'ಕೋಟ್ಯಂತರ ಹೃದಯ ಗೆದ್ದಿದ್ದೀರಿ' ಮಹಿಳಾ ಹಾಕಿ ತಂಡಕ್ಕೆ ಪಟ್ನಾಯಕ್ ಅಭಿನಂದನೆ

Published : Aug 06, 2021, 08:12 PM IST
'ಕೋಟ್ಯಂತರ ಹೃದಯ ಗೆದ್ದಿದ್ದೀರಿ' ಮಹಿಳಾ ಹಾಕಿ ತಂಡಕ್ಕೆ ಪಟ್ನಾಯಕ್ ಅಭಿನಂದನೆ

ಸಾರಾಂಶ

* ಭಾರತದ ಮಹಿಳಾ ಹಾಕಿ ತಂಡಕ್ಕೆ ನವೀನ್ ಪಟ್ನಾಯಕ್ ಅಭಿನಂದನೆ *  ಆಟಗಾರ್ತಿಯರೊಂದಿಗೆ ನೇರ ಮಾತು * ಸದಾ ಪ್ರೋತ್ಸಾಹ ತುಂಬಿಕೊಂಡು ಬಂದಿದ್ದ  ಪಟ್ನಾಯಕ್

ಭುವನೇಶ್ವರ(ಆ.  06) ಭಾರತದ ಮಹಿಳಾ  ಹಾಕಿ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದ ಓರಿಸ್ಸಾದ ಸಿಎಂ ನವೀನ್ ಪಟ್ನಾಯಕ್ ಅದ್ಭುತ ಪ್ರದರ್ಶನ ನೀಡಿದ ಮಹಿಳಾ ತಂಡದ ಆಟಗಾರ್ತಿಯರೊಂದಿಗೆ ಮಾತನಾಡಿದ್ದಾರೆ.  ಮಾತನಾಡಿ ಆಟವನ್ನು ಶ್ಲಾಘಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಗ್ರೇಟ್ ಬ್ರಿಟನ್ ವಿರುದ್ಧ  ವಿರೋಚಿತ ಆಟ ಪ್ರದರ್ಶನ ಮಾಡಿದ್ದು ಇಡೀ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತ ಹಾಕಿ ತಂಡಕ್ಕೆ ನವೀನ್ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಲೇ ಬಂದಿದ್ದರು. ನಿಮ್ಮ ಕೆಚ್ಚಿನ ಆಟವನ್ನು ಹೀಗೆ ಕಾಪಾಡಿಕೊಳ್ಳಿ ಎಂದು ತಿಳಿಸಿ ಅಭಿನಂದಿಸಿದ್ದಾರೆ. ಮೂರನೇ ಸ್ಥಾನಕ್ಕಾಗಿ ಗ್ರೇಟ್ ಬ್ರಿಟನ್ ನೊಂದಿಗೆ ಸೆಣೆಸಿದ್ದರು .

ಹಾಕಿಗೆ ಚೈತನ್ಯ ತುಂಬಿದ್ದ ನವೀನ ಪಟ್ನಾಯಕ್

ಪಂದ್ಯದ ಅರ್ಧಕ್ಕೆ ಭಾರತೀಯ ಆಟಗಾರ್ತಿಯರು ಮುಂದೆ ಇದ್ದರು. ಆದರೆ ಸೆಕೆಂಡ್ ಹಾಫ್ ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಎದುರಾಳಿ ಪಡೆ ಗೆಲವನ್ನು ತನ್ನ ಕಡೆಗೆ ಒಲಿಸಿಕೊಂಡಿತು.

ಪಂದ್ಯ ಮುಗಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಾಯಕಿ ರಾಣಿ ಅವರ ತಂದೆ ರಾಂಪಾಲ್ , ನಮಗೆ ಪದಕ ಬಂದಿಲ್ಲದೆ ಇರಬಹುದು ಆದರೆ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿತು ಎಂದು  ಕೊಂಡಾಡಿದ್ದಾರೆ.

ಹಾಕಿ ತಂಡಲ್ಲಿದ್ದ ನೇಹಾ ಗೋಯಲ್ ಅವರ ತಾಯಿ ಸಾವಿತ್ರಿ ಇಡೀ ಪಂದ್ಯವನ್ನು ಭಾವನಾತ್ಮಕವಾಗಿಯೇ ವೀಕ್ಷಣೆ ಮಾಡಿದರು.  ಅತ್ಯಂತ ಕಠಿಣ ಪರಿಶ್ರಮದಿಂದ ಮೇಲೆ ಬಂದಿರುವ ಭಾರತದ ಮಹಿಳಾ  ಹಾಕಿ ತಂಡಕ್ಕೆ ಎಲ್ಲ ಕಡೆಯಿಂದಲೂ ಮೆಚ್ಚುಗೆಗಳ ಮಹಾಪೂರ ಹರಿದು ಬಂದಿದೆ. 

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ