ಒಲಿಂಪಿಕ್ಸ್‌ನಲ್ಲಿ ಮೊದಲ ಸಲ ತೃತೀಯ ಲಿಂಗಿ ಅಥ್ಲೀಟ್‌ ಸ್ಪರ್ಧೆ!

By Kannadaprabha News  |  First Published Jun 22, 2021, 11:31 AM IST

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆಯಲು ಸಜ್ಜಾದ ತೃತೀಯ ಲಿಂಗಿ

* ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಮೊದಲ ತೃತೀಯ ಲಿಂಗಿ ಲಾರೆಲ್‌ ಹುಬ್ಬಾರ್ಡ್

* ಲಾರೆಲ್‌ ಹುಬ್ಬಾರ್ಡ್ ಮಹಿಳಾ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಸ್ಪರ್ಧೆ


ವೆಲ್ಲಿಂಗ್ಟನ್(ಜೂ.22)‌: ಇದೇ ಮೊದಲ ಬಾರಿಗೆ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ತೃತೀಯ ಲಿಂಗಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ನ್ಯೂಜಿಲೆಂಡ್‌ನ 43 ವರ್ಷದ ವೇಟ್‌ಲಿಫ್ಟರ್‌ ಲಾರೆಲ್‌ ಹುಬ್ಬಾರ್ಡ್‌, ಮಹಿಳೆಯರ 87+ ಕೆ.ಜಿ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 16ನೇ ಸ್ಥಾನದಲ್ಲಿರುವ ಲಾರೆಲ್‌, 2018ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲೂ ಸ್ಪರ್ಧಿಸಿದ್ದರು.

ಪುರುಷನಾಗಿ ಜನಿಸಿದ ಲಾರೆಲ್‌, ತಮ್ಮ 35ನೇ ವಯಸ್ಸಿನಲ್ಲಿ ಲಿಂಗ ಬದಲಾವಣೆ ಮಾಡಿಕೊಂಡಿದ್ದರು. ಪುರುಷ ಕ್ರೀಡಾಪಟುವಾಗಿ ವೇಟ್‌ಲಿಫ್ಟಿಂಗ್‌ನಲ್ಲಿ ವೃತ್ತಿಬದುಕು ಆರಂಭಿಸಿದ್ದ ಲಾರೆಲ್‌, ಕಳೆದ 6-7 ವರ್ಷಗಳಿಂದ ಮಹಿಳೆಯರ ಸ್ಪರ್ಧೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ತೃತೀಯ ಲಿಂಗಿಗಳ ಸ್ಪರ್ಧೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ನಿಗದಿಪಡಿಸಿರುವ ಎಲ್ಲಾ ಮಾನದಂಡಗಳನ್ನೂ ಲಾರೆಲ್‌ ಸಾಧಿಸಿದ್ದಾರೆ.

Tap to resize

Latest Videos

ಟೋಕಿಯೋ ಒಲಿಂಪಿಕ್ಸ್‌: ಪ್ರತಿ ಸ್ಟೇಡಿಯಂಗೆ 10,000 ಪ್ರೇಕ್ಷಕರಿಗೆ ಪ್ರವೇಶ

ಮಾನದಂಡಗಳೇನು?

1. ತಾನು ಮಹಿಳೆ ಎಂದು ಘೋಷಿಸಿಕೊಂಡ ಬಳಿಕ ಕನಿಷ್ಠ 4 ವರ್ಷ ಅದನ್ನು ಬದಲಿಸುವಂತಿಲ್ಲ

2. ನಿರ್ದಿಷ್ಟ ಪ್ರಮಾಣಕ್ಕಿಂತ ಕಡಿಮೆ ಟೆಸ್ಟೋಸ್ಟೆರಾನ್‌ ಹಾರ್ಮೋನ್‌ಗಳು ಅಥ್ಲೀಟ್‌ನ ದೇಹದಲ್ಲಿರಬೇಕು.

3. ಟೆಸ್ಟೋಸ್ಟೆರಾನ್‌ ಹಾರ್ಮೋನ್‌ಗಳ ಪ್ರಮಾಣ ಒಂದು ವರ್ಷದ ಅವಧಿಯಲ್ಲಿ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಾಗುವಂತಿಲ್ಲ.
 

click me!