2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಬಿಡ್ , ಐಒಸಿ ಅಧಿವೇಶನದಲ್ಲಿ ಪ್ರಧಾನಿ ಮೋದಿ ಘೋಷಣೆ!

By Suvarna News  |  First Published Oct 14, 2023, 9:53 PM IST

ನವ ಭಾರತದಲ್ಲಿ ಭಾರತಕ್ಕೆ ಅಸಾಧ್ಯ ಯಾವದೂ ಇಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿ 20236 ಒಲಿಂಪಿಕ್ಸ್ ಹಾಗೂ 2029ರ ಯೂಥ್ ಒಲಿಂಪಿಕ್ಸ್‌ ಆತಿಥ್ಯಕ್ಕೆ ಬಿಡ್ ಮಾಡುವುದಾಗಿ ಮೋದಿ ಘೋಷಿಸಿದ್ದಾರೆ.


ಮುಂಬೈ(ಅ.14) ಜಿ20 ಅಧ್ಯಕ್ಷತೆ ವಹಿಸಿದ ಭಾರತ ಯಶಸ್ವಿಯಾಗಿ ಶೃಂಗಸಭೆ ಆಯೋಜಿಸಿ ಜಗತ್ತಿಗೆ ಮಹತ್ವದ ಸಂದೇಶ ಸಾರಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಐತಿಹಾಸಿಕ ಘೋಷಣೆ ಮಾಡಿದ್ದಾರೆ. 2029ರ ಯೂಥ್ ಒಲಿಂಪಿಕ್ಸ್ ಹಾಗೂ 20236ರ ಒಲಿಂಪಿಕ್ಸ್ ಗೇಮ್ಸ್‌ ಆತಿಥ್ಯಕ್ಕೆ ಭಾರತ ಬಿಡ್ಡಿಂಗ್ ನಡೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇಂದು ಮುಂಬೈನಲ್ಲಿ ನಡೆದ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಒಲಿಂಪಿಕ್ಸ್ ಆತಿಥ್ಯ ಬಿಡ್ಡಿಂಗ್ ಖಚಿತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ(IOC) 141ನೇ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತೀಯರ ಹೆಮ್ಮೆಪಡುವ ಘೋಷಣೆ ಮಾಡಿದ್ದಾರೆ. ಭಾರತ ಒಲಿಂಪಿಕ್ಸ್ ಗೇಮ್ಸ್ ಆತಿಥ್ಯವಹಿಸಲು ಉತ್ಸುಕವಾಗಿದೆ. 140 ಕೋಟಿ ಭಾರತೀಯರ ಹೆಮ್ಮೆಯ ಹಾಗೂ ಕನಸಾಗಿರುವ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಬಿಡ್ ಮಾಡಲಿದೆ ಎಂದು ಮೋದಿ ಹೇಳಿದ್ದಾರೆ. IOC ಬೆಂಬಲದೊಂದಿಗೆ ಭಾರತ ಈ ಮಹತ್ವದ ಮೈಲಿಗಲ್ಲು ಸಾಧಿಸಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

 

ಟೀಂ ಇಂಡಿಯಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್: 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆ ಖಚಿತ

40 ವರ್ಷಗಳ ಬಳಿಕ ಭಾರತ IOC ಅಧಿವೇಶವನ್ನು ಆಯೋಜಿಸುತ್ತಿದೆ. ಇದೇ ರೀತಿ ಭಾರತ 2029ರ ಯೂಥ್ ಒಲಿಂಪಿಕ್ಸ್ ಹಾಗೂ 20236ರ ಒಲಿಂಪಿಕ್ಸ್ ಗೇಮ್ಸ್ ಆಯೋಜಿಸಲಿದೆ. IOC ನಿರಂತರ ಬೆಂಬಲ ಭಾರತಕ್ಕೆ ನೆರವಾಗಲಿದೆ ಎಂದು IOC ಅಧ್ಯಕ್ಷ ಥೋಮಸ್ ಬ್ಯಾಚ್ ಸಮ್ಮುಖದಲ್ಲೇ ಹೇಳಿದ್ದಾರೆ. ಕ್ರೀಡೆ ಎಂದರೆ ಪದಕ ಗೆಲ್ಲುವುದು ಮಾತ್ರವಲ್ಲ, ಇದೇ ರೀತಿ ಜನರ ಹೃದಯ ಗೆಲ್ಲುವುದು ಕೂಡ ಮುಖ್ಯ. ಚಾಂಪಿಯನ್‌ಗಳನ್ನು ತಯಾರು ಮಾಡಿದರೆ ಸಾಲದು, ಶಾಂತಿ ಸ್ಥಾಪಿಸುವಲ್ಲೂ ಕ್ರೀಡೆ ನೆರವಾಗಬೇಕು ಎಂದು ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಹಾರ್ದಿಕ ಸ್ವಾಗತ ಎಂದು ಹಿಂದಿಯಲ್ಲಿ ಮಾತು ಆರಂಭಿಸಿದ IOC ಅಧ್ಯಕ್ಷ ಥೋಮಸ್, ಭಾರತ ಇತ್ತೀಚೆಗೆ ಆರ್ಥಿಕತೆಯಲ್ಲಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಇದರ ಜೊತೆಗೆ ಕ್ರೀಡೆಯಲ್ಲಿ ಹೊಸ ಇತಿಹಾಸ ರಚಿಸಿದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪ್ರದರ್ಶನ ಗಮನಿಸದ್ದೇನೆ. ಯುವ ಸಮೂಹ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ವ್ಯಕ್ತವಾಗುತ್ತಿದೆ ಎಂದಿದ್ದಾರೆ.

 

Asian Games 2023: ಜೈ ಹೋ ಇಂಡಿಯಾ, ಚಿನ್ನ ಗೆದ್ದ ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಕನ್ಫರ್ಮ್‌

ಕತಾರ್, ಜೋರ್ಡಾನ್, ಮೊನಾಕೊ, ಲಕ್ಸಂಬರ್ಗ್ ಮತ್ತು ಭೂತಾನ್ ದೇಶಗಳ ಮುಖ್ಯಸ್ಥರು, ಗ್ರೇಟ್ ಬ್ರಿಟನ್ ಮತ್ತು ಲಿಕ್ಟನ್ ಸ್ಟೈನ್‌ನ ರಾಜಮನೆತನದ ಸದಸ್ಯರು ಸೇರಿದಂತೆ ಹಲವು ಒಲಿಂಪಿಕ್ ಸಮಿತಿ ಗಣ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಮೂರು ದಿನಗಳ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿವೇಶನ ಮುಂಬೈನಲ್ಲಿ ಆಯೋಜಿಸಲಾಗಿದೆ. ಅಕ್ಟೋಬರ್ 15ರಿಂದ  17ರ ತನಕ ನಡೆಯಲಿದೆ.

click me!