* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಾಕ್ಸರ್ ಕಿವಿ ಕಚ್ಚಲು ಯತ್ನಿಸಿದ ಮೊರಕೊ ಬಾಕ್ಸರ್
* ನ್ಯೂಜಿಲೆಂಡ್ ಬಾಕ್ಸರ್ ಕಿವಿ ಕಚ್ಚಲು ಯತ್ನಿಸಿದ ಬಾಕ್ಸರ್
* ಅಚ್ಚರಿಯ ಘಟನೆಗೆ ಸಾಕ್ಷಿಯಾದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ
ಟೋಕಿಯೋ(ಜು.28): ಮೊರಕೊ ಬಾಕ್ಸರ್ ಯೂನೆಸ್ ಬಾಲ್ಲಾ ಒಲಿಂಪಿಕ್ಸ್ ಬಾಕ್ಸಿಂಗ್ ಪುರುಷರ ಹೆವಿವೇಟ್ ಪಂದ್ಯದ ವೇಳೆ ತಮ್ಮ ಎದುರಾಳಿ ನ್ಯೂಜಿಲೆಂಡ್‌ನ ಡೇವಿಡ್ ನೈಯಿಕಾ ಅವರ ಕಿವಿ ಕಚ್ಚುವ ಪ್ರಯತ್ನ ನಡೆಸಿದ ವಿಚಿತ್ರ ಪ್ರಸಂಗ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಂಗಳವಾರ ನಡೆಯಿತು.
‘ಯೂನೆಸ್ ನನ್ನ ಕಿವಿ ಕಚ್ಚಲು ಯತ್ನಿಸಿದರು. ನಾನು ತಪ್ಪಿಸಿಕೊಂಡೆ. ಹಲ್ಲುಗಳಿಗೆ ಗಾರ್ಡ್ ಧರಿಸಿದ್ದ ಕಾರಣ ಅವರ ಹಲ್ಲಿನ ಗುರುತುಗಳು ನನ್ನ ಕಿವಿ ಮೇಲೆ ಬೀಳಲಿಲ್ಲ’ ಎಂದು ಡೇವಿಡ್ ಹೇಳಿಕೊಂಡಿದ್ದಾರೆ. ಯೂನೆಸ್ ಸೋತು ಹೊರಬಿದ್ದರೂ, ಅವರ ವಿರುದ್ಧ ಕ್ರಮಕೈಗೊಳ್ಳುವ ಸಲುವಾಗಿ ಸ್ಪರ್ಧೆಯಿಂದ ಹೊರಹಾಕಲು ಆಯೋಜಕರು ನಿರ್ಧರಿಸಿದರು. ಎರಡು ಬಾರಿ ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತರಾಗಿರುವ ಡೇವಿಡ್ ನೈಯಿಕಾ ತಾವು ಸಮಯ ಪ್ರಜ್ಞೆಯಿಂದಾಗಿ ಗಾಯಗೊಳ್ಳುವುದರಿಂದ ಬಚಾವಾಗಿರುವುದಾಗಿ ತಿಳಿಸಿದ್ದಾರೆ.
ಒಲಿಂಪಿಕ್ ತಾರೆ ಮೀರಾಬಾಯಿ ಚಾನುಗೆ ಸಿಕ್ತು ಬಡ್ತಿ, 2 ಕೋಟಿ ರೂ ಬಹುಮಾನ
Morocco's boxer Yunus Balla bites NZ David Nyaka's ear in the third round.
Earlier Tyson in 1997 had bitten Ecuador's Holyfield twice..https://t.co/z9wOg4qKdP
ಈ ಮೊದಲು 1997ರಲ್ಲಿ ಮೈಕ್ ಟೈಸನ್ ಈಕ್ವೇಡಾರ್‌ನ ಬಾಕ್ಸರ್ ಹೋಲಿಫೀಲ್ಡ್ ಅವರ ಕಿವಿಯನ್ನು ಎರಡೆರಡು ಬಾರಿ ಕಚ್ಚಿದ್ದರು. ಈ ಘಟನೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದನ್ನಿಲ್ಲಿ ಸ್ಮರಿಸಬಹುದಾಗಿದೆ.