ಜಪಾನ್‌ಗೆ ಬಂದಿಳಿದಿದ್ದ ಅಥ್ಲೀಟ್‌, ಸಿಬ್ಬಂದಿಗೆ ಕೋವಿಡ್ ಪಾಸಿಟಿವ್..!

By Suvarna News  |  First Published Jul 16, 2021, 10:05 AM IST

* ಟೋಕಿಯೋ ಒಲಿಂಪಿಕ್ಸ್‌ಗೆ ಎದುರಾಯ್ತು ಕೊರೋನಾ ಭೀತಿ

* ಟೋಕಿಯೋಗೆ ಬಂದಿಳಿದ ಅಥ್ಲೀಟ್‌ ಹಾಗೂ ಸಹಾಯಕ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭ


ಟೋಕಿಯೋ(ಜು.16): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಜಪಾನ್‌ಗೆ ಬಂದಿಳಿದಿದ್ದ ಓರ್ವ ಅಥ್ಲೀಟ್‌ ಹಾಗೂ ಸಹಾಯಕ ಸಿಬ್ಬಂದಿಗೆ ಗುರುವಾರ(ಜು.15) ಕೋವಿಡ್ 19 ಸೋಂಕು ದೃಢಪಟ್ಟಿದೆ ಎಂದು ಒಲಿಂಪಿಕ್ ಆಯೋಜನ ಸಮಿತಿ ಖಚಿತಪಡಿಸಿದೆ.

ಒಟ್ಟಾರೆ ಜಪಾನಿನ ಸ್ಥಳೀಯ ನಾಲ್ವರು ನಿವಾಸಿಗಳು ಸೇರಿದಂತೆ 6 ಮಂದಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಕೋವಿಡ್‌ಗೆ ಒಳಗಾಗಿರುವ ಅಥ್ಲೀಟ್‌ ಹಾಗೂ ಸಹಾಯಕ ಸಿಬ್ಬಂದಿ ಯಾರೆಂದು ಒಲಿಂಪಿಕ್ ಆಯೋಜನ ಸಮಿತಿ ಬಹಿರಂಗಪಡಿಸಿಲ್ಲ. ಅಥ್ಲೀಟ್‌ ಅವರನ್ನು ಕೋವಿಡ್‌ ಟೆಸ್ಟ್‌ಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ಬುಧವಾರ(ಜು.14) ಖಚಿತವಾಗಿದೆ. ಹೀಗಾಗಿ ಆ ಅಥ್ಲೀಟ್‌ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಒಲಿಂಪಿಕ್ಸ್‌ ಉದ್ಘಾಟನೆಗೆ ಕೇವಲ 8 ದಿನಗಳು ಬಾಕಿ ಇರುವಾಗ ಈ ಅಥ್ಲೀಟ್‌ ಸೋಂಕಿಗೊಳಗಾಗಿರುವುದು, ತನ್ನ ಸ್ಪರ್ಧೆಯಿಂದ ವಂಚಿತರಾಗಲಿದ್ದಾರೆಯೇ ಎನ್ನುವ ಕುರಿತಂತೆ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದೆ.

Tap to resize

Latest Videos

ಟೋಕಿಯೋ ಒಲಿಂಪಿಕ್ಸ್‌: ಚೀನಾದ 431 ಅಥ್ಲೀಟ್ಸ್‌ ಕಣಕ್ಕೆ!

ಜುಲೈ 01ರಿಂದ ಇಲ್ಲಿಯವರೆಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅಥ್ಲೀಟ್‌ಗಳು ಹಾಗೂ ಸಿಬ್ಬಂದಿಗಳು ಸೇರಿ ಒಟ್ಟು 26 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಇದೆಲ್ಲದರ ನಡುವೆ ಕಳೆದ ಜನವರಿ 21ರ ಬಳಿಕ ಟೋಕಿಯೋ ನಗರದಲ್ಲಿ ಕೋವಿಡ್ ಸ್ಪೋಟ ಸಂಭವಿಸಿದ್ದು, ಜುಲೈ 15ರಂದು ಒಂದೇ ದಿನ ಟೋಕಿಯೋ ನಗರದಲ್ಲಿ 1,308 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ದಿನದಿಂದ ದಿನಕ್ಕೆ ಟೋಕಿಯೋ ನಗರದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವುದು ಆಯೋಜರು ಹಾಗೂ ಅಥ್ಲೀಟ್‌ಗಳಿಗೆ ಆತಂಕಕ್ಕೆ ಕಾರಣವಾಗಿದೆ.

Road to Tokyo 2020; ಒಲಿಂಪಿಕ್ ಕ್ವಿಜ್‌ನಲ್ಲಿ ಪಾಲ್ಗೊಳ್ಳಿ ಪ್ರತಿ ದಿನ ಗೆಲ್ಲಿ ಟೀಂ ಇಂಡಿಯಾ ಜರ್ಸಿ! ಕಿಜ್ವ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ

click me!