ಸಂಪಾದಿಸಿದೆ. ಎರಡು ಬೆಳ್ಳಿ ಹಾಗೂ 3 ಕಂಚಿನ ಪದಕ ಸಂಪಾದಿಸಿದೆ. ಈ ಮೂಕ ಪದಕ ಪಟ್ಟಿಯಲ್ಲಿ 65ನೇ ಸ್ಥಾನದಲ್ಲಿದೆ. ಇನ್ನು ಮೊದಲ ಸ್ಥಾನದಲ್ಲರುವ ಚೀನಾ 34 ಚಿನ್ನ, 24 ಬೆಳ್ಳಿ ಹಾಗೂ 16 ಕಂಚಿನ ಮೂಲಕ ಒಟ್ಟು 74 ಪದಕ ಗೆದ್ದುಕೊಂಡಿದೆ.

click me!