ಟೋಕಿಯೋ 2020: ಸಿಂಧು ಪದಕಕ್ಕೆ ಮತ್ತಷ್ಟು ಹತ್ತಿರ, ಸೆಮೀಸ್‌ಗೆ ಲಗ್ಗೆ

Suvarna News   | Asianet News
Published : Jul 30, 2021, 03:22 PM IST
ಟೋಕಿಯೋ 2020: ಸಿಂಧು ಪದಕಕ್ಕೆ ಮತ್ತಷ್ಟು ಹತ್ತಿರ, ಸೆಮೀಸ್‌ಗೆ ಲಗ್ಗೆ

ಸಾರಾಂಶ

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸಿಂಧು ಸೆಮೀಸ್‌ಗೆ ಲಗ್ಗೆ * ಅಕಾನೆ ಯಮಗುಚಿ ಎದುರು ನೇರ ಗೇಮ್‌ಗಳಲ್ಲಿ ಗೆಲುವು * ಪದಕ ಗೆಲ್ಲುವ ಸನಿಹದಲ್ಲಿ ಪಿ.ವಿ. ಸಿಂಧು

ಟೋಕಿಯೋ(ಜು.30): ಭಾರತದ ತಾರಾ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನಿನ ಅಕಾನೆ ಯಮಗುಚಿಯನ್ನು ನೇರ ಗೇಮ್‌ಗಳಿಂದ ರೋಚಕವಾಗಿ ಮಣಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಸಿಂಧು 21-13, 22-20 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಹೈದರಾಬಾದ್‌ ಆಟಗಾರ್ತಿ ಮತ್ತೊಂದು ಒಲಿಂಪಿಕ್ಸ್‌ ಪದಕಕ್ಕೆ ಹತ್ತಿರವಾಗಿದ್ದಾರೆ.

ಮೊದಲ ಗೇಮ್‌ನ ಆರಂಭದಲ್ಲೇ ಉಭಯ ಆಟಗಾರ್ತಿಯರು ಚುರುಕಿನ ಆಟಕ್ಕೆ ಮೊರೆಹೋದರು. ಪರಿಣಾಮ 6-6 ಅಂಕಗಳ ಸಮಬಲ ಸಾಧಿಸಿದ್ದರು. ಆ ಬಳಿಕ ಆಟಕ್ಕೆ ಕುದುರಿಕೊಂಡ ಸಿಂಧು ನಿಧಾನವಾಗಿ ಅಂಕಗಳನ್ನು ಹೆಚ್ಚಿಸುತ್ತಾ ಸಾಗಿದರು. ಮೊದಲ ಗೇಮ್‌ನಲ್ಲಿ ಆತಿಥೇಯ ಜಪಾನ್‌ ಆಟಗಾರ್ತಿ ಮೇಲುಗೈ ಸಾಧಿಸದಂತೆ ನೋಡಿಕೊಳ್ಳುವಲ್ಲಿ ಸಿಂಧು ಯಶಸ್ವಿಯಾದರು. ಅಂತಿಮವಾಗಿ 21-13 ಅಂಕಗಳ ಅಂತರದಲ್ಲಿ ಮೊದಲ ಗೇಮ್‌ ಸಿಂಧು ಪಾಲಾಯಿತು.

ಇನ್ನು ಎರಡನೇ ಗೇಮ್‌ನ ಆರಂಭದಲ್ಲೇ ಸಿಂಧು, ಜಪಾನ್‌ ಆಟಗಾರ್ತಿಯ ಮೇಲೆ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. 6-5ರಲ್ಲಿ ಮುನ್ನಡೆ ಸಾಧಿಸಿದ್ದ ಸಿಂಧು, ಇದಾದ ಬಳಿಕ ಸತತ 4 ಅಂಕಗಳನ್ನು ಗಳಿಸುವ ಮೂಲಕ 10-5ರ ಮುನ್ನಡೆ ಸಾಧಿಸಿದರು. ಆ ಬಳಿಕ ಯಮಗುಚಿ ಕೂಡಾ ಕಮ್‌ಬ್ಯಾಕ್‌ ಮಾಡುವ ಯತ್ನ ಮಾಡಿದರು. ಪರಿಣಾಮ 15-15ರಲ್ಲಿ ಸಮಬಲ ಸಾಧಿಸುವಲ್ಲಿ ಯಮಗುಚಿ ಯಶಸ್ವಿಯಾದರು. ಬಳಿಕ ಗೇಮ್‌ ಪಾಯಿಂಟ್‌ ಕಾಪಾಡಿಕೊಳ್ಳುವ ಮೂಲಕ 20-20ರ ಸಮಬಲ ಸಾಧಿಸುವಲ್ಲಿ ಸಿಂಧು ಯಶಸ್ವಿಯಾದರು.ಬಳಿಕ 22-20 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ

ಈ ಹಿಂದೆ ಉಭಯ ಆಟಗಾರ್ತಿಯರು 18 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಸಿಂಧು 11 ರಲ್ಲಿ ಗೆಲುವು ದಾಖಲಿಸಿದ್ದರೆ, ಅಕಾನೆ ಯಮಗುಚಿ 7 ಬಾರಿ ಮಾತ್ರ ಗೆಲುವಿನ ನಗೆ ಬೀರಿದ್ದರು. ಇತ್ತೀಚೆಗೆ ಆಲ್‌ ಇಂಗ್ಲೆಂಡ್‌ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಈ ಇಬ್ಬರು ಆಟಗಾರ್ತಿಯರು ಕಡೆಯ ಬಾರಿಗೆ ಮುಖಾಮುಖಿಯಾಗಿದ್ದರು. ಮೊದಲ ಗೇಮ್‌ನಲ್ಲಿ ಸಿಂಧು ಹಿನ್ನೆಡೆ ಅನುಭವಿಸಿದರೂ ಆ ಬಳಿಕ 16-21, 21-16, 21-19 ಗೆಲುವು ಸಾಧಿಸುವ ಮೂಲಕ ಭಾರತದ ಆಟಗಾರ್ತಿ ಮೇಲುಗೈ ಸಾಧಿಸಿದ್ದರು.
 

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ