* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ಆಸೆ ಮೂಡಿಸಿರುವ ನೀರಜ್ ಚೋಪ್ರಾ
* ಭಾರತದ ತಾರಾ ಜಾವಲಿನ್ ಪಟು ಮೇಲೆ ಎಲ್ಲರ ಚಿತ್ತ
* ಅರ್ಹತಾ ಸುತ್ತಿನಲ್ಲಿ ನೀರಜ್ 86.59 ಮೀ. ದೂರಕ್ಕೆ ಜಾವೆಲಿನ್ ಎಸೆದು ಅಗ್ರಸ್ಥಾನ ಪಡೆದಿದ್ದರು
ಟೋಕಿಯೋ(ಆ.07): 100 ವರ್ಷಗಳ ಬಳಿಕ ಒಲಿಂಪಿಕ್ಸ್ ಅಥ್ಲೆಟಿಕ್ಸ್ ಭಾರತ ಪದಕದ ನಿರೀಕ್ಷೆಯಲ್ಲಿದೆ. ಶನಿವಾರ ಜಾವೆಲಿನ್ ಥ್ರೋ ಫೈನಲ್ ನಡೆಯಲಿದ್ದು, ನೀರಜ್ ಚೋಪ್ರಾ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಅರ್ಹತಾ ಸುತ್ತಿನಲ್ಲಿ ನೀರಜ್ 86.59 ಮೀ. ದೂರಕ್ಕೆ ಜಾವೆಲಿನ್ ಎಸೆದು ಅಗ್ರಸ್ಥಾನ ಪಡೆದಿದ್ದರು. ಫೈನಲ್‌ನಲ್ಲೂ ಅವರು ತಮ್ಮ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಈ ಋುತುವಿನಲ್ಲಿ ಅಗ್ರ 5 ಸ್ಥಾನಗಳಲ್ಲಿದ್ದ ಅಥ್ಲೀಟ್‌ಗಳ ಪೈಕಿ ಕೇವಲ ಇಬ್ಬರು ಮಾತ್ರ ಫೈನಲ್ ಪ್ರವೇಶಿಸಿದ್ದು, ನೀರಜ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ.
1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಾರ್ಮನ್ ಪ್ರಿಟ್‌ಚಾರ್ಡ್ 200 ಮೀ. ಓಟ ಹಾಗೂ 200 ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಆ ಪದಕಗಳನ್ನು ಇನ್ನೂ ಭಾರತದ ಹೆಸರಿನಲ್ಲೇ ಗುರುತಿಸುತ್ತಿದೆ. ಆದರೆ ಹಲವು ಸಂಶೋಧನೆಗಳು ನಡೆದಿದ್ದು, ನಾರ್ಮನ್ ಆ ಒಲಿಂಪಿಕ್ಸ್‌ನಲ್ಲಿ ಗ್ರೇಟ್ ಬ್ರಿಟನ್ ಪರ ಸ್ಪರ್ಧಿಸಿದ್ದರು ಎನ್ನಲಾಗಿದೆ. ಹೀಗಾಗಿ, ನೀರಜ್ ಪದಕ ಗೆದ್ದರೆ ಭಾರತ ಪರ ಅಥ್ಲೆಟಿಕ್ಸ್‌ನಲ್ಲಿ ಮೊದಲ ಪದಕ ಗೆದ್ದ ಇತಿಹಾಸ ಬರೆಯಲಿದ್ದಾರೆ.
ನಾವು ಕಮ್‌ಬ್ಯಾಕ್ ಮಾಡಿ, ದೇಶದ ಹೃದಯ ಗೆಲ್ಲುತ್ತೇವೆ: ಹಾಕಿ ನಾಯಕಿ ರಾಣಿ ರಾಂಪಾಲ್ ಶಪಥ
Much respect to Sand Artist Manas Kumar Sahoo who created this sand art. you have shaped the will of India.
Yes India is really waiting for 🙏
Cheer for Neeraj Chopra. 🇮🇳 pic.twitter.com/Xzymqp6XbK
ಇಂದು ಸಂಜೆ 4.30ಕ್ಕೆ ಆರಂಭವಾಗಲಿರುವ ಜಾವಲಿನ್ ಫೈನಲ್ ಸ್ಪರ್ಧೆಯ ಮೇಲೆ ಭಾರತೀಯರು ಚಿತ್ತ ನೆಟ್ಟಿದ್ದು, ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸಲಿ ಎನ್ನುವುದು ಕೋಟ್ಯಾಂತರ ಭಾರತೀಯರ ಹಾರೈಕೆಯಾಗಿದೆ.