ಟೋಕಿಯೋ 2020: ಭಾರತ ಮಹಿಳಾ ಹಾಕಿ ತಂಡಕ್ಕೆ ಹ್ಯಾಟ್ರಿಕ್‌ ಸೋಲು

By Suvarna News  |  First Published Jul 28, 2021, 12:39 PM IST

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಕನಸು ಭಗ್ನ

* ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್‌ ಸೋಲು ಕಂಡ ರಾಣಿ ರಾಂಪಾಲ್‌ ಪಡೆ

* ಗ್ರೇಟ್‌ ಬ್ರಿಟನ್ ಎದುರು 4-1 ಅಂತರದಲ್ಲಿ ಸೋಲು


ಟೋಕಿಯೋ(ಜು.28) ಭಾರತೀಯ ಮಹಿಳಾ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಗ್ರೇಟ್‌ ಬ್ರಿಟನ್ ಎದುರು 1-4 ಅಂತರದ ಸೋಲು ಕಂಡಿದೆ.ಇದರೊಂದಿಗೆ ರಾಣಿ ರಾಂಪಾಲ್ ನೇತೃತ್ವದ ಭಾರತ ಹಾಕಿ ತಂಡವು ಜಪಾನ್‌ನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ.

'ಎ' ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ತಂಡವು ಹಾಲಿ ಒಲಿಂಪಿಕ್ಸ್‌ ಚಾಂಪಿಯನ್‌ ಗ್ರೇಟ್‌ ಎದುರು ಭಾರೀ ಅಂತರದ ಸೋಲು ಅನುಭವಿಸಿದೆ. ಹೆನ್ಹಾ ಮಾರ್ಟಿನ್‌(2), ಲಿಲೆ ಓಸ್ಲೇ(1) ಹಾಗೂ ಗ್ರೇಸ್‌ ಬಲ್ಸಡನ್‌(1) ಬಾರಿಸಿದ ಗೋಲುಗಳ ನೆರವಿನಿಂದ ಭಾರತದ ಎದುರು ಸುಲಭ ಗೆಲುವು ಸಾಧಿಸಿದೆ. ಇನ್ನು ಭಾರತದ ಶರ್ಮಿಲಾ ದೇವಿ ಪಂದ್ಯದ 23ನೇ ನಿಮಿಷದಲ್ಲಿ ಗೋಲು ಬಾರಿಸಿದ್ದು, ಉಳಿದ್ಯಾವ ಆಟಗಾರ್ತಿಯರು ಗೋಲು ಬಾರಿಸಲು ಯಶಸ್ವಿಯಾಗಲಿಲ್ಲ.

v pic.twitter.com/j8Oqqe1G3E

— International Hockey Federation (@FIH_Hockey)

Tap to resize

Latest Videos

ವು ಈ ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಂಡು ಒಂದು ಅಂಕ ಪಡೆದು, ಇನ್ನುಳಿದ ಎರಡು ಪಂದ್ಯಗಳನ್ನು ಜಯಿಸಿದ್ದರೆ ನಾಕೌಟ್‌ಗೇರುವ ಅವಕಾಶ ಜೀವಂತವಾಗಿರುತಿತ್ತು. ಆದರೆ ಈ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ನಾಕೌಟ್‌ ಪ್ರವೇಶದ ಕನಸು ಭಗ್ನವಾದಂತೆ ಆಗಿದೆ.

ಟೋಕಿಯೋ 2020: ಸ್ಪೇನ್‌ ಬಗ್ಗುಬಡಿದ ಭಾರತ ಹಾಕಿ ತಂಡ

ರಾಣಿ ರಾಂಪಾಲ್‌ ನೇತೃತ್ವದ ಭಾರತ ಹಾಕಿ ತಂಡವು ವಿಶ್ವ ನಂ.1 ಶ್ರೇಯಾಂಕಿತ ನೆದರ್‌ಲ್ಯಾಂಡ್‌ 1-5 ಅಂತರದಲ್ಲಿ ಸೋಲು ಅನುಭವಿಸಿತ್ತು. ಇನ್ನು ಜರ್ಮನಿ ಎದುರು 0-2 ಅಂತರದಲ್ಲಿ ಸೋಲನನ್ನುಭವಿಸಿತು.
 

click me!