ಇದೇ ದಿನ.. ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ ಚಿನ್ನ ಗೆದ್ದು 13 ವರ್ಷ

By Suvarna News  |  First Published Aug 11, 2021, 4:41 PM IST

* ಅಭಿನವ್ ಬಿಂದ್ರಾ ಚಿನ್ನದ ಸಾಧನೆ ಮಾಡಿ ಹದಿಮೂರು ವರ್ಷ
* ಈ ಬಾರಿಯ ಓಲಿಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ  ಚಿನ್ನದ ಸಾಧನೆ
* ವೈಯಕ್ತಿಕ  ವಿಭಾಗದಲ್ಲಿ ಚಿನ್ನ ತಂದಿದ್ದ ಅಭಿನವ್ ಬಿಂದ್ರಾ


ನವದೆಹಲಿ(ಆ. 11)   ಈ ಬಾರಿಯ ಓಲಿಂಪಿಕ್ಸ್ ನಲ್ಲಿ  ಹಿಂದೆಂದಿಗಿಂತ ಉತ್ತಮ ಸಾಧನೆ ಮಾಡಿದ  ನಮ್ಮ ಕ್ರೀಡಾಪಟುಗಳ ಸಾಧನೆಯನ್ನು ಇಡೀ ರಾಷ್ಟ್ರವೇ ಕೊಂಡಾಡುತ್ತಿದೆ. ಕ್ರೀಡಾಪಟುಗಳ ಸಾಧನೆಗೆ ಎಲ್ಲ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಜತೆಗೆ ಇತಿಹಾಸವನ್ನು ಒಂದು ಸ್ವಲ್ಪ ಮೆಲಕು ಹಾಕಬೇಕಾಗುತ್ತದೆ.

ಸರಿಯಾಗಿ 13 ವರ್ಷದ ಹಿಂದೆ  ಅಭಿನವ ಬಿಂದ್ರಾ  ಭಾರತದ ಪರವಾಗಿ ಮೊಟ್ಟ ಮೊದಲ ಚಿನ್ನದ ಪದಕ(ವೈಯಕ್ತಿಕ)  ಸಾಧನೆ ಮಾಡಿದ್ದರು.  2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ  10  ಮೀಟರ್ ಏರ್ ಶೂಟ್ ನಲ್ಲಿ ಬಿಂದ್ರಾ ಚಿನ್ನಕ್ಕೆ ಮುತ್ತಿಟ್ಟಿದ್ದರು. 

Tap to resize

Latest Videos

undefined

ಭಾರತದಕ್ಕೆ ಚಿನ್ನದ ಪದಕವನ್ನು ಅಭಿನವ್ ಬಿಂದ್ರಾ ಗೆಲ್ಲಿಸಿಕೊಟ್ಟಿದ್ದರು.   ಕೊನೆಯ ಶೂಟ್ ಗೂ ಮುನ್ನ ಬಿಂದ್ರಾ ಫಿನ್ ಲ್ಯಾಂಡ್  ಹೆನ್ರಿ ಹರೀಕೇನ್  ಜತೆ ಸಮನಾದ ಅಂಕ ಹಂಚಿಕೆ ಮಾಡಿಕೊಂಡಿದ್ದರು.  ಕೊನೆಯ ಶೂಟ್ ನಲ್ಲಿ  10.8  ಗಳಿಕೆ ಮಾಡದೇ ಇದ್ದರೆ ಚಿನ್ನದ ಪದಕ ನಮ್ಮದಾಗುತ್ತಿರಲಿಲ್ಲ.

ಚಿನ್ನದ ಪದಕ ಗೆದ್ದಿದ್ದನ್ನು ನೋಡಲು ಮಿಲ್ಖಾ ಸಿಂಗ್

2000 ನೇ ಇಸವಿಯ ಸಿಡ್ನಿ ಒಲಿಂಪಿಕ್ಸ್ ನಲ್ಲಿಯೂ ಫೈನಲ್ ಗೆ ಬಿಂದ್ರಾ ಪ್ರವೇಶ ಪಡೆದಿದ್ದರು. ಬೀಜಿಂಗ್ ಒಲಿಂಪಿಕ್ಸ್  ನಲ್ಲಿ ಚಿನ್ನ ಸಾಧನೆ ಮಾಡುವವರೆಗೂ ಅವರ ಜರ್ನಿ ಮುಂದುವರಿಯಿತು.

2017  ರಲ್ಲಿ ಬಿಂದ್ರಾ ಅಧಿಕೃತವಾಗಿ ತಮ್ಮ ಶೂಟಿಂಗ್  ಕ್ಷೇತ್ರದಿಂದ ನಿವೃತ್ತಿ ಪಡೆದುಕೊಂಡರು.  ರಿಯೋ ಒಲಿಂಪಿಕ್ಸ್  2016  ರಲ್ಲಿ  ಬಿಂದ್ರಾ ಕೊಂಚದರಲ್ಲಿ ಪದಕ ವಂಚಿತರಾದರು.  ಜಾವಲಿನ್ ಥ್ರೋ ದಲ್ಲಿ ನೀರಜ್ ಚೋಪ್ರಾ ಈ ಬಾರಿ ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಅವರ ಸಾಧನೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ.

 

click me!