ಟೋಕಿಯೋ 2020: ಭಾರತ ಪುರುಷರ ಆರ್ಚರಿ ತಂಡದ ಹೋರಾಟ ಅಂತ್ಯ

Published : Jul 26, 2021, 12:05 PM IST
ಟೋಕಿಯೋ 2020: ಭಾರತ ಪುರುಷರ ಆರ್ಚರಿ ತಂಡದ ಹೋರಾಟ ಅಂತ್ಯ

ಸಾರಾಂಶ

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ಆರ್ಚರಿ ತಂಡಕ್ಕೆ ನಿರಾಸೆ * ಕೊರಿಯಾ ಎದುರು 6-0 ಅಂತರದ ಸೋಲು ಕಂಡ ಭಾರತ ತಂಡ * ಕ್ವಾರ್ಟರ್ ಫೈನಲ್‌ನಲ್ಲೇ ಭಾರತದ ಹೋರಾಟ ಅಂತ್ಯ

ಟೋಕಿಯೋ(ಜು.26): ಆತನು ದಾಸ್‌, ತರುಣ್‌ದೀಪ್‌ ರೈ ಹಾಗೂ ಪ್ರವೀಣ್ ಜಾಧವ್‌ ಅವರನ್ನೊಳಗೊಂಡ ಭಾರತ ಪುರುಷರ ತಂಡ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕೊರಿಯಾ ಎದುರು 6-0 ಅಂತರದಲ್ಲಿ ಆಘಾತಕಾರಿ ಸೋಲು ಕಾಣುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತನ್ನ ಹೋರಾಟ ಅಂತ್ಯಗೊಳಿಸಿದ್ದಾರೆ.

ಮೊದಲ ಸುತ್ತಿನಲ್ಲಿ ಕೊರಿಯಾ 59 ಅಂಕಗಳಿಸಿದರೆ, ಭಾರತ ತಂಡವು 54 ಅಂಕಗಳಿಗೆ ತೃಪ್ತಿಪಟ್ಟುಕೊಂಡಿದೆ. ಇದರೊಂದಿಗೆ ಕೊರಿಯಾ 2-0 ಮುನ್ನಡೆ ಸಾಧಿಸಿತು. ಎರಡನೇ ಸೆಟ್‌ನಲ್ಲಿ ಪ್ರವೀಣ್‌ ಜಾಧವ್, ತರುಣ್‌ ದೀಪ್‌ ಉತ್ತಮ ಪ್ರದರ್ಶನ ತೋರಿದರಾದರೂ, ಆತನು ದಾಸ್ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಪರಿಣಾಮ ಕೊರಿಯಾ 60ರಲ್ಲಿ 59 ಅಂಕ ಗಳಿಸಿದರೆ, ಭಾರತ 57 ಅಂಕ ಗಳಿಸಿತು. ಇದರೊಂದಿಗೆ ಕೊರಿಯಾ 4-0 ಮುನ್ನಡೆ ಸಾಧಿಸಿತು.

ಟೋಕಿಯೋ 2020: ಗೆದ್ದು ಸೋತ ಫೆನ್ಸಿಂಗ್ ಪಟು ಭವಾನಿ ದೇವಿ

ಇನ್ನು ಮೂರನೇ ಸುತ್ತಿನಲ್ಲಿ ಭಾರತ 54 ಅಂಕಗಳನ್ನಷ್ಟೇ ಶಕ್ತವಾಯಿತು. ಕೊರಿಯಾ 56 ಅಂಕಗಳನ್ನು ಗಳಿಸುವ ಮೂಲಕ ಮೂರು ಸುತ್ತುಗಳನ್ನು ಜಯಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ