ಟೋಕಿಯೋ 2020: ಇಂದು ಭಾರತಕ್ಕೆ 3 ಒಲಿಂಪಿಕ್ಸ್ ಪದಕ ನಿರೀಕ್ಷೆ

By Suvarna NewsFirst Published Jul 30, 2021, 7:11 AM IST
Highlights

* ಭಾರತದ ಪಾಲಿಗಿಂದು ಶುಭ ಶುಕ್ರವಾರ?

* ಭಾರತಕ್ಕಿಂದು ಮೂರು ಪದಕಗಳನ್ನು ಗೆಲ್ಲುವ ಅವಕಾಶ

* ದೀಪಿಕಾ ಕುಮಾರಿ, ಮನು ಭಾಕರ್, ಲೊವ್ಲಿನಾ ಮೇಲೆ ಹೆಚ್ಚಿನ ನಿರೀಕ್ಷೆ

ಟೋಕಿಯೋ(ಜು.30): ಶುಕ್ರವಾರವಾದ ಇಂದು(ಜು.30) ಭಾರತದ ಪಾಲಿಗೆ ಶುಭವಾಗಲಿದೆಯೇ? ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ 3 ಪದಕಗಳ ನಿರೀಕ್ಷೆ ಇರಿಸಿಕೊಂಡಿದೆ. ಮಹಿಳೆಯರ ಆರ್ಚರಿ ವೈಯಕ್ತಿಕ ಸುತ್ತಿನ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.1 ದೀಪಿಕಾ ಕುಮಾರಿ, ರಷ್ಯಾದ ಕೆನಿಯಾ ಪೆರೊವಾ ವಿರುದ್ಧ ಸೆಣಸಲಿದ್ದಾರೆ. ಶುಕ್ರವಾರವೇ ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌, ಕಂಚು ಹಾಗೂ ಚಿನ್ನದ ಪದಕದ ಪಂದ್ಯಗಳು ನಡೆಯಲಿವೆ.

ಇನ್ನು, ಮಹಿಳೆಯರ 25 ಮೀ. ಏರ್‌ ಪಿಸ್ತೂಲ್‌ ಶೂಟಿಂಗ್‌ನ ಅರ್ಹತಾ ಸುತ್ತಿನ ಮೊದಲ ಹಂತದಲ್ಲಿ ಮನು ಭಾಕರ್‌ 292 ಅಂಕಗಳೊಂದಿಗೆ 5ನೇ ಸ್ಥಾನ ಪಡೆದರು. 2ನೇ ಹಂತದ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿ ತಮ್ಮ ಸ್ಥಾನ ಉಳಿಸಿಕೊಂಡರೆ ಫೈನಲ್‌ಗೆ ಪ್ರವೇಶ ಸಿಗಲಿದೆ. ಅಗ್ರ 8 ಶೂಟರ್‌ಗಳು ಫೈನಲ್‌ಗೇರಲಿದ್ದಾರೆ.

ಸೋಲು ನಂಬಲಾಗುತ್ತಿಲ್ಲ; ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಮೇರಿ ಕೋಮ್ ಪ್ರತಿಕ್ರಿಯೆ!

ಇದೇ ವೇಳೆ ಮಹಿಳೆಯರ ಬಾಕ್ಸಿಂಗ್‌ 69 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಲೊವ್ಲಿನಾ ಬೊರ್ಗೊಹೈನ್‌ಗೆ ಚೈನೀಸ್‌ ತೈಪೆಯ ಚೆನ್‌ ನೀನ್‌-ಚಿನ್‌ ಎದುರಾಗಲಿದ್ದಾರೆ. ಲೊವ್ಲಿನಾ ಸೆಮೀಸ್‌ಗೇರಿದರೆ ಪದಕ ಗೆಲ್ಲುವುದು ಖಚಿತವಾಗಲಿದೆ.

click me!