* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭ
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಜುಲೈ 23ರಿಂದ ಆರಂಭ
* ಕೋವಿಡ್ ಭೀತಿಯಿಂದ 7 ಕ್ರೀಡೆಯ ಕ್ರೀಡಾಪಟುಗಳು ಸಮಾರೋಪ ಸಮಾರಂಭದಿಂದ ಗೈರು
ಟೋಕಿಯೋ(ಜು.22): ಕೊರೋನಾ ವೈರಸ್ ಭೀತಿ ಹಾಗೂ ಬಿಡುವಿರದ ವೇಳಾಪಟ್ಟಿಯ ಹಿನ್ನೆಲೆಯಲ್ಲಿ ಶೂಟಿಂಗ್, ಹಾಕಿ, ಬ್ಯಾಡ್ಮಿಂಟನ್, ಆರ್ಚರಿ ಸೇರಿದಂತೆ ಭಾರತದ 7 ಪ್ರಮುಖ ಕ್ರೀಡೆಯ ಕ್ರೀಡಾಪಟುಗಳು ಶುಕ್ರವಾರದ(ಜು.23) ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಿಂದ ಹಿಂದೆ ಸರಿದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಕೇವಲ 30 ಸ್ಪರ್ಧಿಗಳು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಭಾರತದ ಧ್ವಜಧಾರಿಯಾಗಿದ್ದರಿಂದ ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನುಳಿದ ಹಾಕಿ ಆಟಗಾರರು ಈ ಸಮಾರಂಭದಿಂದ ಹೊರಗುಳಿದಿದ್ದಾರೆ. ಜುಲೈ 24ರಿಂದ ಕೆಲವು ಮಹತ್ವದ ಪಂದ್ಯಗಳು ಇರುವುದರಿಂದ ಆರ್ಚರಿ, ಜೂಡೋ, ಬ್ಯಾಡ್ಮಿಂಟನ್, ವೇಟ್‌ಲಿಫ್ಟಿಂಗ್, ಟೆನಿಸ್, ಹಾಕಿ(ಪುರುಷ&ಮಹಿಳಾ ತಂಡ) ಹಾಗೂ ಶೂಟಿಂಗ್‌ನ ಕ್ರೀಡೆಯ ಕ್ರೀಡಾಪಟುಗಳು ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ. ಜಪಾನಿನ ಆಲ್ಪಬೆಟಿಕಲ್ ಪ್ರಕಾರ ಮಾರ್ಚ್ ಪಾಸ್ಟ್‌ನಲ್ಲಿ ಭಾರತವು 21ನೇ ಸ್ಥಾನ ಪಡೆದಿದೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ನರೀಂದರ್ ಭಾತ್ರಾ ತಿಳಿಸಿದ್ದಾರೆ.
undefined
ಟೋಕಿಯೋ ಒಲಿಂಪಿಕ್ಸ್: ಜೋಕೋವಿಚ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಭಾರತದ ಸಾಯಿ ಪ್ರಣೀತ್
ಸದ್ಯದ ಮಾಹಿತಿ ಪ್ರಕಾರ ಹಾಕಿ(1), ಬಾಕ್ಸಿಂಗ್(8), ಟೇಬಲ್ ಟೆನಿಸ್(4), ರೋಯಿಂಗ್(2), ಜಿಮ್ನಾಸ್ಟಿಕ್ಸ್(1), ಸೇಲಿಂಗ್(4), ಪೆನ್ಸಿಂಗ್(1) ಹಾಗೂ 6 ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಲಿಂಗ ಸಮಾನತೆ ಸಾರುವ ಉದ್ದೇಶದಿಂದ ಎಂ.ಸಿ. ಮೇರಿ ಕೋಮ್ ಹಾಗೂ ಮನ್‌ಪ್ರೀತ್ ಸಿಂಗ್ ಭಾರತದ ಧ್ವಜಧಾರಿಗಳಾಗಲಿದ್ದಾರೆ ಎಂದು ನರೀಂದರ್ ಭಾತ್ರಾ ತಿಳಿಸಿದ್ದಾರೆ.
ಕೊರೋನಾ ವೈರಸ್ ಭೀತಿಯ ನಡುವೆಯೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ. ಭಾರತದಿಂದ 120ಕ್ಕೂ ಅಧಿಕ ಕ್ರೀಡಾಪಟುಗಳು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.