ಉದ್ದೀಪನ ಪರೀಕ್ಷೆಯಲ್ಲಿ ಫೇಲಾದ ಕುಸ್ತಿಪಟು ಸುಮಿತ್ ಮಲಿಕ್

Suvarna News   | Asianet News
Published : Jun 05, 2021, 10:04 AM IST
ಉದ್ದೀಪನ ಪರೀಕ್ಷೆಯಲ್ಲಿ ಫೇಲಾದ ಕುಸ್ತಿಪಟು ಸುಮಿತ್ ಮಲಿಕ್

ಸಾರಾಂಶ

* ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ ಕುಸ್ತಿಪಟು ಡೋಪಿಂಗ್ ಪರೀಕ್ಷೆಯಲ್ಲಿ ಫೇಲ್ * ಭಾರತದ ಕುಸ್ತಿಪಟು ಸುಮಿತ್‌ ಮಲಿಕ್‌ ಉದ್ದೀಪನ ಪರೀಕ್ಷೆಯಲ್ಲಿ ಫೇಲ್‌  * 125 ಕೆಜಿ ವಿಭಾಗದ ಕುಸ್ತಿಯಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿರುವ ಸುಮಿತ್

ನವದೆಹಲಿ(ಜೂ.05): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕಿದ್ದ ಭಾರತದ ಕುಸ್ತಿಪಟು ಸುಮಿತ್‌ ಮಲಿಕ್‌ ಉದ್ದೀಪನ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಾರೆ. ಇತ್ತೀಚೆಗೆ ಬಲ್ಗೇರಿಯಾದಲ್ಲಿ ನಡೆದ 125 ಕೆಜಿ ವಿಭಾಗದ ಅರ್ಹತಾ ಸುತ್ತಿನ ಪಂದ್ಯ ಮುನ್ನ ನಡೆಸಲಾದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ ಮಲಿಕ್‌ ಉದ್ದೀಪನ ಮದ್ದು ಸೇವಿಸಿದ್ದು ಖಚಿತ ಪಟ್ಟಿದೆ. 

ಹೀಗಾಗಿ ಸದ್ಯಕ್ಕೆ ಅವರನ್ನು ತಂಡದಿಂದ ಅಮಾನತು ಮಾಡಲಾಗಿದೆ. ಹೀಗಾಗಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸುಮಿತ್‌ ಪಾಲ್ಗೊಳ್ಳುವ ಸಾಧ್ಯತೆ ಕ್ಷೀಣವಾಗಿದೆ. ಇದರ ಜತೆಗೆ ಈ ಘಟನೆಯಿಂದ ಭಾರತಕ್ಕೆ ಮುಜುಗರ ಅನುಭವಿಸುವಂತಾಗಿದೆ. ಕಳೆದ ರಿಯೋ ಒಲಿಂಪಿಕ್ಸ್‌ಗೆ ಮುನ್ನ ಕೂಡಾ ಕುಸ್ತಿಪಟು ನರಸಿಂಗ್‌ ಯಾದವ್‌ ಸಿಕ್ಕಿಬಿದ್ದು 4 ವರ್ಷ ನಿಷೇಧಕ್ಕೆ ಒಳಗಾಗಿದ್ದರು.

ಕುಸ್ತಿ: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿದ ಸುಮಿತ್‌ ಮಲಿಕ್‌

ಸುಮಿತ್ ಮಲಿಕ್ ಈ ಹಿಂದೆ 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಸುಮಿತ್ ಮಲಿಕ್ ಸೇರಿದಂತೆ ಭಾರತದ 8 ಕುಸ್ತಿಪಟುಗಳು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದರು.  

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ