ವಿಶ್ವ ನಂ.1 ಬಾಕ್ಸರ್‌ ಅಮಿತ್ ಪಂಘಾಲ್‌ ಹೋರಾಟ ಮೊದಲ ಸುತ್ತಿನಲ್ಲೇ ಅಂತ್ಯ..!

By Suvarna News  |  First Published Jul 31, 2021, 8:10 AM IST

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎದುರಾಯ್ತು ಅತಿದೊಡ್ಡ ನಿರಾಸೆ

* ವಿಶ್ವ ನಂ.1 ಬಾಕ್ಸರ್ ಅಮಿತ್ ಪಂಘಾಲ್‌ ಮೊದಲ ಪಂದ್ಯದಲ್ಲೇ ಆಘಾತಕಾರಿ ಸೋಲು

* ಕೊಲಂಂಬಿಯಾ ಬಾಕ್ಸರ್ ಎದುರು ಸೋತು ಒಲಿಂಪಿಕ್ಸ್‌ ಕೂಟದಿಂದ ಹೊರಬಿದ್ದ ಪಂಘಾಲ್


ಟೋಕಿಯೋ(ಜು.31): ಭಾರತದ ಪಾಲಿಗೆ 52 ಕೆ.ಜಿ. ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪದಕದ ಭರವಸೆ ಎನಿಸಿದ್ದ ಅಮಿತ್ ಪಂಘಾಲ್‌ ಹೋರಾಟ ಪ್ರೀಕ್ವಾರ್ಟರ್‌ ಫೈನಲ್‌ನಲ್ಲೇ ಅಂತ್ಯವಾಗಿದೆ. ಕೊಲಂಬಿಯಾದ ಯುಬ್ರಜೇನ್‌ ಹೆನ್ರಿ ಮಾರ್ಟಿನ್ಜಾ ಎದುರು 4-1 ಅಂತರದಲ್ಲಿ ಪಂಘಾಲ್‌ ಸೋಲು ಕಂಡು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ.

ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಪಂಘಾಲ್‌ ಆಕ್ರಮಣಕಾರಿ ಪ್ರದರ್ಶನ ತೋರುವ ಮೂಲಕ 4-1 ಅಂಕಗಳ ಮುನ್ನಡೆ ಸಾಧಿಸಿದರು. ಬಲಿಷ್ಠ ಪಂಚ್‌ಗಳ ಮೂಲಕ ರಿಯೋ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತನ ಎದುರು ಮೇಲುಗೈ ಸಾಧಿಸುವಲ್ಲಿ ಪಂಘಾಲ್ ಯಶಸ್ವಿಯಾದರು. ಆರಂಭಿಕ ಹಿನ್ನೆಡೆಯಿಂದ ಎಚ್ಚೆತ್ತುಕೊಂಡ ಕೊಲಂಬಿಯಾದ ಬಾಕ್ಸರ್ ಎರಡನೇ ಸುತ್ತಿನಲ್ಲಿ ಕಮ್‌ಬ್ಯಾಕ್‌ ಮಾಡುವಲ್ಲಿ ಯಶಸ್ವಿಯಾದರು. ಪರಿಣಾಮ ಯುಬ್ರಜೇನ್‌ ಹೆನ್ರಿ ಮಾರ್ಟಿನ್ಜಾ ಅಂತರದಲ್ಲಿ ಎರಡನೇ ಸೆಟ್‌ನಲ್ಲಿ 4-1 ಅಂತರದಲ್ಲಿ ತಮ್ಮ ಪರ ವಾಲುವಂತೆ ಮಾಡುವಲ್ಲಿ ಯಶಸ್ವಿಯಾದರು.

| Boxing, Men's Flyweight (48-52kg) Preliminaries - Round of 16: India boxer Amit Panghal (file pic) loses to Colombia's Yuberjen Martinez 4-1 pic.twitter.com/oDI5AnDtKS

— ANI (@ANI)

💔 Top seed Amit Panghal crashed out of after going down fighting to Rio 2016 silver medallist Yuberjen Martínez from Colombia in a split 1:4 decision in round 2 of men's 52kg category. | | |

— #Tokyo2020 for India (@Tokyo2020hi)

Tap to resize

Latest Videos

undefined

ಟೋಕಿಯೋ 2020: ಭಾರತಕ್ಕೆ ಮತ್ತೊಂದು ಒಲಿಂಪಿಕ್ಸ್‌ ಪದಕ ಗೆದ್ದ ಲೊವ್ಲಿನಾ ಬೊರ್ಗೊಹೈನ್..!

ಇನ್ನು ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಪಂಘಾಲ್‌ ರಕ್ಷಣಾತ್ಮಕ ತಂತ್ರಕ್ಕೆ ಮೊರೆ ಹೋದರೆ, ಕೊಲಂಬಿಯಾ ಆಟಗಾರ ಮತ್ತೊಮ್ಮೆ ಆಕ್ರಮಣಕಾರಿ ರಣತಂತ್ರ ಅಳವಡಿಸಿಕೊಳ್ಳುವ ಮೂಲಕ ನಂ.1 ಬಾಕ್ಸರ್ ಎದುರು ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪಂಘಾಲ್‌ ಒಲಿಂಪಿಕ್ಸ್‌ ಪದಕ ಗೆಲ್ಲುವ ಕನಸು ಭಗ್ನವಾದಂತೆ ಆಗಿದೆ.
 

click me!