*XUV700 ಜಾವೆಲಿನ್ ಗೋಲ್ಡ್ ಕಾರ್ ಪಡೆದ ನೀರಜ್
*ಟ್ವೀಟ್ ಮೂಲಕ ಆನಂದ್ ಮಹೀಂದ್ರಾರಿಗೆ ಧನ್ಯವಾದ
*ನೀರಜ ಚೋಪ್ರಾ ಜತೆಗೆ ಇತರರಿಗೂ ಸಿಗಲಿದೆ ಮಹೀಂದ್ರಾ SUV!
ನವದೆಹಲಿ(ಅ. 31 ): ಮಹೀಂದ್ರಾ & ಮಹೀಂದ್ರಾ (Mahindra & Mahindra) ಅಂತಿಮವಾಗಿ ತನ್ನ ಹೊಸ XUV700 SUVಯ ವಿತರಣೆಯನ್ನು ಪ್ರಾರಂಭಿಸಿದೆ. ಮೊದಲ ಹಂತದಲ್ಲಿ ಟೋಕಿಯೊ ಒಲಿಂಪಿಕ್ಸ್ 2020 ರ ವಿಜೇತರಿಗೆ ಈ ಹೊಸ ಆವೃತ್ತಿಯ ಕಾರ್ ಹಸ್ತಾಂತರಿಸಲಾಗಿದೆ. ಪ್ಯಾರಾಲಿಂಪಿಯನ್ ಸುಮಿತ್ ಆಂಟಿಲ್ (Sumit Antil) ಅವರೂ ಕೂಡ ಈ ವಿಶೇಷ ಕಾರನ್ನು ಪಡೆದಿದ್ದರು. ಈಗ ನೀರಜ್ ಚೋಪ್ರಾ (Neeraj Chopra) ಅವರ ಮನೆಗೂ ಮಹೀಂದ್ರಾ XUV700 SUV ತಲುಪಿದೆ. ಟೋಕಿಯೊ ಒಲಿಂಪಿಕ್ಸ್ (Tokyo Olympics) ಚಿನ್ನದ ಪದಕ ವಿಜೇತರಿಗೆ ಮತ್ತು ಅವರ ಸಾಧನೆಗಳ ಗುರುತಿಸುವಿಕೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗುವ XUV700 ಜಾವೆಲಿನ್ ಗೋಲ್ಡ್ ಆವೃತ್ತಿಯನ್ನು ಆನಂದ್ ಮಹೀಂದ್ರಾ ಅವರು ಘೋಷಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ನೀರಜ್ ಚೋಪ್ರಾ ಆನಂದ ಮಹೀಂದ್ರಾರಿಗೆ ಧನ್ಯವಾದ ತಿಳಿಸಿದ್ದಾರೆ. ಜತೆಗೆ ಶೀಘ್ರದಲ್ಲೆ ಹೊಸ ಕಾರ್ ಓಡಿಸುವುದಾಗಿ ತಿಳಿಸಿದ್ದಾರೆ.
Thank you ji for the new set of wheels with some very special customisation! I'm looking forward to taking the car out for a spin very soon. 🙂 pic.twitter.com/doNwgOPogp
— Neeraj Chopra (@Neeraj_chopra1)undefined
Customised Carನಲ್ಲಿ ಏನು ವಿಶೇಷ?
ನೀರಜ್ ಚೋಪ್ರಾರ ಮಹೀಂದ್ರಾ XUV700 ಜಾವೆಲಿನ್ ಗೋಲ್ಡ್ ಆವೃತ್ತಿಯು ಮಿಡ್ನೈಟ್ ಕಪ್ಪು ಬ್ಲಾಕ್ (Midnight Black) ಬಣ್ಣದೊಂದಿಗೆ ಕಂಗೊಳಿಸುತ್ತಿದೆ. ಹೊರಭಾಗದಲ್ಲಿರುವ ಕ್ರೋಮ್ (Chrome Elements) ಚಿನ್ನ ಸೇರಿಸುವುದರ ಮೂಲಕ ತಯಾರಿಸಲಾಗಿದೆ. ಹೊಸ ಮಹೀಂದ್ರಾ ಲೋಗೋ ಈಗ ಸ್ಯಾಟಿನ್ ಚಿನ್ನದ ಲೇಪನವನ್ನು (Satin Gold plating) ಹೊಂದಿದೆ.
ನೀರಜ್ ಚೋಪ್ರಾ ಹೆಸರಲ್ಲಿ ಮಾರುಕಟ್ಟೆಗೆ ಬಂದ ಜೆರ್ಸಿ, ನೀರಿನ ಬಾಟಲಿ!
ಚೋಪ್ರಾ ಅವರ 87.58 ಮೀಟರ್‌ಗಳ ದಾಖಲೆ ಮುರಿಯುವ ಜಾವೆಲಿನ್ ಎಸೆತವದ ಸಂಕೇತವಾಗಿ ವಿಶೇಷವಾದ ಸ್ಟಿಕ್ಕರ್ ಸೇರಿಸಲಾಗಿದೆ . ವಾಸ್ತವವಾಗಿ, ಚೋಪ್ರಾ ತಮ್ಮ XUV700 ಗೋಲ್ಡ್ ಆವೃತ್ತಿಯನ್ನು ನೋಂದಾಯಿಸುವಾಗ ನಾಲ್ಕು ಸಂಖ್ಯೆಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಕೊನೆಯದಾಗಿ, ಹೊಸ ಗೋಲ್ಡ್ ಆವೃತ್ತಿಯಲ್ಲಿ ಚಿನ್ನದ ದಾರಗಳಿಂದ ಸೀಟುಗಳನ್ನು ಹೊಲಿಯಲಾಗಿದೆ. ವಿಶೇಷ ಆವೃತ್ತಿಯ ಈ ಮಾದರಿಯನ್ನು ಮಹೀಂದ್ರಾ & ಮಹೀಂದ್ರಾದ ಮುಖ್ಯ ವಿನ್ಯಾಸ ಅಧಿಕಾರಿ ಪ್ರತಾಪ್ ಬೋಡೆ (Prata Bode) ಅವರು ಕಸ್ಟಮೈಸ್ (Customise) ಮಾಡಿದ್ದಾರೆ.
ನೀರಜ್ ಚೋಪ್ರಾ ಸೇರಿ ದಾಖಲೆ 11 ಕ್ರೀಡಾಪಟುಗಳಿಗೆ ಖೇಲ್‌ರತ್ನ!
ಚೋಪ್ರಾ ಮತ್ತು ಆಂಟಿಲ್ ಹೊರತಾಗಿ, ಆನಂದ್ ಮಹೀಂದ್ರಾದ XUV700 ಒಲಿಂಪಿಕ್ ಗೋಲ್ಡ್ ಆವೃತ್ತಿಯನ್ನು ಐತಿಹಾಸಿಕ ಗೆಲುವು ಸಾಧಿಸಿದ ಅವನಿ ಲೇಖರಾ (Avani lekhara) ಅವರಿಗೂ ನೀಡಲಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಅವನಿ ಲೇಖರಾ. ಮಹೀಂದ್ರಾ ಹೊರತುಪಡಿಸಿ, ರೆನಾಲ್ಟ್, ಎಂಜಿ ಮೋಟಾರ್ ಇಂಡಿಯಾ ಮತ್ತು ಟಾಟಾ ಮೋಟಾರ್ಸ್ ಸೇರಿದಂತೆ ಇತರ ಕಾರು ತಯಾರಕರು ಟೋಕಿಯೊ 2020 ರ ಭಾರತೀಯ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಆಟಗಾರರಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವ ಯೋಜನೆಯನ್ನು ಪ್ರಕಟಿಸಿದ್ದಾರೆ.
ವಿಶ್ವದಾಖಲೆ ನಿರ್ಮಿಸಿ ಸುಮಿತ್ ಆಂಟಿಲ್!
ಒಲಂಪಿಕ್ಸ್‌ನ F64 ವಿಭಾಗದಲ್ಲಿ ವಿಶ್ವದ ನಂ.1 ಶ್ರೇಯಾಂಕಿತ ಜಾವೆಲಿನ್ ಥ್ರೋ ಪಟು ಸುಮಿತ್ ಆಂಟಿಲ್ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಗೆದ್ದಿದ್ದರು. ಫೈನಲ್ ಸ್ಪರ್ಧೆಯಲ್ಲಿ ಮೊದಲ ಪ್ರಯತ್ನದಲ್ಲೇ 66.95 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಆಂಟಿಲ್, ಬಳಿಕ ಎರಡನೇ ಪ್ರಯತ್ನದಲ್ಲಿ 68.08 ಮೀಟರ್ ತಮ್ಮದೇ ದಾಖಲೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡಿದ್ದರು. ಇನ್ನು 5ನೇ ಪ್ರಯತ್ನದಲ್ಲಿ 68.55 ಮೀಟರ್ ದೂರ ಎಸೆದು ಮೂರನೇ ಬಾರಿಗೆ ವಿಶ್ವದಾಖಲೆ ನಿರ್ಮಿಸಿ ಚಿನ್ನದ ಪದಕ ಖಚಿತ ಪಡಿಕೊಂಡರು.
ಜಾವೆಲಿನ್ ಥ್ರೋ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಈಗ ವಿಶ್ವ ನಂ.2
ಚಿನ್ನದ ಹುಡುಗ ನೀರಜ್ ಚೋಪ್ರಾ!
ಟೋಕಿಯೋ ಒಲಿಂಪಿಕ್ಸ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಐತಿಹಾಸಿಕ ಚಿನ್ನ ಗೆದ್ದ ಬಳಿಕ ಭಾರತದ ನೀರಜ್ ಚೋಪ್ರಾ ವಿಶ್ವ ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಏರಿದ್ದರು. 23 ವರ್ಷದ ನೀರಜ್ ರ‍್ಯಾಂಕಿಂಗ್‌ನಲ್ಲಿ 14 ಸ್ಥಾನಗಳ ಏರಿಕೆ ಕಂಡಿದ್ದು, ಮೊದಲ ಸ್ಥಾನದಲ್ಲಿರುವ ಜರ್ಮನಿಯ ಜೊಹಾನಸ್ ವೆಟ್ಟರ್‌ಗಿಂತ ಕೇವಲ 81 ಅಂಕಗಳಿಂದ ಹಿಂದಿದ್ದಾರೆ. ವೆಟ್ಟರ್ 1396 ಅಂಕಗಳನ್ನು ಹೊಂದಿದ್ದರೆ, ನೀರಜ್ 1315 ಅಂಕಗಳನ್ನು ಪಡೆದಿದ್ದಾರೆ. ವೆಟ್ಟರ್‌ರಿಂದ ತೀವ್ರ ಪೈಪೋಟಿ ನಿರೀಕ್ಷಿಸಿದ್ದ ನೀರಜ್ ಒಲಿಂಪಿಕ್ಸ್ ಫೈನಲ್‌ನಲ್ಲಿ 87.57 ಮೀ. ದೂರಕ್ಕೆ ಜಾವೆಲಿನ್ ಎಸೆದು ಚಿನ್ನ ಗೆದ್ದರೆ, ವೆಟ್ಟರ್ 9ನೇ ಸ್ಥಾನ ಪಡೆಯಲಷ್ಟೇ ಸಫಲರಾಗಿದ್ದರು.