ಟೋಕಿಯೋ ಒಲಿಂಪಿಕ್ಸ್‌: ಅಮೆರಿಕ ಜಿಮ್ನಾಸ್ಟಿಕ್ ಪಟುವಿಗೆ ಕೋವಿಡ್ ಪಾಸಿಟಿವ್

By Suvarna News  |  First Published Jul 19, 2021, 6:30 PM IST

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭ

* ಅಮೆರಿಕದ ಮಹಿಳಾ ಜಿಮ್ನಾಸ್ಟಿಕ್‌ಗೆ ಕೋವಿಡ್ ಪಾಸಿಟಿವ್

* 24 ವರ್ಷದ ಅಮೆರಿಕದ ಸಿಮೊನೆ ಬಿಲಿಸ್‌ ಮಹಿಳಾ ಜಿಮ್ನಾಸ್ಟಿಕ್‌ನಲ್ಲಿ ಮಿಂಚುತ್ತಿದ್ದಾರೆ.


ನ್ಯೂಯಾರ್ಕ್‌(ಜು.19): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕಿದ್ದ ಅಮೆರಿಕ ಮಹಿಳಾ ಜಿಮ್ನಾಸ್ಟಿಕ್‌ ಪಟುವೊಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಟೋಕಿಯೋ ನಗರದಲ್ಲಿ ಅಭ್ಯಾಸ ನಡೆಸುತ್ತಿದ್ದ ಅಥ್ಲೀಟ್‌ಗೆ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದಿಂದ ಒಟ್ಟು ನಾಲ್ವರು ಜಿಮ್ನಾಸ್ಟಿಕ್‌ ಪಟುಗಳು ಟೋಕಿಯೋದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸದ್ಯ 24 ವರ್ಷದ ಅಮೆರಿಕದ ಸಿಮೊನೆ ಬಿಲಿಸ್‌ ಮಹಿಳಾ ಜಿಮ್ನಾಸ್ಟಿಕ್‌ನಲ್ಲಿ ಮಿಂಚುತ್ತಿದ್ದಾರೆ. ಇದಷ್ಟೇ ಅಲ್ಲದೇ ಅಮೆರಿಕದಿಂದ 18 ವರ್ಷದ ಸುನಿಸಾ ಲೀ ಮತ್ತು ಗ್ರೇಸ್‌ ಮೆಕ್ಕಲಂ ಇಬ್ಬರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. 

Latest Videos

undefined

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಗ್ರಾಮದಲ್ಲಿ ಭಾರತೀಯರ ಝಲಕ್

ಕೊರೋನಾ ಭೀತಿಯ ನಡುವೆಯೇ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದೆ. ಅಮೆರಿಕ ಒಟ್ಟು 613 ಅಥ್ಲೀಟ್‌ಗಳನ್ನು ಕಳಿಸಿಕೊಟ್ಟಿದ್ದು, ಈ ಪೈಕಿ 329 ಮಹಿಳಾ ಹಾಗೂ 284 ಪುರುಷ ಅಥ್ಲೀಟ್‌ಗಳಾಗಿದ್ದಾರೆ.

click me!