* ಟೋಕಿಯೋ ಒಲಿಂಪಿಕ್ಸ್‌ನ ಎರಡನೇ ದಿನ ಭಾರತ ಶುಭಾರಂಭ
* ಭಾರತ ಮಿಶ್ರ ಆರ್ಚರಿ ತಂಡ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
* ದೀಪಿಕಾ ಕುಮಾರಿ-ಪ್ರವೀಣ್ ಜಾಧವ್ ಅವರಿದ್ದ ತಂಡ ಕ್ವಾರ್ಟರ್ ಪ್ರವೇಶ
ಟೋಕಿಯೋ(ಜು.24): ಭಾರತದ ತಾರಾ ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಜಾಧವ್ ಜೋಡಿ ಚೈನಾ ತೈಫೆಯ ಟಾಂಗ್ ಚಿನ್ ಚುನ್ ಮತ್ತು ಲಿನ್ ಚಿಯಾ ಇನ್ ಜೋಡಿಯನ್ನು ರೋಚಕವಾಗಿ ಮಣಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಮಿಶ್ರ ಆರ್ಚರಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರೊಂದಿಗೆ ಭಾರತ ಶನಿವಾರದ ಮುಂಜಾನೆಯೇ ಉತ್ತಮ ಆರಂಭ ಪಡೆದಿದೆ.
4 ಸೆಟ್‌ಗಳನ್ನೊಳಗೊಂಡ ಸ್ಪರ್ಧೆಯಲ್ಲಿ ಭಾರತ 5-3 ಅಂತರದಲ್ಲಿ ಚೈನಾ ತೈಪೆ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಮೊದಲ ಸೆಟ್‌ನಲ್ಲಿ ಚೈನೀಸ್ ತೈಪೆ 36 ಸ್ಕೋರ್ ಮಾಡಿದರೆ, ಭಾರತ 35 ಸ್ಕೋರ್ ಮಾಡಿತು. ಹೀಗಾಗಿ 2 ಅಂಕ ತೈಪೆ ತಂಡದ ಪಾಲಾಯಿತು. ಇನ್ನು ಎರಡನೇ ಸೆಟ್‌ನಲ್ಲಿ ಉಭಯ ತಂಡಗಳು ತಲಾ 38 ಅಂಕಗಳನ್ನು ಗಳಿಸುವ ಮೂಲಕ ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡವು. ಇನ್ನು ಮೂರನೇ ಸೆಟ್‌ನಲ್ಲಿ ಭಾರತದ ಆರ್ಚರಿ ಪಟುಗಳು ತಲಾ 10 ಸ್ಕೋರ್ ಗಳಿಸುವ ಮೂಲಕ 40 ಸ್ಕೋರ್ ಮಾಡಿತು. ತೈಪೆ ತಂಡವು 35 ಸ್ಕೋರ್‌ಗೆ ತೃಪ್ತಿಪಟ್ಟುಕೊಂಡಿತು. ಹೀಗಾಗಿ ಭಾರತ 3-3ರ ಸಮಬಲ ಸಾಧಿಸಿತು.
🔟 to win…
Deepika Kumari delivers a victory for India in the first-ever mixed team match at the . pic.twitter.com/x0JwjEdz4m
| |
Mixed Team 1/8 Eliminations Results and Jadhav advance to the next round as they get past Chinese Taipei with a 5-3 score! pic.twitter.com/QWSwy7Uunn
undefined
ಟೋಕಿಯೋ 2020: ಮೊದಲ ದಿನವೇ ಭಾರತ ಆರ್ಚರಿ ಪಟುಗಳಿಂದ ಉತ್ತಮ ಪ್ರದರ್ಶನ
ಕುತೂಹಲ ಕೆರಳಿಸಿದ ನಾಲ್ಕನೇ ಸೆಟ್: ನಿರ್ಣಾಯಕ ಸೆಟ್‌ನಲ್ಲಿ ಮೊದಲು ಬಾಣ ಪ್ರಯೋಗಿಸಿದ ಚೈನೀಸ್ ತೈಪೆಯ ಆರ್ಚರಿ ಪಟುಗಳು 10 ಹಾಗೂ 9 ಸ್ಕೋರ್ ಸಹಿತ 19 ಸ್ಕೋರ್ ಮಾಡಿದರು. ಇನ್ನು ಭಾರತ ಪರ ಪ್ರವೀಣ್ ಜಾಧವ್ 9 ಸ್ಕೋರ್ ಮಾಡಿದರೆ, ದೀಪಿಕಾ 8 ಸ್ಕೋರ್‌ಗಳಿಸಿದರು. ಹೀಗಾಗಿ ಭಾರತ ನಿರ್ಣಾಯಕ ಸೆಟ್‌ನಲ್ಲಿ 2 ಸ್ಕೋರ್ ಹಿಂದಿತ್ತು. ಎರಡನೇ ಹಂತದಲ್ಲಿ ಲಯ ಕಳೆದುಕೊಂಡ ಚೈನೀಸ್ ತೈಪೆ ಆಟಗಾರರು 8 ಹಾಗೂ 9 ಸ್ಕೋರ್ ಮಾಡಿದರು. ಹೀಗಾಗಿ ಭಾರತ ಕ್ವಾರ್ಟರ್ ಫೈನಲ್‌ಗೇರಲು 20 ಸ್ಕೋರ್ ಅಗತ್ಯವಿತ್ತು. ಈ ವೇಳೆ ಸಂಪೂರ್ಣ ಪ್ರಾಬಲ್ಯ ಮೆರೆದ ಪ್ರವೀಣ್ ಜಾಧವ್ ಹಾಗೂ ದೀಪಿಕಾ ಕುಮಾರಿ ತಲಾ 10 ಸ್ಕೋರ್ ಮಾಡುವ ಮೂಲಕ 37-36 ಸ್ಕೋರ್‌ಗಳಿಂದ ಮಣಿಸಿ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.