ಪ್ರೇಕ್ಷಕರಿಗೆ ಪ್ರವೇಶವಿಲ್ಲದಿದ್ರೂ ಕ್ರೀಡಾಂಗಣದಲ್ಲಿ 10,000 ಮಂದಿ!

Kannadaprabha News   | Asianet News
Published : Jul 24, 2021, 07:42 AM IST
ಪ್ರೇಕ್ಷಕರಿಗೆ ಪ್ರವೇಶವಿಲ್ಲದಿದ್ರೂ ಕ್ರೀಡಾಂಗಣದಲ್ಲಿ 10,000 ಮಂದಿ!

ಸಾರಾಂಶ

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ * ಕೊರೋನಾ ಭೀತಿಯ ನಡುವೆಯೇ ಟೋಕಿಯೋ 2020 ಆರಂಭ * ಟೋಕಿಯೋ ನ್ಯಾಷನಲ್‌ ಸ್ಟೇಡಿಯಂನಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

ಟೋಕಿಯೋ(ಜು.24): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಜುಲೈ 23ಕ್ಕೆ ಟೋಕಿಯೋದ ನ್ಯಾಷನಲ್ ಸ್ಟೇಡಿಯಂನಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ. ಈ ಉದ್ಘಾಟನಾ ಸಮಾರಂಭಕ್ಕೆ ಪ್ರೇಕ್ಷಕರನ್ನು ನಿರ್ಬಂಧಿಸಿದ್ದರೂ ಸ್ಟೇಡಿಯಂನಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಉಪಸ್ಥಿತರಿದ್ದರು.

ಹೌದು, ಕೋವಿಡ್‌ ಹಬ್ಬುವುದನ್ನು ತಡೆಯಲು ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಆದರೂ ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವೇಳೆ ಕ್ರೀಡಾಂಗಣದಲ್ಲಿ ಸುಮಾರು 10,400 ಮಂದಿ ಉಪಸ್ಥಿತರಿದ್ದರು. ಇದರಲ್ಲಿ 206 ರಾಷ್ಟ್ರಗಳ 6000 ಮಂದಿ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು, 900 ಮಂದಿ ಆಯೋಜನಾ ಸಮಿತಿ ಸದಸ್ಯರು ಹಾಗೂ ಗಣ್ಯರು, 3500 ಮಂದಿ ಪ್ರಸಾರಕರು, ಮಾಧ್ಯಮ ಸಿಬ್ಬಂದಿ, ಕಲಾವಿದರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಡ್ರೋನ್‌ಗಳ ಚಮತ್ಕಾರ!

ಉದ್ಘಾಟನಾ ಸಮಾರಂಭದ ಪ್ರಮುಖಾಂಶಗಳಲ್ಲಿ ಒಂದು ಡ್ರೋನ್‌ಗಳ ಚಮತ್ಕಾರ. 1824 ಡ್ರೋನ್‌ಗಳನ್ನು ಬಳಸಿ ಕ್ರೀಡಾಂಗಣದಲ್ಲಿ ಒಲಿಂಪಿಕ್ಸ್‌ನ ಚಿಹ್ನೆ, ಭೂಗೋಳ ಹಾಗೂ ಚಂದಿರನ ಆಕಾರಗಳನ್ನು ಸೃಷ್ಟಿಸಲಾಯಿತು. ಇದು ನೋಡುಗರನ್ನು ಬೆರಗಾಗಿಸಿತು.

ಟೋಕಿಯೋ 2020 ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ

ಕ್ರೀಡಾ ಜ್ಯೋತಿ ಹಚ್ಚಿಸಿದ ಒಸಾಕ

ಜಪಾನ್‌ ಖ್ಯಾತ ಟೆನಿಸ್‌ ಆಟಗಾರ್ತಿ, 4 ಗ್ರ್ಯಾನ್‌ ಸ್ಲಾಂಗಳ ಒಡತಿ, ಹಾಲಿ ವಿಶ್ವ ನಂ.2 ನವೊಮಿ ಒಸಾಕ ಒಲಿಂಪಿಕ್ಸ್‌ ಕ್ರೀಡಾ ಜ್ಯೋತಿಯನ್ನು ಹಚ್ಚಿಸಿದರು.

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ