ಟೋಕಿಯೋ 2020: ಡಿಸ್ಕಸ್‌ ಥ್ರೋ ಫೈನಲ್‌ಗೆ ಮಳೆ ಅಡ್ಡಿ, 7ನೇ ಸ್ಥಾನಕ್ಕೆ ಕುಸಿದ ಕಮಲ್‌ಪ್ರೀತ್‌

Suvarna News   | Asianet News
Published : Aug 02, 2021, 05:45 PM IST
ಟೋಕಿಯೋ 2020: ಡಿಸ್ಕಸ್‌ ಥ್ರೋ ಫೈನಲ್‌ಗೆ ಮಳೆ ಅಡ್ಡಿ, 7ನೇ ಸ್ಥಾನಕ್ಕೆ ಕುಸಿದ ಕಮಲ್‌ಪ್ರೀತ್‌

ಸಾರಾಂಶ

* ಟೋಕಿಯೋ ಒಲಿಂಪಿಕ್ಸ್ ಡಿಸ್ಕಸ್‌ ಥ್ರೋ ಫೈನಲ್‌ಗೆ ಮಳೆರಾಯ ಅಡ್ಡಿ * ಎರಡನೇ ಸುತ್ತಿನ ಅಂತ್ಯದ ವೇಳೆ ಅಡ್ಡಿಯಾದ ಮಳೆ * ಏಳನೇ ಸ್ಥಾನಕ್ಕೆ ಕುಸಿದ ಭಾರತದ ಕಮಲ್‌ಪ್ರೀತ್ ಕೌರ್

ಟೋಕಿಯೋ(ಆ.02): ಮಹಿಳೆಯರ ಡಿಸ್ಕಸ್‌ ಥ್ರೋ ವಿಭಾಗದ ಫೈನಲ್‌ ಸ್ಪರ್ಧೆಗೆ ಮಳೆರಾಯ ಅಡ್ಡಿ ಪಡಿಸಿದ್ದಾನೆ. ಎರಡನೇ ಸುತ್ತು ಮುಕ್ತಾಯದ ವೇಳೆಗೆ ಮಳೆ ಅಡ್ಡಿ ಪಡಿಸಿದ್ದು, ಸ್ಪರ್ಧೆ ಸ್ಥಗಿತವಾಗುವ ಮುನ್ನ ಭಾರತದ ಕಮಲ್‌ಪ್ರೀತ್ ಕೌರ್(61.62 ಮೀಟರ್) ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಕೆಲ ಸಮಯದ ಬಳಿಕ ಮತ್ತ ಸ್ಪರ್ಧೆ ಆರಂಭವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

ಮೊದಲ ಸುತ್ತಿನಲ್ಲಿ ಭಾರತದ ಕಮಲ್‌ಪ್ರೀತ್ ಕೌರ್ 61.62 ಮೀಟರ್ ದೂರ ಎಸೆಯುವ ಮೂಲಕ ಆರನೇ ಸ್ಥಾನ ಪಡೆದರು. ಅಮೆರಿಕದ ವಾಲರಿ ಅಲ್ಮನ್‌ 68.98 ಮೀಟರ್ ದೂರ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದರೆ, ಕ್ಯೂಬಾದ ವಿಶ್ವ ಚಾಂಪಿಯನ್‌ ಯೈಮ್‌ ಪೆರೆಜ್ 65.72 ಮೀಟರ್‌ ದೂರ ಎಸೆಯುವ ಮೂಲಕ ಮೊದಲ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದರು.

ಎರಡನೇ ಸುತ್ತಿನ ವೇಳೆಗೆ ಕಮಲ್‌ಪ್ರೀತ್‌ ಕೌರ್ 7ನೇ ಸ್ಥಾನಕ್ಕೆ ಕುಸಿದರು. ಇನ್ನು ಎರಡನೇ ಸುತ್ತಿನಲ್ಲಿ ಕಮಲ್‌ಪ್ರೀತ್‌ ಕೌರ್ ಪೌಲ್‌ ಮಾಡಿಕೊಂಡರು. ಇನ್ನು ಎರಡನೇ ಸುತ್ತು ಮುಗಿಯುವ ಮುನ್ನ ಮಳೆ ಅಡ್ಡಿ ಪಡಿಸಿತು. ಮಳೆ ಬಿರುಸಾಗಿ ಬರಲಾರಂಭಿಸಿದ್ದರಿಂದ ಕೆಲ ಮಹಿಳಾ ಅಥ್ಲೀಟ್‌ಗಳು ಡಿಸ್ಕಸ್‌ ಥ್ರೋ ಮಾಡುವ ಮುನ್ನ ಜಾರಿ ಬಿದ್ದರು. 

ಟೋಕಿಯೋ 2020: ಕಮಾಲ್‌ ಮಾಡುವರೇ ಇಂದು ಕಮಲ್‌ಪ್ರೀತ್..?

ಎರಡನೇ ಸುತ್ತಿನ ಅಂತ್ಯದ ವೇಳೆಗೆ ಅಮೆರಿಕದ ವಾಲರಿ ಅಲ್ಮನ್‌(68.98 ಮೀ), ಕ್ಯೂಬಾದ ಯೈಮ್‌ ಪೆರೆಜ್(65.72 ಮೀ) ಹಾಗೂ ಜರ್ಮನಿಯ ಕ್ರಿಸ್ಟಿನ್‌ (63.07 ಮೀ) ಎಸೆಯುವ ಮೂಲಕ ಮೊದಲ 3 ಸ್ಥಾನದಲ್ಲಿದ್ದಾರೆ.
 

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ