ಒಲಿಂಪಿಕ್ಸ್ ಜ್ಯೋತಿ ಟೋಕಿಯೋಗೆ ಆಗಮನ

Kannadaprabha News   | Asianet News
Published : Jul 10, 2021, 09:10 AM IST
ಒಲಿಂಪಿಕ್ಸ್ ಜ್ಯೋತಿ ಟೋಕಿಯೋಗೆ ಆಗಮನ

ಸಾರಾಂಶ

* ಟೋಕಿಯೋ ನಗರಕ್ಕೆ ಒಲಿಂಪಿಕ್ ಜ್ಯೋತಿ ಆಗಮನ * ಕೋವಿಡ್‌ ಕಾರಣ ಟೋಕಿಯೋ ನಗರದಲ್ಲಿ ಒಲಿಂಪಿಕ್ಸ್‌ ಜ್ಯೋತಿ ರಿಲೆಯನ್ನು ನಿಷೇಧಿಸಲಾಗಿದೆ. * ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಜುಲೈ 23ರಿಂದ ಆರಂಭ

ಟೋಕಿಯೋ(ಜು.10): ವಿಶ್ವದ ವಿವಿಧೆಡೆ ಸಂಚಾರ ನಡೆಸಿದೆ ಒಲಿಂಪಿಕ್ಸ್‌ ಜ್ಯೋತಿಯು ಕ್ರೀಡಾಕೂಟ ನಡೆಯಲಿರುವ ಟೋಕಿಯೋ ನಗರಕ್ಕೆ ಶುಕ್ರವಾರ ಆಗಮಿಸಿತು. ಈ ವೇಳೆ ನಡೆದ ಸರಳ ಸಮಾರಂಭದಲ್ಲಿ ಜ್ಯೋತಿಯನ್ನು ಅನಾವರಣಗೊಳಿಸಲಾಯಿತು.

ಟೋಕಿಯೊ ಗೌರ್ನರ್‌ಗೆ ಜ್ಯೋತಿಯನ್ನು ಇದೇ ವೇಳೆ ಹಸ್ತಾಂತರಿಸಲಾಯಿತು. ಕೋವಿಡ್‌ ಕಾರಣ ಟೋಕಿಯೋ ನಗರದಲ್ಲಿ ಒಲಿಂಪಿಕ್ಸ್‌ ಜ್ಯೋತಿ ರಿಲೆಯನ್ನು ನಿಷೇಧಿಸಲಾಗಿದೆ. ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಿ ಆಗಸ್ಟ್ 08ರವರೆಗೆ ನಡೆಯಲಿದೆ.

ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ: ಖಾಲಿ ಕ್ರೀಡಾಂಗಣದಲ್ಲಿ ಒಲಿಂಪಿಕ್ಸ್..!

ಒಲಿಂಪಿಕ್ಸ್‌ ಆರಂಭಕ್ಕೆ ಇನ್ನೆರೆಡು ವಾರ ಬಾಕಿ ಇದ್ದು, ಕ್ರೀಡಾಂಗಣಕ್ಕೆ ಜ್ಯೋತಿ ಪ್ರವೇಶಿಸುವ ದಿನಾಂಕವನ್ನು ಇನ್ನು ಪ್ರಕಟಿಸಿಲ್ಲ. ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಗುರುವಾರವಷ್ಟೇ ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ ಒಲಿಂಪಿಕ್ಸ್‌ ನಡೆಯಲಿರುವ ಕ್ರೀಡಾಂಗಣಗಳಿಗೆ ಪ್ರೇಕ್ಷಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆಯೋಜಕರು ಪ್ರಕಟಿಸಿದರು.

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ