ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಚಾನುಗೆ ಜೈ ಹೋ ಎಂದ ಟೀಂ ಇಂಡಿಯಾ

Suvarna News   | Asianet News
Published : Jul 24, 2021, 01:36 PM IST
ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಚಾನುಗೆ ಜೈ ಹೋ ಎಂದ ಟೀಂ ಇಂಡಿಯಾ

ಸಾರಾಂಶ

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ಖಾತೆ ತೆರೆದ ಭಾರತ * ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಸೈಕೋಮ್‌ ಮೀರಾಬಾಯಿ ಚಾನು * ಚಾನು ಅವರಿಗೆ ಅಭಿನಂದನೆಗಳ ಸುರಿಮಳೆ

ಬೆಂಗಳೂರು(ಜು.24): ಭಾರತೀಯರ ಪಾಲಿಗಿಂದು ಶುಭ ಶನಿವಾರ. ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮಹಿಳೆಯರ 49 ಕೆ.ಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಇಂಪಾಲ ಮೂಲದ ಸೈಕೋಮ್‌ ಮೀರಾಬಾಯಿ ಚಾನು ಬೆಳ್ಳಿ ಪದಕಕ್ಕೆ ಕೊರಳೊಡ್ಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್‌ ಎನ್ನುವ ದಾಖಲೆಗೆ 26 ವರ್ಷದ ಚಾನು ಪಾತ್ರರಾಗಿದ್ದಾರೆ.

ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕ್ಲೀನ್‌ ಮತ್ತು ಜೆರ್ಕ್‌ ವಿಭಾಗದಲ್ಲಿ 119 ಕೆ.ಜಿ ಭಾರ ಎತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದ ಮೀರಾಬಾಯಿ ಚಾನು ಮೇಲೆ ಬೆಟ್ಟದಷ್ಟು ನಿರೀಕ್ಷೆಯಿಡಲಾಗಿತ್ತು. ಕೋಟ್ಯಾಂತರ ಭಾರತೀಯರ ಹಾರೈಕೆ, ಸತತ ಪರಿಶ್ರಮದ ಫಲವಾಗಿ ಮೀರಾಬಾಯಿ ಇಂದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಇದಷ್ಟೇ ಅಲ್ಲದೇ ಜಗತ್ತಿನ ದೊಡ್ಡ ಕ್ರೀಡಾಜಾತ್ರೆಯಲ್ಲಿ ಭಾರತದ ಬಾವುಟ ಎತ್ತರಕ್ಕೆ ಹಾರುವಂತೆ ಮಾಡಿದ್ದಾರೆ. 

ಟೋಕಿಯೋ ಒಲಿಂಪಿಕ್ಸ್‌: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಸೈಕೋಮ್‌ ಮೀರಾಬಾಯಿ ಚಾನು

ಸ್ನ್ಯಾಚ್‌ ವಿಭಾಗದಲ್ಲಿ 87 ಕೆ.ಜಿ ಬಾರ ಎತ್ತಿದ್ದ ಚಾನು, ಕ್ಲೀನ್ ಅಂಡ್ ಜೆರ್ಕ್ ವಿಭಾಗದಲ್ಲಿ 115 ಭಾರವನ್ನು ಎತ್ತುವ ಮೂಲಕ ವೈಯುಕ್ತಿಕ ಒಲಿಂಪಿಕ್‌ ದಾಖಲೆ ನಿರ್ಮಿಸಿದ್ದಲ್ಲದೇ ಒಟ್ಟಾರೆ 202 ಕೆ.ಜಿ ವೇಟ್‌ಲಿಫ್ಟ್‌ ಮಾಡಿ ರಜತ ಪದಕ ಮುಡಿಗೇರಿಸಿಕೊಂಡರು.

ಚಾನು ಪದಕ ಗೆಲ್ಲುತ್ತಿದ್ದಂತೆಯೇ ಇಡೀ ದೇಶವೇ ಕುಣಿದು ಕುಪ್ಪಳಿಸಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪದಕದ ಖಾತೆ ತೆರೆದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಕೋವಿಂದ್, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಕ್ರಿಕೆಟಿಗ ಸೆಹ್ವಾಗ್‌ ಆದಿಯಾಗಿ ಎಲ್ಲರೂ ಟ್ವೀಟ್‌ ಮೂಲಕ ಮೀರಾಬಾಯಿಗೆ ಅಭಿನಂದನೆ ಸಲ್ಲಿಸಿದ್ದಾರೆ.
 

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ