* ಗ್ರೇಟ್ ಬ್ರಿಟನ್ ಎದುರು ರೋಚಕವಾಗಿ ಸೋತು ಪದಕ ಗೆಲ್ಲುವ ಅವಕಾಶ ಕೈಚೆಲ್ಲಿದ ರಾಣಿ ರಾಂಪಾಲ್ ಪಡೆ
* ಭಾರತ ಮಹಿಳಾ ಹಾಕಿ ತಂಡದ ಒಲಿಂಪಿಕ್ಸ್ ಪದಕ ಗೆಲ್ಲುವ ಕನಸು ಭಗ್ನ
* ಸೋಲಿನ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ನಾಯಕಿ ರಾಣಿ ರಾಂಪಾಲ್
ಟೋಕಿಯೋ(ಆ.06): ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಗ್ರೇಟ್ ಬ್ರಿಟನ್ ವಿರುದ್ದ ತಂಡ ರೋಚಕವಾಗಿ ಸೋಲಿನ ಕಹಿಯುಂಡ ಬೆನ್ನಲ್ಲೇ ದೇಶದ ಅಭಿಮಾನಿಗಳಿಗೆ ಟ್ವೀಟ್ ಮೂಲಕ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ಮುಂಬರುವ ದಿನಗಳಲ್ಲಿ ನಾವು ಮತ್ತಷ್ಟು ಬಲಿಷ್ಠರಾಗುವುದಲ್ಲದೇ ದೇಶದ ಜನರ ಹೃದಯ ಗೆಲ್ಲುವುದಾಗಿ ರಾಣಿ ಟ್ವೀಟ್ ಮಾಡಿದ್ದಾರೆ.
ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ರಾಣಿ ರಾಂಪಾಲ್ ಪಡೆ 3-4 ಗೋಲುಗಳ ಅಂತರದಲ್ಲಿ ಗ್ರೇಟ್ ಜರ್ಮನಿಗೆ ಶರಣಾಗಿತ್ತು. ನಾವು ಪದಕ ಗೆಲ್ಲುವುದಕ್ಕಾಗಿ ಶಕ್ತಿಮೀರಿ ಪ್ರಯತ್ನಿಸಿದೆವು, ಆದರೆ ನಾವು ಯಶಸ್ವಿಯಾಗಲಿಲ್ಲ. ಪದಕ ಗೆಲ್ಲಲು ಇಷ್ಟು ಸಮೀಪ ಬಂದು ನಮಗೆಲ್ಲರಿಗೂ ದುಃಖ ಹಾಗೂ ಬೇಸರವಾಗಿದೆ. ಮುಂಬರುವ ದಿನಗಳಲ್ಲಿ ನಾವು ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುವುದಷ್ಟೇ ಅಲ್ಲದೇ ದೇಶದ ಹೃದಯವನ್ನು ಗೆಲ್ಲುತ್ತೇವೆ. ಇಲ್ಲಿಯವರೆಗಿನ ನಮ್ಮ ಒಲಿಂಪಿಕ್ಸ್ ಪಯಣಕ್ಕೆ ಬೆಂಬಲಿಸಿದ ಹಾಗೂ ಗೆಲುವಿಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ರಾಣಿ ರಾಂಪಾಲ್ ಟ್ವೀಟ್ ಮಾಡಿದ್ದಾರೆ.
We tried very hard but just could not convert to a medal winning victory. We are sad and disappointed of being so close but we know that we will comeback stronger and win the hearts of our country. Thank you everyone for your support and prayers in our journey till here. pic.twitter.com/etopVa8rdT
— Rani Rampal (@imranirampal)
ಗ್ರೇಟ್ ಬ್ರಿಟನ್ ಎದುರು ಆರಂಭಿಕ ಹಿನ್ನೆಡೆಯನ್ನು ಮೆಟ್ಟಿ ನಿಂತ ಭಾರತೀಯ ಮಹಿಳಾ ಹಾಕಿ ತಂಡವು ಪ್ರಥಮಾರ್ಧದ ಅಂತ್ಯದ ವೇಳೆಗೆ 3-2ರ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತಿಯಾರ್ಧದಲ್ಲಿ ಮೇಲುಗೈ ಸಾಧಿಸಿದ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಗ್ರೇಟ್ ಬ್ರಿಟನ್ ತಂಡವು ಕಂಚಿನ ಪದಕ ಗೆದ್ದು ಬೀಗಿತು.
Tokyo 2020 ಭಾರತ ಹಾಕಿಗೆ ಚೈತನ್ಯ ತುಂಬಿದ್ದ ಒಡಿಶಾ ಸಿಎಂ ನವೀನ್ ಪಟ್ನಾಯಕ್
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ಮೂರು ಪಂದ್ಯದಲ್ಲಿ ರಾಣಿ ಪಡೆ ಹ್ಯಾಟ್ರಿಕ್ ಸೋಲು ಕಂಡಿತ್ತು. ಗ್ರೂಪ್ ಹಂತದಲ್ಲಿ ನೆದರ್‌ಲ್ಯಾಂಡ್, ಗ್ರೇಟ್ ಬ್ರಿಟನ್ ಹಾಗೂ ಜರ್ಮನಿ ಎದುರು ಆಘಾತಕಾರಿ ಸೋಲು ಕಂಡಿದ್ದ ಭಾರತೀಯ ಮಹಿಳಾ ಹಾಕಿ ತಂಡವು ಆ ಬಳಿಕ ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಎದುರು ಗೆದ್ದು ನಾಕೌಟ್‌ಗೆ ಅರ್ಹತೆಗಿಟ್ಟಿಸಿಕೊಂಡಿತ್ತು. ಇನ್ನು ಕ್ವಾರ್ಟರ್ ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡವೆಂದು ಗುರುತಿಸಿಕೊಂಡಿದ್ದ ಆಸ್ಟ್ರೇಲಿಯಾ ಎದುರು 1-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಸೆಮೀಸ್ ಪ್ರವೇಶಿಸಿತ್ತು. ಸೆಮಿಫೈನಲ್‌ನಲ್ಲಿ ಅರ್ಜಿಂಟೀನಾ ಎದುರು 2-1 ಗೋಲುಗಳಿಂದ ರಾಣಿ ಪಡೆ ಸೋಲು ಕಂಡಿತ್ತು.