ಒಲಿಂಪಿಕ್ಸ್‌ ಅಧಿಕೃತ ಆರಂಭಕ್ಕೂ ಮುನ್ನವೇ ಭಾರತಕ್ಕೆ ಗುಡ್‌ನ್ಯೂಸ್‌, ಆರ್ಚರಿಯಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶ!

By Santosh Naik  |  First Published Jul 25, 2024, 9:58 PM IST

ಪ್ಯಾರಿಸ್‌ ಒಲಿಂಪಿಕ್ಸ್‌ ಅಧಿಕೃತವಾಗಿ ಆರಂಭವಾಗುವ ಮುನ್ನವೇ ಟೀಮ್‌ ಇಂಡಿಯಾಗೆ ಬಿಗ್‌ ನ್ಯೂಸ್‌ ಸಿಕ್ಕಿದೆ. ಗುರುವಾರ ನಡೆದ ಆರ್ಚರಿ ರಾಂಕಿಂಗ್‌ ರೌಂಡ್‌ನಲ್ಲಿ ಟೀಮ್‌ ಇಂಡಿಯಾ ಕ್ವಾರ್ಟರ್‌ ಫೈನಲ್‌ಗೇರಲು ಯಶಸ್ವಿಯಾಗಿದೆ.


ಪ್ಯಾರಿಸ್‌ (ಜು.25): ಒಲವಿನ ನಗರಿ ಪ್ಯಾರಿಸ್‌ನಲ್ಲಿ ಈ ಬಾರಿಯ ಒಲಿಂಪಿಕ್ಸ್‌ ಅಧಿಕೃತವಾಗಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಗುಡ್‌ನ್ಯೂಸ್ ಸಿಕ್ಕಿದೆ. ಗುರುವಾರ ನಡೆದ ಆರ್ಚರಿ ರಾಂಕಿಂಗ್‌ ರೌಂಡ್‌ನಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡ ನೇರವಾಗಿ ಕ್ವಾರ್ಟರ್‌ಫೈನಲ್‌ಗೇರಲು ಯಶಸ್ವಿಯಾಗಿದೆ. ಧೀರಜ್‌, ತರುಣ್‌ದೀಪ್‌ ಹಾಗೂ ಪ್ರವೀಣ್‌ ಇದ್ದ ಭಾರತ ಪುರುಷರ ಆರ್ಚರಿ ಟೀಮ್‌ 2013 ಅಂಕ ಪಡೆದು ಮೂರನೇ ಸ್ಥಾನ ಪಡೆದುಕೊಂಡು ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು. ಇನ್ನು ಅಂಕಿತಾ ಭಕತ್‌, ಭಜನ್‌ ಕೌರ್‌ ಹಾಗೂ ದೀಪಿಕಾ ಕುಮಾರಿ ಇದ್ದ ಮಹಿಳಾ ತಂಡ 1983 ಅಂಕ ಸಂಪಾದನೆ ಮಾಡಿ ರಾಂಕಿಂಗ್‌ ರೌಂಡ್‌ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡು ಕ್ವಾರ್ಟರ್‌ಫೈನಲ್‌ ಪ್ರವೇಶ ಪಡೆದುಕೊಂಡಿತು. ಜುಲೈ 28ಕ್ಕೆ ಮಹಿಳಾ ತಂಡದ ಕ್ವಾರ್ಟರ್‌ಫೈನಲ್‌ ಪಂದ್ಯ ನಡೆಯಲಿದ್ದು, ಫ್ರಾನ್ಸ್‌ ಅಥವಾ ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದೆ. ಪುರುಷರ ತಂಡದ ಕ್ವಾರ್ಟರ್‌ಫೈನಲ್‌ ಜುಲೈ 29 ರಂದು ನಡೆಯಲಿದ್ದು, ಇವರಿಗೂ ಕೂಡ ಎದುರಾಳಿ ಇನ್ನಷ್ಟೇ ನಿರ್ಧಾರವಾಗಬೇಕಿದೆ. ಇನ್ನು ಧೀರಜ್‌ ಹಾಗೂ ಅಂಕಿತಾ ಭಕತ್‌ ಇದ್ದ ಮಿಶ್ರ ಟೀಮ್‌ ಪ್ರಿಕ್ವಾಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ.ಆಗಸ್ಟ್‌ 2 ರಂದು ಪ್ರಿಕ್ವಾಟರ್‌ಫೈನಲ್‌ ಪಂದ್ಯದಲ್ಲಿ ಇಂಡೋನೇಷ್ಯಾ ತಂಡದ ಸವಾಲನ್ನು ಭಾರತ ತಂಡ ಎದುರಿಸಲಿದೆ.

ಪುರುಷರ ವೈಯಕ್ತಿಕ ವಿಭಾಗದಲ್ಲಿ ಧೀರಜ್‌ ನಾಲ್ಕನೇ ಸ್ಥಾನ ಪಡೆದರೆ, ತರುಣ್‌ದೀಪ್‌ 14, ಹಾಗೂ ಪ್ರವೀಣ್‌ 39ನೇ ಸ್ಥಾನ ಪಡೆದರು. ಸಾಮಾನ್ಯವಾಗಿ ವೈಯಕ್ತಿಕ ವಿಭಾಗದ ರಾಂಕಿಂಗ್‌ ರೌಂಡ್‌ನಲ್ಲಿ ಉತ್ತಮ ಸ್ಥಾನ ಪಡೆದಷ್ಟು ಅವರಿಗೆ ಸುಲಭದ ಎದುರಾಳಿಗಳು ಸಿಗುತ್ತಾರೆ.

Tap to resize

Latest Videos

ಮಹಿಳಾ ವಿಭಾಗದಲ್ಲಿ ಅಂಕಿತಾ ಭಕತ್‌ 11ನೇ ಸ್ಥಾನ ಪಡೆದರೆ, ಭಜನ್‌ ಕೌರ್‌ ಹಾಗೂ ದೀಪಿಕಾ ಕುಮಾರಿ ಕ್ರಮವಾಗಿ 22 ಹಾಗೂ 23ನೇ ಸ್ಥಾನ ಪಡೆದುಕೊಂಡಿದ್ದಾರೆ. ಜುಲೈ 30 ರಂದು ನಡೆಯಲಿರುವ ಎಲಿಮಿನೇಷನ್‌ ಸುತ್ತಿನಲ್ಲಿ ಅಂಕಿತಾ ಭಕತ್‌, ಪೋಲೆಂಡ್‌ನ ವೊಯಲೆಟ್ಟಾ ಮೈಸ್‌ಜೋರ್‌ರನ್ನು ಎದುರಿಸಲಿದ್ದರೆ, ಭಜನ್‌ ಕೌರ್‌, ಇಂಡೋನೇಷ್ಯಾದ ಸೈಫಾ ನಿರ್ಫಿಫಾ ಕಮಲ್‌ರನ್ನು ಎದುರಿಸಲಿದ್ದಾರೆ. ಜುಲೈ 31 ರಂದು ದೀಪಿಕಾ ಕುಮಾರಿ ಈಸ್ಟೋನಿಯಾದ ರೀನಾ ಪರ್ನಾಟ್‌ರನ್ನು ಎದುರಿಸಲಿದ್ದಾರೆ.

click me!